ಬೆಳಗಾವಿ

ಸುದ್ದಿ ಸಂಕ್ಷೇಪ

Published On :

ಜೈಪುರ ಕೃತಕ ಕಾಲು ಉಚಿತ ವಿತರಣೆ
ಬೆಳಗಾವಿ:
ನಗರದ ರೋಟರಿ ಕ್ಲಬ್ ಆಫ್ ಬೆಳಗಾವಿ ಹಾಗೂ ಮಹಾವೀರ ಯುವಕ ಮಂಡಳ ವತಿಯಿಂದ ಅಂಗವಿಕಲರಿಗೆ ಉಚಿತವಾಗಿ ಜೈಪುರ ಕಾಲು(ಕೃತಕ ಕಾಲು) ವಿತರಿಸಲಾಗುತ್ತಿದೆ.  ಆಸಕ್ತರು ಮಾ. 19ರೊಳಗೆ ಡಾ. ಎಸ್.ಎನ್. ಶೆಟ್ಟಿ, ಆಸ್ಪತ್ರೆ ಶಿವಸಾಗರ ಆರ್ಕೆಡ್ -1264, ರಾಮಲಿಂಗ ಕಿಂಡ್‌ಗಲ್ಲಿ ಬೆಳಗಾವಿ ವಿಳಾಸಕ್ಕೆ ಸಂಪರ್ಕಿಸಬೇಕು. ಹೆಚ್ಚಿನ ಮಾಹಿತಿಗಾಗಿ 0831-2429214ಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ಇಂದು  ಕುಸ್ತಿ ಪಂದ್ಯಾವಳಿ
ಬೆಳಗಾವಿ
: ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದ ಅಡವಿಸಿದ್ದೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಮಾ. 18ರಂದು ಸಂಜೆ 4 ಗಂಟೆಗೆ ಗ್ರಾಮದ ಹೊರವಲಯದಲ್ಲಿ ಕುಸ್ತಿ ಪಂದ್ಯಾವಳಿ ಸಂಘಟಿಸಲಾಗಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಕುಸ್ತಿ ಪಟುಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಾತ್ರಾ ಮಹೋತ್ಸವ ಕಮೀಟಿ ಪ್ರಕಟಣೆ ತಿಳಿಸಿದೆ.
ಬಿಜೆಪಿ ಬಿಡುವ  ಪ್ರಶ್ನೆಂು ಇಲ್ಲ: ಕೋರೆ
ಬೆಳಗಾವಿ:
ತಾವು ಂಾವುದೇ ಕಾರಣಕ್ಕೂ ಬಿಜೆಪಿ ಬಿಡುವ ಪ್ರಶ್ನೆಂು ಇಲ್ಲ ಎಂದು ರಾಜ್ಯಸಭೆ ಸದಸ್ಯ ಡಾ. ಪ್ರಭಾಕರ ಕೋರೆ ಅವರು ಭಾನುವಾರ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಕೆಲವರು ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಅಂತಹ ಂಾವುದೇ ಬೆಳವಣಿಗೆಗಳು ಪಕ್ಷದಲ್ಲಿ ನಡೆಂುತ್ತಿಲ್ಲ ಎಂದು ಹೇಳುವ ಮೂಲಕ ಕೋರೆಯವರು ಪಕ್ಷಾಂತರ ಊಹಾಪೋಹಗೆ ತೆರೆ ಎಳೆದಿದ್ದಾರೆ.  ಅಲ್ಲದೇ ಸ್ಥಳೀಂು ಸಂಸ್ಥೆಗಳ ಚುನಾವಣೆಂುಲ್ಲಿ ಬಂದಿರುವ ಫಲಿತಾಂಶದ ಹಿನ್ನೆಲೆಂುಲ್ಲಿ ಬಿಜೆಪಿಂುಲ್ಲಿ ಬದಲಾವಣೆಗಳ ಪರ್ವ ಆರಂಭವಾಗಿದೆ. ಕೆಜೆಪಿಗೆ ಹೋಗಬೇಕೋ ಅಥವಾ ಬಿಜೆಪಿಂುಲ್ಲಿಂು ಉಳಿಂುಬೇಕೋ ಎಂಬ ಗೊಂದಲ ಹಲವರಲ್ಲಿ ನಿರ್ಮಾಣವಾಗಿರಬಹುದು. ಆದರೆ ತಾವು ಂಾವುದೇ ಕಾರಣಕ್ಕೂ ಪಕ್ಷ ತ್ಯಜಿಸುವುದಿಲ್ಲ ಎಂದಿದ್ದಾರೆ. ಬಹಳ ದಿನಗಳ ನಂತರ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಕೈಗಾರಿಕೆ ಸಚಿವ ಮುರಿಗೇಶ ನಿರಾಣಿ ಅವರು ಬೆಳಗಾವಿಗೆ ಆಗಮಿಸಿದ್ದರು. ಅದಕ್ಕಾಗಿ ಭಾನುವಾರ ತಮ್ಮ ನಿವಾಸದಲ್ಲಿ ಏರ್ಪಡಿಸಿದ್ದ ಭೋಜನಕೂಟದಲ್ಲಿ ಪಾಲ್ಗೊಂಡಿದ್ದರು ಅಷ್ಟೆ ಎಂದು ಕೋರೆ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.