ಕಾರ್ಪೊರೇಟ್ ಕ್ರಿಕೆಟ್ ಟೂರ್ನಿ 10 ರಿಂದ
ಬೆಂಗಳೂರು: ಡಾ. ವಿಷ್ಣುವರ್ಧನ್ ಹಾಗೂ ಭಾರತಿ ವಿಷ್ಣುವರ್ಧನ್ ಪೋಷಿತ ಸ್ನೇಹಲೋಕ ತಂಡದಿಂದ ಕಾರ್ಪೋರೇಟ್ ತಂಡಗಳ ಕ್ರಿಕೆಟ್ ಟೂರ್ನಿ ಏರ್ಪಡಿಸಲಾಗಿದೆ ಎಂದು ನಟ ಅನಿರುದ್ಧ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ನೇಹಲೋಕ ಸೇರಿದಂತೆ ಅನೇಕ ತಂಡಗಳು ಭಾಗವಹಿಸಲಿದ್ದು, ಕ್ರಿಕೆಟ್ ಟೂರ್ನಿ ಆಗಸ್ಟ್ 10 ರಿಂದ ಆರಂಭವಾಗಲಿವೆ. ಪಂದ್ಯಗಳಿಂದ ಹಣ ಸಂಗ್ರಹಿಸಿ, ಬಡವರಿಗೆ ಧನ ಸಹಾಯ ಮಾಡಲಾಗುವುದು ಎಂದು ಅವರು ಹೇಳಿದರು.
ಹಾಗೆಯೇ, ಡಾ. ಭಾರತಿ ವಿಷ್ಣುವರ್ಧನ್ ಚಿತ್ರರಂಗದಲ್ಲಿ 50 ವರ್ಷಗಳ ಕಾಲ ಸೇವೆ ಸಲ್ಲಿಸಿದ ಪ್ರಯುಕ್ತ ವಿಭಾ ಚಾರಿಟಬಲ್ ಟ್ರಸ್ಟ್, ಮೀಡಿಯಾ ಸ್ಟಡೀಸ್ ಹಾಗೂ ಕ್ರೈಸ್ತ್ ಯೂನಿವರ್ಸಿಟಿ ಇವರ ಸಹಯೋಗದಲ್ಲಿ ಕಿರುಚಿತ್ರ ತಯಾರಿಕೆ ಶಿಬಿರವನ್ನು ಆ. 16 ರಿಂದ ಸೆ. 15 ವರೆಗೆ ಆಯೋಜಿಸಲಾಗಿದೆ. ಕಿರುಚಿತ್ರ ತಯಾರಿಕೆಯ ವಿವಿಧ ಪ್ರಕ್ರಿಯೆಗಳ ಕುರಿತಾದ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ನಟಿ ಭಾರತಿ ವಿಷ್ಣುವರ್ಧನ್, ನಟ ಚೇತನ್ ಹಾಗೂ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳಿಂದ ದೇವಾಲಯ ಸ್ವಚ್ಛತೆ
ದೊಡ್ಡಬಳ್ಳಾಪುರ: ತಾಲೂಕಿನ ಮೇಳೆಕೋಟೆ ಗ್ರಾಮದ ರಾಮಸುಬ್ಬಯ್ಯ ಸ್ಮಾರಕ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಚನ್ನಾಪುರ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀಚನ್ನಕೇಶವ ಸ್ವಾಮಿ ದೇವಾಲಯದ ಅಂಗಳ ಮತ್ತು ಸುತ್ತಮುತ್ತಲ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ ಮುನೇಗೌಡ, ವಿದ್ಯಾರ್ಥಿಗಳು ಸ್ಥಳೀಯ ಇತಿಹಾಸ, ಪರಂಪರೆ, ಪರಿಸರದ ಕುರಿತು ಜಾಗೃತಿ ಹೊಂದಿರಬೇಕು. ಸುಮಾರು 8 ಶತಮಾನಗಳ ಸುದೀರ್ಘ ಇತಿಹಾಸ ಹೊಂದಿರುವ ದೇವಾಲಯ ಚೋಳದ ಕಾಲದ ನಿರ್ಮಾಣ ಎನ್ನಲಾಗುತ್ತದೆ. ಇಲ್ಲಿನ ವಾಸ್ತು ಶೈಲಿ, ಶಿಲ್ಪಕಲೆ ಮಹತ್ವ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಹೊಂದಿರಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

