ಬೆಳಗಾವಿ

ಜೂಜಾಟ ನಿರತ 6 ಜನರ ಬಂಧನ

Published On :

ಗೋಕಾಕ: ನಗರದ ಬ್ಯಾಳಿ ಕಾಟಾದ ಹತ್ತಿರ ಜೂಜಾಟದಲ್ಲಿ ತೊಡಗಿದ್ದ ಆರು ಜನರನ್ನು ಶಹರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿ, ರು. 12620 ನಗದು ಹಣ ವಶಪಡಿಸಿಕೊಂಡಿದ್ದಾರೆ.
ನಗರದ ನಿವಾಸಿಗಳಾದ ಹಸನಸಾಬ ಅಬ್ದುಲಗಣಿ ಪಟೇಲ, ನಸರುದ್ದೀನ ಮೆಹಬೂಬಸಾಬ ಜಮಾದಾರ, ಇಸ್ಮಾಯಿಲ ಮಹಮ್ಮದಸಾಬ ಮೋಮಿನ, ಮಹಮ್ಮದರಫೀಕ ಅಲ್ಲಾಭಕ್ಷ ಮುಜಾವರ, ಇಸ್ಮಾಯಿಲ ಮೀರಾಖಾನ ಅವಟಿ ಹಾಗೂ    ಹುಸೇನಸಾಬ ಅಬ್ದುಲಸಾಬ ಪಠಾಣ ಬಂಧಿತರು.
ನಗರ ಠಾಣೆ ಪಿಎಸ್‌ಐ ಡಿ.ಕೆ. ಪಾಟೀಲ ಸೇರಿದಂತೆ ಮತ್ತಿತರರು ದಾಳಿ ನಡೆಸಿದ್ದಾರೆ. ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾನಾಜಿ ನಿಧನ
ಬೆಳಗಾವಿ: ಇಲ್ಲಿಯ ವಡಗಾವಿ ಕಲ್ಮೇಶ್ವರ ರಸ್ತೆಯ ನಿವಾಸಿ ಹಾಗೂ ಕೆಎಸ್‌ಆರ್‌ಟಿಸಿ ನಿವೃತ್ತ ಸಂಚಾರಿ ನಿಯಂತ್ರಕ ತಾನಾಜಿ ಸೋಮಪ್ಪ ಮಾಸ್ತಮರಡಿ (71) ಸೋಮವಾರ ಹೃದಯಾಘಾತದಿಂದ ನಿಧನರಾದರು. ಮೃತರಿಗೆ ಮೂವರು ಪುತ್ರರು, ಓರ್ವ ಪುತ್ರಿ ಮತ್ತು ಆಪಾರ ಬಂಧುಗಳಿದ್ದಾರೆ.

ಹಾವು ಕಚ್ಚಿ ಬಾಲಕ ಸಾವು
ಗೋಕಾಕ: ದನಗಳಿಗೆ ಮೇವು ಸಂಗ್ರಹಿಸುತ್ತಿದ್ದ ಬಾಲಕನಿಗೆ ಹಾವು ಕಚ್ಚಿ ಸಾವನ್ನಪ್ಪಿದ ಘಟನೆ ಸೋಮವಾರ ಸಂಜೆ ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ನಡೆದಿದೆ. ಮಹಾದೇವ ಕಲ್ಲಪ್ಪ ಕುರಿ (14) ಮೃತ ಬಾಲಕ. ತನ್ನ ತಾಯಿಯ ಜೊತೆ ಹೊಲದಲ್ಲಿ ಮೇವು ಸಂಗ್ರಹಿಸುತ್ತಿದ್ದಾಗ ಹಾವು ಕಚ್ಚಿ ತೀವ್ರ ಅಸ್ವಸ್ಥಗೊಂಡಿದ್ದನು. ಉಪಚಾರ ಫಲಿಸದೆ ರಾತ್ರಿ 8.30ರ ಸುಮಾರಿಗೆ ಸಾವನ್ನಪ್ಪಿದ್ದಾನೆ. ಕುಲಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.