ಬೆಳಗಾವಿ

ನಗರಸೇವಕರಿಗೆ ಸನ್ಮಾನ

Published On :

ಬೆಳಗಾವಿ:   ನೂತನವಾಗಿ ಆಯ್ಕೆಯಾದ ನಗರಸೇವಕರು ವಾರ್ಡಿನ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿರಬೇಕು. ಧರ್ಮ, ಭಾಷೆಂು ರಾಜಕೀಂುವನ್ನು ಬದಿಗಿಟ್ಟು ಜನರ ಸಮಸ್ಯೆಗೆ ಸ್ಪಂದಿಸುವಂತಾಗಬೇಕು ಎಂದು ಶೆಟ್ಟಿ ಬೀದಿ ರಹವಾಸಿ ಸಂಘದ ಸದಸ್ಯ ಕಲ್ಯಾಣರಾವ ಮುಚಳಂಬಿ ಹೇಳಿದ್ದಾರೆ.
ಮಂಗಳವಾರ ನಗರದ ಶೆಟ್ಟಿಗಲ್ಲಿ ರಹವಾಸಿ ಸಂಘದ ವಾರ್ಷಿಕ ಸಭೆ ಮತ್ತು ನೂತನ ನಗರಸೇವಕರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಾರ್ಡ್ ನಂ.37 ಮತ್ತು 38 ರ ವ್ಯಾಪ್ತಿಂು ನಗರಸೇವಕರು ಈ ಭಾಗದ ನಾಗರಿಕ ಸಮಸ್ಯೆಗೆ ಸ್ಪಂದಿಸುವುದಾಗಬೇಕು. ಮೂಲಭೂತ ಸೌಕಂರ್ುಗಳ ಪೂರೈಕೆಗೆ ಹೆಚ್ಚಿನ ಗಮನಹರಿಸಬೇಕು ಎಂದು ಹೇಳಿದರು.   ಈ ಸಂದರ್ಭದಲ್ಲಿ ನೂತನ ನಗರಸೇವಕರಾದ ಮತೀನ್ ಶೇಖ ಅಲಿ,  ಪುಂಡಲೀಕ ಪರೀಟ ಹಾಗೂ ಹೆಸ್ಕಾಂ ಸಹಾಂುಕ ಅಭಿಂುಂತರ ನಾಗರಾಜ ಪಾಟೀಲ ಅವರಿಗೆ ಸನ್ಮಾನಿಸಲಾಯಿತು.  ಶೆಟ್ಟಿಗಲ್ಲಿ ರಹವಾಸಿ ಸಂಘದ ಅಧ್ಯಕ್ಷ ಮಹಾಂತೇಶ ಗದ್ದಿಹಳ್ಳಿಶೆಟ್ಟಿ, ಕಾಂರ್ುದರ್ಶಿ ಹಾರೂನ್ ಆಗಾ, ಶಿವಾಜಿ ಕಿಲ್ಲೇಕರ, ವಿಜಂು ಜಾಧವ, ಸಂಜು ನಾಯಿಕ, ನಂದು ನಾಗೋರಿ, ರಾಜು ಶೆಟ್ಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.