ಜಾತೀಯತೆಯಿಂದ ಹದಗೆಟ್ಟ ರಾಜಕಾರಣ
ಅಥಣಿ: ಜಾತೀಯತೆಯಿಂದಾಗಿ ರಾಜಕಾರಣ ಹದಗೆಡುತ್ತಿದೆ. ನಾವು ಜಾಗ್ರತರಾಗಿ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಬೇಕೆಂದು ಖ್ಯಾತ ಲೇಖಕ, ಪ್ರಗತಿಪರ ಚಿಂತಕ ಸುಧೀಂದ್ರ ಕುಲಕರ್ಣಿ ಹೇಳಿದರು.
ಅಥಣಿ ಮೋಟಗಿಮಠದಲ್ಲಿ ಶುಕ್ರವಾರ ಚನ್ನಬಸವ ಶಿವಯೋಗಿಗಳ 88ನೇ ಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಶರಣ ಸಂಸ್ಕೃತಿ ಮೇಳದಲ್ಲಿ ಅವರು ಮಾತನಾಡಿದರು.
ಮಾನವತಾವಾದಿ ಬಸವಣ್ಣ ಮತ್ತು ವಿವೇಕಾನಂದರು ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಎಲ್ಲ ರಾಜಕೀಯ ಪಕ್ಷಗಳು ಜಾತೀಯತೆಯನ್ನು ಜೀವಂತವಾಗಿ ಇಡುತ್ತಿವೆ. ಇದು ಹೀಗೆ ಮುಂದುವರೆದರೆ ಜಾತೀಯತೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಜಾತೀಯತೆಯಿಂದ ರಾಜಕಾರಣ ಇಂದು ಈ ಸ್ಥಿತಿಗೆ ತಲುಪಿದೆ ಎಂದರು.
ಬಸವಣ್ಣನವರು ಮತ್ತು ವಿವೇಕಾನಂದರ ಸಂದೇಶಗಳನ್ನು ಆಚರಣೆಯಲ್ಲಿ ತಂದರೆ ಜಾತೀಯತೆ ನಾಶವಾಗುತ್ತದೆ. ಇವರಿಬ್ಬರು ಒಂದು ಜಾತಿಗೆ ಮತ್ತು ದೇಶಕ್ಕೆ ಸೇರಿದವರಲ್ಲ. ಇಡೀ ವಿಶ್ವಕ್ಕೆ ಗುರುಗಳಾಗಿದ್ದಾರೆ. ಇತ್ತೀಚೆಗೆ ಬ್ರಿಟನ್ನಲ್ಲಿ ಬಸವಣ್ಣವರ ಮೂರ್ತಿ ಸ್ಧಾಪನೆಯಾದಾಗ ಅಲ್ಲಿ ಒಳ್ಳೆಯ ಅಭಿಪ್ರಾಯ ವ್ಯಕ್ತವಾಯಿತು. ಅನುಭವ ಮಂಟಪ ಜಗತ್ತಿನ ಪ್ರಜಾಪ್ರಭುತ್ವದ ವ್ಯವಸ್ಥೆಯ ತಳಪಾಯವಾಗಿದೆ. ಜಗತ್ತಿನಲ್ಲಿ ಎಲ್ಲ ಜಾತಿಗಳು ಶ್ರೇಷ್ಠ ಮತ್ತು ಸಮಾನವಾಗಿವೆ ಎಂದು ಸುಧೀಂದ್ರ ವಿವರಿಸಿದರು.
ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಅನಾಚಾರ ಶೋಭೆ ತರುವ ಸಂಗತಿಯಲ್ಲ. ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ಮಹಿಳೆಯ ಅತ್ಯಾಚಾರ ದೇಶಕ್ಕೆ ಕಳಂಕ. ಜಗತ್ತಿನ ಪ್ರತಿ 3 ಮಹಿಳೆಯರ ಪೈಕಿ
ಓರ್ವ ಮಹಿಳೆ ಲೈಂಗಿಕ ಶೋಷಣೆಗೆ ಒಳಗಾಗುತ್ತಾಳೆ. ಇದನ್ನು ತಡೆಗಟ್ಟುವದು ನಮ್ಮೆಲ್ಲರ ಕರ್ತವ್ಯ. ಅದಕ್ಕಾಗಿ ಜಾಗೃತಿ ಅಂದೋಲದಲ್ಲಿ ನೀವೆಲ್ಲ ರೂ ಭಾಗವಹಿಸಬೇಕೆಂದು ಸಲಹೆ ನೀಡಿದರು.
ಪೊಲೀಸ್ ದಾಖಲೆ ಪ್ರಕಾರ ಬಾಂಬೆ ನಗರವೊಂದರಲ್ಲಿ 2011 ಕ್ಕೆ 195, 2012 ರಲ್ಲಿ 210 ಅತ್ಯಾಚಾರ ಪ್ರಕರಣಗಳು ಮಹಿಳೆಯರ ಮೇಲೆ ನಡೆದಿವೆ.
ಇದರಲ್ಲಿ ಶೇ 90 ರಷ್ಟು ಒಳ ಸಂಬಂಧಿಗಳಿಂದ ನಡೆದಿವೆ ಎಂದು ಪೊಲೀಸ್ ದಾಖಲೆಯಿಂದ ತಿಳಿದು ಬಂದಿದೆ.
ಶರಣ ಸಂಸ್ಕೃತಿಯ ಮುಖ್ಯ ಉದ್ದೇಶ ಸಂಸ್ಕೃತಿ ಮತ್ತು ಸಂಸ್ಕಾರ ಮೂಲಕ ಸಮಾಜ ನಿಮಾರ್ಣ ಮಾಡುವದಾಗಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಪ್ರಭುಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿದರು. ಸುಧೀಂದ್ರ ಕುಲಕರ್ಣಿ, ಜಿ.ಎಚ್. ಹನ್ನೇರಡಮಠ, ಚಂದ್ರಕಾಂತ ಅಂಗಡಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅರುಣ ಯಲಗುದ್ರಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

