ಬೆಳಗಾವಿ

ಆಹಾರವೇ ಆರೋಗ್ಯದ ಬುನಾದಿ

Published On :

ಸಿಂದಗಿ:  ಪ್ರಕೃತಿ ಚಿಕಿತ್ಸೆ ಔಷಧಿ ರಹಿತ ಚಿಕಿತ್ಸೆಯಾಗಿದ್ದು, ಇಲ್ಲಿ ಜಲ, ಮಣ್ಣಿನ ಸ್ನಾನ, ಆಕ್ಯೂಪಂಚರ್, ಬಿಂದು ಒತ್ತಡ, ಡಯಟ್, ಮಸಾಜ್, ಉಪವಾಸ, ಸುಗಂಧ ದೃವ್ಯ, ಕ್ರೋಮೋ ಹಾಗೂ ಆಯಸ್ಕಾಂತ ಚಿಕಿತ್ಸೆಗಳನ್ನು ನೀಡಲಾಗುತ್ತದೆ ಎಂದು ಬಿಜಾಪುರ ಜಿಲ್ಲಾ ಆಸ್ಪತ್ರೆಯ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ವಿಭಾಗದ ಡಾ.ಮಹೇಶ ನಾವದಗಿ ಹೇಳಿದರು.
ಬುಧವಾರ ಸಂಜೆ ಪಟ್ಟಣದ ಸಾರಂಗಮಠದಲ್ಲಿ ಚನ್ನವೀರ ಪ್ರತಿಷ್ಠಾನ ಹಮ್ಮಿಕೊಂಡ 212ನೇ ಸದ್ವಿಚಾರಗೋಷ್ಠಿ ಹಾಗೂ ಪ್ರತಿಷ್ಠಾನದ ಸಹಯೋಗದಲ್ಲಿ ತಾಲೂಕು ಕಸಾಪ ಏರ್ಪಡಿಸಿದ್ದ ಡಾ.ರಾಮರಾವ ಮಲ್ಲಾರಿರಾವ ನಾಡಗೌಡ ಸ್ಮರಣಾರ್ಥ ದತ್ತಿ ನಿಧಿ ಕಾರ್ಯಕ್ರಮದಲ್ಲಿ ಸ್ಥೂಲಕಾಯ ಮತ್ತು ಮಂಡಿನೋವು ಕುರಿತು ಅವರು ಉಪನ್ಯಾಸ ನೀಡಿದರು.
ಮಂಡಿನೋವಿಗೆ ಸ್ಥೂಲಕಾಯವೇ ಪ್ರಮುಖ ಕಾರಣವಾಗಿದೆ. ಬದಲಾದ ಜೀವನಶೈಲಿ ಹಾರ್ಮೋನುಗಳ ಸ್ರಾವದ ಅಸಮತೋಲನ, ಮಾನಸಿಕ ಒತ್ತಡ ವ್ಯಾದಿ, ಔಷಧಿಗಳ ದುಷ್ಪರಿಣಾಮ, ಮಾದಕ ದೃವ್ಯ ಬೊಜ್ಜಿಗೆ ಕಾರಣವಾಗಿದೆ. ಇದಕ್ಕೆ ಪರಿಹಾರವೆಂದರೆ ತೂಕ ಇಳಿಸುವ ಮನಸ್ಸು ಮತ್ತು ಪ್ರಯತ್ನ. ಅಲ್ಲದೇ ಆಹಾರವು ಆರೋಗ್ಯದ ಬುನಾದಿಯಾಗಿದ್ದು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ನಾರಿನಂಶ ಹಾಗೂ ಪೌಷ್ಠಿಕಾಂಶವುಳ್ಳ ಸಮತೋಲನ ಆಹಾರ ಪದ್ಧತಿಯಿಂದ ಬೊಜ್ಜುತನದಿಂದ ಪಾರಾಗಬಹುದು ಎಂದರು.
ಸಾನ್ನಿಧ್ಯ ವಹಿಸಿದ ಶ್ರೀಮಠದ ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಸೋಮಾರಿತನ ತೊರೆದು ಕಾಯಕ ನಿಷ್ಠರಾಗಿ ಬಾಳಿದರೆ ಸ್ಥೂಲಕಾಯ ಮತ್ತು ಆನಾರೋಗ್ಯದಿಂದ ದೂರವಿರಬಹುದು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗುಲ್ಬರ್ಗಾ ವಿವಿಯಿಂದ ಗಣಿತ ವಿಷಯದಲ್ಲಿ ಪಿಎಚ್ಡಿ ಪದವಿ ಪಡೆದ ಜಿ.ಪಿ. ಪೋರವಾಲ ಹಾಗೂ ವಿ.ವಿ. ಸಾಲಿಮಠ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಎಂ.ಡಿ. ಪಾಟೀಲ ಅವರನ್ನು ಪ್ರಭುಸಾರಂಗದೇವ ಶ್ರೀಗಳು ಸನ್ಮಾನಿಸಿದರು.
ದತ್ತಿ ದಾನಿ ಡಾ.ಬಿ.ಆರ್. ನಾಡಗೌಡ, ಕಸಾಪ ತಾಲೂಕು ಅಧ್ಯಕ್ಷ ಚಂದ್ರಶೇಖರ ದೇವರಡ್ಡಿ ಮಾತನಾಡಿದರು. ನೀಲಾಂಬಿಕ ಕಟ್ಟಿ ಪ್ರಾರ್ಥಿಸಿದರು. ಡಾ.ನಾಗರಾಜ ಮುರಗೋಡ ಸ್ವಾಗತಿಸಿದರು. ಪ್ರೊ, ಬಸವರಾಜ ಗೋಟಕಿಂಡಿಮಠ ನಿರೂಪಿಸಿದರು. ಸಿದ್ದಲಿಂಗ ಕಿಣಗಿ ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.