ಬೆಂಗಳೂರು ನಗರ

ವಿಕೃತ ನಾಸಿರ್ ಚಾಲಾಕಿ ಅತ್ಯಾಚಾರಿ

ಆತ ವಿಕೃತ ಮನೋವೃತ್ತಿಯವ ಮಾತ್ರವಲ್ಲ, ಅತ್ಯಾಚಾರ ನಡೆಸಿದ ನಂತರ....

ವಿಕೃತ ನಾಸಿರ್ ಚಾಲಾಕಿ ಅತ್ಯಾಚಾರಿ
Published On :

ಕನ್ನಡಪ್ರಭ ವಾರ್ತೆ, ಬೆಂಗಳೂರು, ಜು.18
ಆತ ವಿಕೃತ ಮನೋವೃತ್ತಿಯವ ಮಾತ್ರವಲ್ಲ, ಅತ್ಯಾಚಾರ ನಡೆಸಿದ ನಂತರ ಕಾನೂನಿನಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂಬುದನ್ನು ಅರಿತಿರುವ ಚಾಣಾಕ್ಷ ಕೂಡ. ತೆವಲೂ ತೀರಬೇಕು, ಆದರೆ ಸಿಕ್ಕಿಬೀಳಬಾರದು ಎಂಬ ನೀತಿಯ ಖತರನಾಕ್ ವ್ಯಕ್ತಿ!

ಫ್ರೇಜರ್ ಟೌನ್ ಠಾಣಾ ವ್ಯಾಪ್ತಿಯಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿ ಸಿಕ್ಕಿ ಬಿದ್ದಿರುವ ಹೈದರ್ ನಾಸೀರ್‌ನ ಸಂಪೂರ್ಣ ಜಾತಕ ಕಲೆ ಹಾಕುತ್ತಿರುವ ಪೊಲೀಸರಿಗೆ ಆತನ ಕ್ರಿಮಿನಲ್ ಬುದ್ದಿಗಳೆಲ್ಲ ಗೊತ್ತಾಗುತ್ತಿವೆ.

ಅತ್ಯಾಚಾರ ಎಸಗಿದರೆ ವೈಜ್ಞಾನಿಕ ಸಾಕ್ಷ್ಯಗಳ ಮೂಲಕ ಸಿಕ್ಕಿ ಬೀಳುವ ಸಾಧ್ಯತೆ ಇರುತ್ತದೆ ಎಂಬ ಕಾರಣಕ್ಕೆ ನಾಸಿರ್ ಮುಖಮೈಥುನ ನಡೆಸುತ್ತಿದ್ದ. ಇತ್ತೀಚೆಗೆ ಕಾರಿನಲ್ಲಿ ಯುವತಿಯ ಮೇಲೆ ಎಸಗಿದ್ದೂ ಇಂಥದ್ದೇ ಅತ್ಯಾಚಾರ. ಯುವತಿಯರನ್ನು ಅಪಹರಿಸಿ ಈ ರೀತಿ ಲೈಂಗಿಕ ದೌರ್ಜನ್ಯ ನಡೆಸಿದ ಹಲವು ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದ ಎಂಬ ಮಾಹಿತಿಯನ್ನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು 'ಕನ್ನಡಪ್ರಭ'ಕ್ಕೆ ನೀಡಿದ್ದಾರೆ. ಈತ ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದ ಎಂಬುದು ತಿಳಿದಿತ್ತಾದರೂ ಈತನ ತಂತ್ರ ಬಹಿರಂಗಗೊಳ್ಳುತ್ತಿರುವುದು ಈಗ.

