ಬೆಳಗಾವಿ

ಇಂದಿನಿಂದ ಮಹಾಲಿಂಗೇಶ್ವರ ಜಾತ್ರೆ

Published On :

ಗೋಕಾಕ:  ಸಮೀಪದ ಗೋಕಾಕ ಜಲಪಾತ ಪಕ್ಕದಲ್ಲಿರುವ ಮಹಾಲಿಂಗೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ನಿಮಿತ್ತ ಮಾ. 9ರಿಂದ 11ರ ವರೆಗೆ ಮೂರು ದಿನಗಳ ಕಾಲ ಜಾತ್ರೆ ಮಹೋತ್ಸವನಡೆಯಲಿದೆ.
ಜಾತ್ರೆ ನಿಮಿತ್ತ ಮಾ. 9ರಂದು ಸಂಜೆ ಗೋಕಾಕ ಮಿಲ್ಲಿನ ಪ್ರಧಾನ ವ್ಯವಸ್ಥಾಪಕರಾದ (ಹೆಚ್.ಆರ್.) ಎಂ.ಎಸ್. ರವೀಶ್, ಹಿರಿಯ ವ್ಯವಸ್ಥಾಪಕರಾದ ಎಸ್.ಜೆ. ಅರವಿಂದ, ಸಿನಿಯರ್ ಎಕ್ಸಿಕ್ಯೂಟಿವ್ ಎಚ್.ಆರ್. ವಿ.ಕೆ. ಪೂಜೇರಿ, ಪ್ರಾಧ್ಯಾಪಕ ಜಿ.ವಿ. ಮಳಗಿ ಅವರ ಉಪಸ್ಥಿತಿಯಲ್ಲಿ ಗೋಕಾಕ ಫಾಲ್ಸ್ ಯರಗಲ್ಲ ಮಠದ ಶಂಕರಾನಂದ ಸ್ವಾಮಿಜಿ ಉದ್ಘಾಟನೆ ನೆರವೇರಿಸಲಿದ್ದಾರೆ.
ಮಾ. 10ರಂದು ಸಂಜೆ 4.30 ಗಂಟೆಗೆ ಮರಡಿಮಠ ಕಾಡಸಿದ್ಧೇಶ್ವರ ಮಠದ ಡಾ. ಅದೃಶ್ಯ ಗುರುಸಿದ್ಧೇಶ್ವರ ಮಹಾಸ್ವಾಮಿಜಿ ಅವರ ಸಾನ್ನಿಧ್ಯದಲ್ಲಿ ಗೋಕಾಕ ಮಿಲ್ಲಿನ ಸಂಚಾಲಕರಾದ ಹೆಚ್.ಎಸ್. ಭಾಸ್ಕರ ಎ.ಎಸ್.ಪಿ. ವರ್ತಿಕಾ ಕಟಿಯಾರ್, ತಹಸೀಲ್ದಾರ್ ಡಾ. ಔದ್ರಾಮ, ಕಾರ್ಮಿಕ ಧುರೀಣರಾದ ಅಂಬಿರಾವ್ ಪಾಟೀಲ್, ಪ್ರಧಾನ ವ್ಯವಸ್ಥಾಪಕರಾದ ಆರ್.ಎ. ಕುಲಕರ್ಣಿ, ಎಂ.ಎಸ್. ರವೀಶ್, ಸಿಪಿಐ ಲೋಕಾಪೂರ, ಪಿಎಸ್ಐ ಬಿ.ಕೆ. ಪಾಟೀಲ ಅವರ ಉಪಸ್ಥಿತಿಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರು ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ರಾತ್ರಿ 11ಗಂಟೆಗೆ ದೇವಾಲಯದಲ್ಲಿ ಭಜನೆ ನಡೆಯಲಿದೆ.
ಮಾ. 11ರಂದು ಶ್ರೀರಾಮ ಮಂದಿರದಿಂದ ಮಹಾಲಿಂಗೇಶ್ವರ ದೇವಾಲಯವರೆಗೆ ಪಲ್ಲಕ್ಕಿ. ರಾತ್ತಿ 8 ಗಂಟೆಗೆ ಚಿತ್ತರಗಿ ಕುಮಾರವಿಜಯ ನಾಟ್ಯ ಸಂಘದಿಂದ “ಕಳ್ಳ ಗುರು ಸುಳ್ಳು ಶಿಷ್ಯ’ ನಾಟಕವನ್ನು ಶ್ರೀ ಮಹಾಲಿಂಗೇಶ್ವರ ಜಾತ್ರಾ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದೆ. ಕಮಿಟಿ ಪರವಾಗಿ ಬರುವ ಮೇ 13ರಂದು ಬಸವ ಜಯಂತಿ ಪ್ರಯುಕ್ತ ಉಚಿತ ಸಾಮೂಹಿಕ ವಿವಾಹವನ್ನು ಏರ್ಪಡಿಲಾಗಿದ್ದು  ಈ ಭಾಗದ ಜನರು ಇದರ ಲಾಭ ಪಡೆಯಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.