ಹೆಗ್ಗೋಡಲ್ಲಿ ಸಾಂಸ್ಕೃತಿಕ ಶಿಬಿರ
ಬೆಂಗಳೂರು: ಹೆಗ್ಗೋಡಿನ ನೀನಾಸಂನಲ್ಲಿ ಸಾಂಸ್ಕೃತಿಕ ಅನುಸಂಧಾನ ಶಿಬಿರ ಅಕ್ಟೋಬರ್ 2ರಿಂದ 8ರವರೆಗೆ ನಡೆಯಲಿದೆ. ಕಳೆದ ಎರಡು ದಶಕಗಳಿಂದ ನೀನಾಸಂ ಚಲನಚಿತ್ರ-ಸಾಂಸ್ಕೃತಿಕ ಶಿಬಿರಗಳನ್ನು ಪ್ರತಿ ಅಕ್ಟೋಬರ್ನಲ್ಲಿ ನಡೆಸುತ್ತಾ ಬಂದಿದೆ. ಈ ಶಿಬಿರದಲ್ಲಿ ರಂಗಭೂಮಿ, ಸಾಹಿತ್ಯ, ಸಂಗೀತ, ನೃತ್ಯ, ಚಲನಚಿತ್ರ ಮುಂತಾದ ಸಾಂಸ್ಕೃತಿಕ ಮಾಧ್ಯಮಗಳ ಸ್ವರೂಪ ಮತ್ತು ಪರಸ್ಪರ ಸಂಬಂಧ ಹಾಗೂ ಒಟ್ಟು ಸಮಾಜದೊಂದಿಗೆ ಸಂಸ್ಕೃತಿಯ ಸಂಬಂಧ ವಿಷಯಗಳ ಬಗ್ಗೆ ರಾಜ್ಯ ಹಾಗೂ ಹೊರನಾಡುಗಳಿಂದ ಬರುವ ಅನೇಕ ಗಣ್ಯರು ಉಪನ್ಯಾಸ, ಚರ್ಚೆ ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಡಲಿದ್ದಾರೆ. ಪ್ರತಿ ಸಂಜೆ ಸಾಂಸ್ಕೃತಿಕ ಉತ್ಸವ ನಡೆಯಲಿದೆ. ಊಟ, ತಿಂಡಿ, ತಂಗಲು ಸ್ಥಳ ಎಲ್ಲವೂ ಸೇರಿ 3ಸಾವಿರ ಶುಲ್ಕವಿರುತ್ತದೆ. ವಿದ್ಯಾರ್ಥಿಗಳಿಗೆ 2500 ಶುಲ್ಕ. ಶಿಕ್ಷಕರು, ವಿದ್ಯಾರ್ಥಿಗಳು, ಪತ್ರಕರ್ತರು ಹಾಗೂ ಗ್ರಾಮೀಣ ಪ್ರದೇಶದ ಆಸಕ್ತರಿಗೆ ಶಿಬಿರದಲ್ಲಿ ವಿಶೇಷ ಆದ್ಯತೆಯಿರುತ್ತದೆ. ಭಾಗವಹಿಸಲು ಇಚ್ಛಿಸುವವರು ಅರ್ಜಿಯನ್ನು www.ninasam.org ಇಲ್ಲಿಂದ ಡೌನ್ಲೋಡ್ ಮಾಡಿ ನೀನಾಸಂ ಸಾಂಸ್ಕೃತಿಕ ಶಿಬಿರ, ಹೆಗ್ಗೋಡು, ಸಾಗರ, ಕರ್ನಾಟಕ 577417ಕ್ಕೆ ಸೆಪ್ಟೆಂಬರ್ 20ರೊಳಗಾಗಿ ಕಳುಹಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

