ಸಂಪೂರ್ಣ ಶಾಂತಿಯುತ ಬಂದ್
ಟಿ ಬಿಗಿ ಬಂದೋಬಸ್ತ್
ಬಿಗಿ ಬಂದೋಬಸ್ತ್ ಹಾಗೂ ಅಹಿತಕರ ಘಟನೆ ನಡೆಸುವವರ ವಿರುದ್ಧ ಗೂಂಡಾ ಕಾಯ್ದೆ ಹಾಗೂ ಕಠಿಣ ಕ್ರಮದ ಎಚ್ಚರಿಕೆ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಆದರೆ, ಹೊರವಲಯದ ಹೊಸೂರು ರಸ್ತೆ ಚಂದಾಪುರ ಬಳಿ ಕಿಡಿಗೇಡಿಗಳು ಬಿಎಂಟಿಸಿ ಬಸ್ಗೆ ಕಲ್ಲು ತೂರಿದ್ದಾರೆ. ಘಟನೆಯಲ್ಲಿ ಪ್ರಯಾಣಿಕರು ಹಾಗೂ ಬಿಎಂಟಿಸಿ ಸಿಬ್ಬಂದಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಪೊಲೀಸರು ಬಸ್ನ್ನು ಹೆಬ್ಬಗೋಡಿ ಠಾಣೆ ಬಳಿ ಸಾಗಿಸಿದರು.
ಟಿ ಚಿತ್ರ ಪ್ರದರ್ಶನ ಸ್ಥಗಿತ
ಬಂದ್ಗೆ ಬೆಂಬಲ ಸೂಚಿಸಿ ನಗರದ ಬಹುತೇಕ ಮಾಲ್ಗಳು ಬಂದ್ ಆಗಿದ್ದವು. ಇನ್ನು ಕೇಂದ್ರ ಭಾಗದ ಚಿತ್ರಮಂದಿರಗಳಲ್ಲಿ ಮಾರ್ನಿಂಗ್ ಹಾಗೂ ಮ್ಯಾಟ್ನಿ ಶೋ ನಿಲ್ಲಿಸಲಾಗಿತ್ತು. ಉಳಿದಂತೆ ಜಯನಗರ, ಮಲ್ಲೇಶ್ವರ, ಯಶವಂತಪುರ, ಜೆಸಿ ರಸ್ತೆ, ಬೊಮ್ಮನಹಳ್ಳಿ, ಮಾಗಡಿ ರಸ್ತೆ, ಎಂ.ಜಿ ರಸ್ತೆ, ಸಂಜಯ್ ನಗರ, ಕೋರಮಂಗಲ, ಮೈಸೂರು ರಸ್ತೆ, ಹಳೇ ಮದ್ರಾಸ್ ರಸ್ತೆ, ಕನಕಪುರ ರಸ್ತೆ, ತುಮಕೂರು ರಸ್ತೆ, ಹೊಸೂರು ರಸ್ತೆಗಳಲ್ಲಿ ವಾಣಿಜ್ಯ ಮಳಿಗೆಗಳು ಬಾಗಿಲು ಹಾಕಿದ್ದವು. ಹಗಲು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಐಟಿ ಕಂಪನಿಗಳಿಗೆ ರಜೆ ಘೋಷಿಸಲಾಗಿತ್ತು. ಗುರುವಾರದ ಕೆಲಸವನ್ನು ಶನಿವಾರ ಅಥವಾ ಭಾನುವಾರ ನಿರ್ವಹಿಸುವಂತೆ ಉದ್ಯೋಗಿಗಳಿಗೆ ಕಂಪನಿಗಳು ಸೂಚನೆ ನೀಡಿದ್ದವು.
ಟಿ ಮೆಟ್ರೋ ಸಂಚಾರ ಸುಗಮ
ಬಂದ್ ನಡುವೆಯೂ ನಮ್ಮ ಮೆಟ್ರೋ ಬೈಯ್ಯಪ್ಪನಹಳ್ಳಿ ಹಾಗೂ ಎಂ.ಜಿ ರಸ್ತೆ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶ ಹಾಗೂ ಸಂಪಿಗೆ ರಸ್ತೆ ನಡುವಿನ ಮೆಟ್ರೋ ಮಾರ್ಗ ಸಾರ್ವಜನಿಕರಿಗೆ ಮುಕ್ತವಾಗಿತ್ತು. ಆದರೆ, ಪ್ರಯಾಣಿಕರ ಕೊರತೆ ಇತ್ತು.
