ಬೆಳಗಾವಿ

ಕಳವು: 7 ಜನರ ಬಂಧನ

Published On :

ರಾಂುಬಾಗ: ಚಿಂಚಲಿ ಮಾಂುಕ್ಕಾ ದೇವಿ ಜಾತ್ರೆಂುಲ್ಲಿ ಕಳ್ಳತನ ಹಾಗೂ ಇತರ ಅಪರಾಧ ಎಸಗಿದ ಸಂಶಯಾಸ್ಪದವಾಗಿ ಸಿಕ್ಕ ಏಳು ಜನರನ್ನು ಬುಧವಾರ ಬಂಧಿಸಿ ನ್ಯಾಂಾಂಗ ÈÚËÚOæQ…J®Ú°ÑÚÅÛW¥æ. ಬಾಬು ಬವರಲಾಲ್ ಚವ್ಹಾನ (19), ಬಲವಂತ ಚೈನಸಿಂಗ ಕಾಳೆ(18), ನರೇಂದ್ರ ನಂದಾ ಕಾಳೆ(25), ಸೋನು ಪ್ರಕಾಶ ಗುಜರಾತಿ(22), ಸಾಗರ ಜಾಲೇಂದ್ರ ಕಾಳೆ(30), ಅಂಜು ಕೀಸನ eÛOÚ«æ(22)„¶M©ÑÚÅÛW¥Úß§, ಎಲ್ಲರೂ ಮಧ್ಯಪ್ರದೇಶ, ಭೂಪಾಲ, ಔರಂಗಾಬಾದ, ಮೀರಜ ಹಾಗೂ ಸಾತಾರಾ ನಗರದವರಾಗಿದ್ದಾರೆ. ಕುಡಚಿ ಅಪರಾಧ ವಿಭಾಗದ ಪಿಎಸ್ಐ ಎಂ.ಬಿ ಗೋಟಕಿಂಡಿ ಅವರು ರಾಂುಬಾಗ ಸಿಪಿಐ ಶ್ರೀಪಾದ ಜಲ್ದೆ, ಕುಡಚಿ ಪಿಎಸಐ ಡಿ.ಸಂತೋಷಕುಮಾರ ಇತರರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೂವರಿಗೆ ಶಿಕ್ಷೆ, ದಂಡ
ಗೋಕಾಕ:  ಕಳವು ಮಾಡಿದ ಆರೋಪ ಎದುರಿಸುತ್ತಿದ್ದ ವ್ಯಕ್ತಿಗೆ ಹಾಗೂ ಕಳ್ಳತನ ಮಾಡಿದ್ದ ಸಾಮಗ್ರಿಗಳನ್ನು ಖರೀದಿ ಮಾಡಿದ್ದ ಇಬ್ಬರಿಗೆ ಇಲ್ಲಿಯ ಜೆಎಂಎಫ್ಸಿ ನ್ಯಾಯಾಲಯವು ಮಂಗಳವಾರ ಒಂದು ವರ್ಷ ಸಾದಾ ಜೈಲುವಾಸ ಶಿಕ್ಷೆ ಮತ್ತು 1 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.  ಪ್ರಧಾನ ಜೆಎಂಎಫ್ ಸಿ ಪ್ರಧಾನ ನ್ಯಾಯಾಧೀಶ ವಿ.ಎಸ್.ಪಾಟೀಲ ಅವರು ವಿಚಾರಣೆ ನಡೆಸಿ ತೀರ್ಪು  ನೀಡಿದ್ದಾರೆ. ಶಿಕ್ಷೆಗೆ ಒಳಗಾದವರು ಗೋಕಾಕ ನಗರದ ಹನುಮಂತ ಬಸಪ್ಪ ಚಿಟಗುಬ್ಬಿ ಮತ್ತು ಕಳ್ಳತನದ ಸಾಮಗ್ರಿಗಳನ್ನು ಖರೀದಿಸಿದ್ದ  ಸಿದ್ದಪ್ಪ ಕಾಡಪ್ಪ ನಾವಿ ಮತ್ತು ಅಬ್ದುಲ್ ರಜಾಕ ಅಬ್ದುಲ್ ಸಾಹೇಬ ಜಕಾತಿ ಎಂಬುವರು. 2011 ಡಿಸೆಂಬರ 2ರಂದು ನಗರದ ಬಸ್ ನಿಲ್ದಾಣದಲ್ಲಿ ತೇಜಸ್ವಿನಿ ಶಶಿಧರ ಹೂಗಾರ ಎಂಬುವರು ತಮ್ಮ ಕುಟುಂಬದ ಸಮೇತ ಬಿಜಾಪುರಕ್ಕೆ ತೆರಳುತ್ತಿದ್ದಾಗ ಕಣ್ಣು ತಪ್ಪಿಸಿ ಅವರ ವೆನಿಟಿ ಬ್ಯಾಗ್ ನ್ನು ಕದ್ದು ಪರಾರಿಯಾಗಿದನು. ಶಹರ ಠಾಣೆ ಪೋಲೀಸರು ತೀವ್ರ ತನಿಖೆ ನಡೆಸಿ ಆಪಾಧಿತನನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.  ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಆಭಿಯೋಜಕ ಎಂ.ಕೆ.ಪಾಟೀಲ ವಕಲಾತ್ತು ವಹಿಸಿದ್ದರು.
25 ವಿದ್ಯಾರ್ಥಿಗಳು ಗಾಯ
ಚಿಕ್ಕೋಡಿ:   ಎದುರಿಗೆ ಬರುತ್ತಿದ್ದ ರೀಕ್ಷಾ ತಪ್ಪಿಸಲು ಹೋಗಿ ಶಾಲೆಯ ಖಾಸಗಿ ಮ್ಯಾಕ್ಸಿಕ್ಯಾಬ ವಾಹನವು ಉರುಳಿ ಬಿದ್ದು 25 ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡ ಘಟನೆ ಇಲ್ಲಿನ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಬಳಿ ಬುಧವಾರ ಬೆಳಗ್ಗೆ ಸಂಭವಿಸಿದೆ.  ಶಾಲಾ ವಾಹನದಲ್ಲಿ ಸುಮಾರು 65 ರಷ್ಟು ವಿದ್ಯಾರ್ಥಿಗಳಿದ್ದರು. 25 ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ತೀವ್ರವಾಗಿ ಗಾಯಗೊಂಡಿರುವ ಲಕ್ಷ್ಮೀ ಅಕ್ಕೋಳೆ, ಗಂಗಾಧರ ಖೋತ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೆಎಲ್ಇ ಆಸ್ಪತ್ರೆಗೆ ಕಳುಹಿಸಲಾಗಿದೆ.  ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಶಾಲಾ ವಿದ್ಯಾರ್ಥಿಗಳ ವಾಹನ ಅಪಘಾತವಾದ ಸುದ್ದಿ ತಿಳಿದ ತಕ್ಷಣ ಕಾರ್ಖಾನೆ ಸಂಚಾಲಕ ಮತ್ತು ವಿಧಾನ ಪರಿಷತ್ಸ್ದಸ್ಯ ಮಹಾಂತೇಶ ಕವಟಗಿಮಠ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.