ಬೆಳಗಾವಿ

ಗಾಳಿಪಟದಾಟಕ್ಕೆ ಹರಿದು ಬಂದ ಜನಸಾಗರ

Published On :

ಬೆಳಗಾವಿ: ಇಲ್ಲಿಯ ನಾನಾವಾಡಿ ಮೈದಾನದಲ್ಲಿ ಆರಂಭವಾಗಿರುವ ಗಾಳಿಪಟ ಉತ್ಸವಕ್ಕೆ ಭಾನುವಾರ ಜನಸಾಗರವೇ ಹರಿದು ಬಂತು.
ಭಾನುವಾರರಜೆಯ ದಿನವಾಗಿದ್ದರಿಂದ ಮಹಿಳೆಯರು, ಮಕ್ಕಳು ಸೇರಿದಂತೆ ಅಧಿಕ ಸಂಖ್ಯೆಯಲ್ಲಿ ಜನ ಸೇರಿದ್ದರು. ಬಾನಂಗಳದಲ್ಲಿ ವೈಯ್ಯಾರದಿ ಬಳಕುವ ಗಾಳಿಪಟಗಳನ್ನು ತದೇಕ ಚಿತ್ತದಿಂದ ನೋಡುವ ಸಂಭ್ರವೇ ಮನೆಮಾಡಿತ್ತು.
ಪ್ರತಿ ವರ್ಷಕ್ಕಿಂತ ಈ ಬಾರಿ ಅಂತಾರಾಷ್ಟ್ರೀಂು ಗಾಳಿಪಟ ಉತ್ಸವಕ್ಕೆ ಅಪಾರ ಜನಸಾಗರವೇ ಹರಿದು ಬಂದಿದ್ದು, ಇದನ್ನು ವರ್ಣಿಸುವುದಕ್ಕೆ ಶಬ್ದಗಳೇ ಸಾಲುದು ಎಂದು ಶಾಸಕ ಅಭಂು ಪಾಟೀಲ ಭಾವುಕರಾಗಿ ಹೇಳಿದರು.
ನಗರದ ನಾನಾವಾಡಿ ಮೈದಾನದಲ್ಲಿ ಏರ್ಪಡಿಸಲಾಗಿರುವ ಅಂತಾರಾಷ್ಟ್ರೀಂು ಗಾಳಿಪಟ ಉತ್ಸವದ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು, ಗಾಳಿಪಟ ಉತ್ಸವಕ್ಕೆ ಸಂಬಂಧಿಸಿದಂತೆ ದೇಶದಲ್ಲೇ ಗುಜರಾತ ನಂತರ ಕರ್ನಾಟಕದ ಬೆಳಗಾವಿ ಜಿಲ್ಲೆಂು ಜಾಗತಿಕ ಭೂಪಟದಲ್ಲಿ ಸ್ಥಾನ ಪಡೆದಿದೆ. ಮುಂದಿನ ದಿನಗಳಲ್ಲಿ ಇದಕ್ಕಿಂತಲೂ ದೊಡ್ಡ ಪ್ರಮಾಣದ ಗಾಳಿಪಟ ಉತ್ಸವ ಆಂೋಜಿಸಲು ಅತ್ಯಂತ ವ್ಯವಸ್ಥಿತವಾಗಿ ರೂಪರೇಷೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಅಲ್ಲದೇ ಗಾಳಿಪಟ ಉತ್ಸವದ ಜತೆಗೆ ಬಗೆಬಗೆಂು ಕಾಂರ್ುಕ್ರಮಗಳನ್ನು ಏರ್ಪಡಿಸಿ, ಉತ್ಸವಕ್ಕೆ ಇನ್ನಷ್ಟು ಮೆರಗು ನೀಡಲು ಮುಂಬರುವ ದಿನಗಳಲ್ಲಿ ಜಾರಿಗೆ ತರವು ಉದ್ದೇಶಿಸಲಾಗಿದೆ ಎಂದರು.
ದೇಶದಲ್ಲೇ ಅತಿ ದೊಡ್ಡ ಉತ್ಸವ:  ಬೆಂಗಳೂರಿನ ವಿ.ಕೆ.ರಾವ್ ಮಾತನಾಡಿ, ತಾವು ಕಳೆದ 25 ವರ್ಷಗಳಿಂದ ಅಂತಾರಾಷ್ಟ್ರೀಂು ಗಾಳಿಪಟ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, ಅಲ್ಲಿ ಸಾವಿರ ಸಂಖ್ಯೆಂುಲ್ಲಿ ಜನರು ಸೇರುತ್ತಿದ್ದರೇ, ಇಲ್ಲಿ ಲಕ್ಷಾಂತರ ಜನ ಗಾಳಿಪಟ ಪ್ರೇಮಿಗಳು ಆಗಮಿಸುತ್ತಿದ್ದಾರೆ. ಹೀಗಾಗಿ ಇದು ದೇಶದಲ್ಲಿಂು ಅತಿದೊಡ್ಡ ಅಂತಾರಾಷ್ಟ್ರೀಂು ಗಾಳಿಪಟ ಉತ್ಸವವಾಗಿ ಹೊರಹೊಮ್ಮಿದೆ ಎಂದು ರಾವ್ ಹೇಳಿದರು.
ಗುಜರಾತ್‌ಕ್ಕಿಂತಲೂ ಅತ್ಯಧಿಕ ಪ್ರಮಾಣದಲ್ಲಿ ಇಲ್ಲಿ ಜನತೆ ಆಗಮಿಸುವುದರಿಂದ ಮುಂದಿನ ದಿನಗಳಲ್ಲಿ ಈ ಉತ್ಸವಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ದೊರೆಂುಲಿದೆ ಎಂದರು.
ವಿಶ್ವೇಶ್ವರಂ್ಯು ತಾಂತ್ರಿಕ ವಿಶ್ವವಿದ್ಯಾಲಂುದ ಕುಲಪತಿ ಎಚ್.ಮಹೇಶಪ್ಪ ಮಾತನಾಡಿ, ಶಾಸಕ ಅಭಂು ಪಾಟೀಲರು, ಕಳೆದ ಮೂರು ವರ್ಷಗಳಿಂದ ಬೆಳಗಾಮಿಂುಲ್ಲಿ 14 ದೇಶಗಳ ತಂಡಗಳನ್ನು ಕರೆಯಿಸಿ, ಅಂತಾರಾಷ್ಟ್ರೀಂು ಗಾಳಿಪಟ ಉತ್ಸವವನ್ನು ಆಂೋಜಿಸುವುದರ ಮೂಲಕ ಬೆಳಗಾವಿ ಜನತೆಗೆ ಗಾಳಿಪಟದ ರಸದೌತಣ ಊಣಬಡಿಸಿದ್ದಾರೆಂದರು.
ವೇದಿಕೆ ಮೇಲೆ ರಾಜೇಶ ಹೆಡಾ, ಪರಿವರ್ತನ ಪರಿವಾರದ ಮುಖಂಡ ಚೇತನ ಕುಲಕರ್ಣಿ ಮೊದಲಾದವರು ಇದ್ದರು. ಇದೇ ಸಂದರ್ಭದಲ್ಲಿ ವಿವಿಧ ದೇಶಗಳಿಂದ ಆಗಮಿಸಿದ್ದ ಕೈಟರ್ಸ್‌ಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.