ಟಿ ಮರಾಠಿ ಫಲಕ ಕಿತ್ತೆಸೆಯುತ್ತೇವೆ
ಎಲ್ಲ ಕನ್ನಡ ಸಂಘಟನೆಗಳು ಶುಕ್ರವಾರ ಬೆಳಗ್ಗೆ 9 ಗಂಟೆಗೆ ಬೆಳಗಾವಿ ತಲುಪಿ ಅಲ್ಲಿಂದ ಯಳ್ಳೂರಿನತ್ತ ಪ್ರಯಾಣ ಬೆಳೆಸುತ್ತೇವೆ. ಕರ್ನಾಟಕ ಪ್ರದೇಶದಲ್ಲಿ ಪುಂಡರು ನೆಟ್ಟಿರುವ ಮರಾಠಿ ಫಲಕಗಳನ್ನು ಮುಲಾಜಿಲ್ಲದೇ ಕಿತ್ತೆಸೇಯುತ್ತೇವೆ. ಇನ್ನು ಮುಂದೆ ಮರಾಠಿಗರ ಕುಕೃತ್ಯಗಳನ್ನು ನೋಡಿಕೊಂಡು ಸುಮ್ಮನೇ ಕೂರುವುದಿಲ್ಲ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
ಅತ್ಯಾಚಾರಿಗಳನ್ನು ಮುಲಾಜಿಲ್ಲದೇ ಶಿಕ್ಷಿಸಬೇಕು. ಅತ್ಯಾಚಾರಿಗಳು ಪರಮಪಾಪಿಗಳು. ಪುಟ್ಟ ಕಂದಮ್ಮಗಳ ಮೇಲೆ ಪಿಶಾಚಿಗಳು ಕೂಡಾ ಅತ್ಯಾಚಾರ ಎಸಗುವುದಿಲ್ಲ. ಇನ್ನು ಎಂಇಎಸ್ ಪುಂಡಾಟಿಕೆ ಅತಿಯಾಗಿದ್ದು ಅದನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಬೇಕು. ಎಂಇಎಸ್ ಹಾಗೂ ಶಿವಸೇನೆ ನಿಷೇಧಕ್ಕೆ ಕೇಂದ್ರ ಗೃಹ ಸಚಿವರ ಮೇಲೆ ಒತ್ತಡ ಹೇರುವಂತೆ ಮನವಿಯಲ್ಲಿ ತಿಳಿಸಲಾಗಿದೆ. ಬಂದ್ಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.
ಟಿ ವಾಟಾಳ್ ನಾಗರಾಜ್, ಕನ್ನಡ ಹೋರಾಟಗಾರ
ಬಂದ್ನಿಂದ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ನಿಯಂತ್ರಣ ಹೇರುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಸಾಧ್ಯ. ಹೀಗಾಗಿ ನಾನು ಬಂದ್ನಲ್ಲಿ ಪಾಲ್ಗೊಂಡಿದ್ದೇನೆ.
ಟಿ ಮೋಹನ್, ವಿದ್ಯಾರ್ಥಿ
ಬಂದ್ ಮಾಡಿದರೆ ಅತ್ಯಾಚಾರಗಳು ನಿಂತು ಹೋಗುತ್ತವೆಯಾ? ನಿಲ್ಲುವಂತಿದ್ದರೆ ಎಲ್ಲಾ ಅನ್ಯಾಯಗಳ ವಿರುದ್ದ ಬಂದ್ ಮಾಡಬಹುದಲ್ಲವೇ? ಬಂದ್ನಿಂದ ಸಮಯ ವ್ಯರ್ಥ. ಸಂಬಂಧಪಟ್ಟವರು ಬೇಕಾದ ಕ್ರಮಗಳ ಕೈಗೊಳ್ಳಬೇಕು.
ಟಿ ವಿಕ್ರಮ್ ನಾಯಕ್, ವ್ಯಾಪಾರಿ
ಬಂದ್ ಶಾಂತಿಯುತವಾಗಿ ನಡೆದಿದೆ. ನಗರದ ಯಾವ ಪ್ರದೇಶದಲ್ಲಿಯೂ ಅಹಿತಕರ ಘಟನೆಗಳು ವರದಿಯಾಗಿಲ್ಲ.
ಟಿ ಎಂ.ಎನ್.ರೆಡ್ಡಿ, ನಗರ ಪೊಲೀಸ್ ಆಯುಕ್ತ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