ಸಾಮಾನ್ಯವಾಗಿ ಅತ್ಯಾಚಾರ ಪ್ರಕರಣಗಳಲ್ಲಿ ನ್ಯಾಯಾಲಯ ಸಾಂದರ್ಭಿಕ ಹಾಗೂ ವೈಜ್ಞಾನಿಕ ಸಾಕ್ಷ್ಯಾಗಳನ್ನು ಪರಿಗಣಿಸಿ ಶಿಕ್ಷೆ ನೀಡುತ್ತದೆ. ಅತ್ಯಾಚಾರ ಮಾಡಿದ ವ್ಯಕ್ತಿಯ ವೀರ್ಯ, ಕೂದಲು ಅತ್ಯಾಚಾರಕ್ಕೊಳಗಾದ ಮಹಿಳೆಯ ಉಗುರುಗಳಲ್ಲಿ ಸಿಕ್ಕಿಕೊಂಡಿರಬಹುದಾದ ಆತನ ಚರ್ಮದ ತುಣುಕು ಮುಂತಾದವುಗಳಿಂದ ಸಾಕ್ಷ್ಯ ಸಂಗ್ರಹಿಸಲಾಗುತ್ತದೆ. ಇದರ ಅರಿವಿದ್ದ ನಾಸಿರ್, ಅಪಹರಿಸಿದ ಯುವತಿಯ ಜತೆ ಮುಖಮೈಥುನ ನಡೆಸುತ್ತಿದ್ದ. ಇದರಿಂದ ಯಾವುದೇ ರೀತಿಯ ಸಾಕ್ಷಿ ದೊರೆಯುವುದಿಲ್ಲ. ಯಾಕೆಂದರೆ ಸಾಮಾನ್ಯವಾಗಿ ಮೊದಲು ಮಾಡುವ ಕೆಲಸವೇ ಬಾಯಿ ತೊಳೆಯುವುದು. ಆದರೆ ಜನನಾಂಗ ತೊಳೆದರೂ ಅತ್ಯಾಚಾರದ 72 ತಾಸುಗಳ ನಂತರವೂ ಆರೋಪಿಯ ಕುರುಹು ಲಭ್ಯ. ಲೈಂಗಿಕ ಕ್ರಿಯೆ ನಡೆಸದಿದ್ದರೆ ಮಹಿಳೆಯರು ದೂರು ಕೊಡಲು ಮುಂದಾಗುವುದೂ ಕಡಿಮೆ ಎಂಬುದು ನಾಸಿರ್‌ನ ಎಣಿಕೆಯಾಗಿತ್ತು. ಆತನ  ಸಹಾಯಕರು ಅಪಹರಣಕ್ಕೆ ಮಾತ್ರ ಸಹಕರಿಸುತ್ತಿದ್ದರು. ಆದರೆ ಲೈಂಗಿಕ ದೌರ್ಜನ್ಯವನ್ನು ನಾಸೀರ್ ಮಾತ್ರ ಮಾಡುತ್ತಿದ್ದ ಎನ್ನುತ್ತವೆ ಪೊಲೀಸ್ ಮೂಲಗಳು.

ಈ ಪ್ರಕರಣದಲ್ಲೂ ಹಾಗೆ: ಈ ಪ್ರಕರಣದಲ್ಲೂ ನಾಸಿರ್ ಇದೇ ತಂತ್ರ ಬಳಸಿದ್ದಾನೆ. ಯುವತಿಯನ್ನು ಗೆಳೆಯನ ಜತೆ ಅಪಹರಿಸಿ ನಿರ್ಜನ ಪ್ರದೇಶದಲ್ಲಿ ಆಕೆಯ ಗೆಳಯನನ್ನು ನಾಸೀರ್‌ನ ಸಹಚರರು ಹೊರಗೆ ಕರೆದೊಯ್ದು ಚಾಕು ತೋರಿಸಿ ಬೆದರಿಸಿದ್ದರು.

ಕಾರಿನಲ್ಲಿ ಯುವತಿ ಜತೆ ಒಬ್ಬನೇ ಉಳಿದ ನಾಸೀರ್ ನಂತರ ಆಕೆಗೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಬಲವಂತವಾಗಿ ಮುಖಮೈಥುನದ ಅತ್ಯಾಚಾರ ನಡೆಸಿದ್ದಾನೆ.

ಆದರೆ ನಾಸಿರ್ ಈಗ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ನಂತರ ಕೇಂದ್ರ ಸರ್ಕಾರ  ಕಾನೂನಿಗೆ ತಿದ್ದುಪಡಿ ತಂದಿದೆ. 264 (ಎ) ಪ್ರಕಾರ, ಬಲವಂತದ ಲೈಂಗಿಕ ಸಂಪರ್ಕ ನಡೆಸುವುದು ಮಾತ್ರ ಅತ್ಯಾಚಾರ ಎಂದು ಈಗ ಪರಿಗಣಿಸಲ್ಪಡುವುದಿಲ್ಲ. ಮೌಖಿಕವಾಗಿ ನಡೆಸುವ ಲೈಂಗಿಕ ದೌರ್ಜನ್ಯ ಅತ್ಯಾಚಾರ ವ್ಯಾಪ್ತಿಗೆ ಸೇರುತ್ತದೆ.

ಅಸುರಕ್ಷಿತ ಬೆಂಗಳೂರು
ಎನ್‌ಸಿಆರ್‌ಬಿ(ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ) 2013ರ ವರದಿ ಹೇಳುವಂತೆ, 2012ಕ್ಕೆ ಹೋಲಿಸಿದರೆ 2013ರಲ್ಲಿ ಬೆಂಗಳೂರಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿ 345 ಹೆಚ್ಚುವರಿ ಪ್ರಕರಣಗಳು ದಾಖಲಾಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.