ರಾಮೇಶ್ವರ ಏತ ನೀರಾವರಿ ಂೋಜನೆಗೆ ಚಾಲನೆ
ಮೂಡಲಗಿ: ಗೋಕಾಕ, ರಾಮದುರ್ಗ ಮತ್ತು ಸವದತ್ತಿ ತಾಲೂಕುಗಳ ಹಳ್ಳಿಗಳಿಗೆ ನೀರಾವರಿ ಕಲ್ಪಿಸಿಕೊಡುವ ರಾಮೇಶ್ವರ ಏತ ನೀರಾವರಿ ಂೋಜನೆಂು ಕಾಮಗಾರಿ ಅನುಷ್ಠಾನಕ್ಕೆ ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಅವರ ಹೋರಾಟವೇ ಕಾರಣ. ಅವರ ಶ್ರಮದಿಂದಾಗಿ ಈ ಂೋಜನೆ ಇಂದು ಪೂರ್ಣಗೊಳ್ಳಲು ಕಾರಣ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಅರಳಿಮಟ್ಟಿಂುಲ್ಲಿ ನದಿಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಸರ್ಕಾರದ ಮೇಲೆ ಒತ್ತಡ ಹೇರಿ ಈ ಭಾಗಕ್ಕೆ ನೀರಾವರಿ ಕಲ್ಪಿಸಲು ಶಕ್ತಿ ಮೀರಿ ಂುತ್ನಿಸಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಅವರ ಜೊತೆಗೆ ಮಾಜಿ ನೀರಾವರಿ ಸಚಿವ ಎಚ್.ಕೆ. ಪಾಟೀಲ ಅವರ ಕಾಂರ್ುಶ್ಲಾಘನೀಯ ಇದಕ್ಕಾಗಿ ಸರ್ಕಾರ ರು. 334.50 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದರು.
ಬೆಳಗಾವಿ ಜಿಲ್ಲೆಂು ಗೋಕಾಕ, ರಾಮದುರ್ಗ, ಸವದತ್ತಿ ತಾಲೂಕುಗಳ ಹಳ್ಳಿಗಳಿಗೆ ಬಾಗಲಕೋಟ ಜಿಲ್ಲೆಗೆ ನೀರಾವರಿ ಒದಗಿಸುವ ಉದ್ದೇಶದಿಂದ ಈ ಕಾಮಗಾರಿ ಆರಂಭಿಸಲಾಯಿತು. ಗೋಕಾಕ, ರಾಮದುರ್ಗ, ಸವದತ್ತಿ ತಾಲೂಕಿನ ಅಡಿಂುಲ್ಲಿರುವ ಕೌಜಲಗಿ, ಕಳ್ಳಿಗುದ್ದಿ, ಮನ್ನಿಕೇರಿ, ಮೆಳ್ಳಿಕೇರಿ, ದಾಸನಾಳ, ಮುಗಳಿಹಾಳ, ಹುಲಕುಂದ, ಭಾಗೋಜಿಕೊಪ್ಪ, ಚಿಕ್ಕೊಪ್ಪ, ಹಿರೇಕೊಪ್ಪ, ಚಿಪ್ಪಲಕಟ್ಟಿ ಮುಂತಾದ ಗ್ರಾಮಗಳು ಘಟಪ್ರಭಾ ಬಲದಂಡೆ ಕಾಲುವೆ ನೀರಾವರಿಯಿಂದ ವಂಚಿತಗೊಂಡಿದ್ದನ್ನು ಕಂಡ ಸಚಿವರು ಸರ್ಕಾರದ ಮೇಲೆ ಒತ್ತಡ ಹೇರಿ ರಾಮೇಶ್ವರ ಏತ ನೀರಾವರಿ ರೈತಾಪಿ ವರ್ಗಕ್ಕೆ ಮುಟ್ಟಿಸುವಲ್ಲಿ ಂುಶಸ್ಸು ಕಂಡಿದ್ದಾರೆ ಎಂದರು.
ಹಿರಿಂು ನ್ಯಾಂುವಾದಿ ಮೋಹನ ಕಾತರಕಿ ಮಾತನಾಡಿದರು.
ನೀರಾವರಿ ಅನುಷ್ಠಾನಕ್ಕೆ ಭೂದಾನ ಮಾಡಿದ ದಾನಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಚಿವ ಬಾಲಚಂದ್ರ ಜಾರಕಿಹೊಳಿ ಮತ್ತು ಎಚ್.ಕೆ. ಪಾಟೀಲ ಅವರ ಕಾಂರ್ುಗಳನ್ನು ಇದೇ ಸಂದರ್ಭದಲ್ಲಿ ಶ್ಲಾಘಿಸಿದರು.
ಜಲಸಂಪನ್ಮೂಲ ಇಲಾಖೆಂು ಮುಖ್ಯ ಎಂಜನಿಂುರ್ ಎ.ಎನ್.ಜಾನ್ವೇಕರ, ಹಿಡಕಲ್ ಡ್ಯಾಂ ಅಧೀಕ್ಷಕ ಅಭಿಂುಂತರ ಇ.ಎಚ್.ಚೊಳಚಗುಡ್ಡ, ಮಲಪ್ರಭಾ ಡ್ಯಾಂ ಅಧೀಕ್ಷಕ ಎಂಜನಿಂುರ ಎ.ಎಲ್. ವಾಸನದ, ಕೌಜಲಗಿ ಜಿಪಂ ಮಾಜಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ, ಟಿಎಪಿಸಿಎಂಎಸ್ ನಿರ್ದೇಶಕ ಅಶೋಕ ನಾಂ್ಕು, ಜಿಲ್ಲಾ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಗೋವಿಂದ ಕೊಪ್ಪದ, ಎಪಿಎಂಸಿ ನಿರ್ದೇಶಕ ಎಂ.ಎಂ. ಪಾಟೀಲ, ನಿವೃತ್ತ ಕಾಂರ್ುಕಾರಿ ಅಭಿಂುಂತರ ರಮೇಶ ಜಂಗಲ, ಕೌಜಲಗಿ ನೀರಾವರಿ ಇಲಾಖೆಂು ಕಾಂರ್ು ನಿರ್ವಾಹಕ ಅಭಿಂುಂತರ ಜಿ.ಪಿ. ನಾಯಿಕ, ಎಸ್ಪಿಎಂಎಲ್ ಗುತ್ತಿಗೆದಾರ ಮಂಜುನಾಥಸ್ವಾಮಿ, ರಾಮಣ್ಣ ಮಹಾರಡ್ಡಿ, ಗಿರೀಶ ಹಳ್ಳೂರ, ವೆಂಕಣ್ಣ ಪಂಚಗಾಂವಿ, ನಾಡಗೌಡರ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

