ನಾಲ್ಕು ಬಸ್ಗಳು ಅಗ್ನಿಗೆ ಆಹುತಿ
ಚಾಮರಾಜಪೇಟೆ ಟಿ.ಆರ್. ಮಿಲ್ ಆವರಣದಲ್ಲಿರುವ ಹಳೇ ಟೈರ್ಗಳ ಶೆಡ್ನಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿ ಖಾಸಗಿ ಟ್ರಾವೆಲ್ಸ್ಗೆ ಸೇರಿದ ನಾಲ್ಕು ಬಸ್ಗಳು ಸುಟ್ಟು ಕರಕಲಾಗಿವೆ.

ಬೆಂಗಳೂರು: ಚಾಮರಾಜಪೇಟೆ ಟಿ.ಆರ್. ಮಿಲ್ ಆವರಣದಲ್ಲಿರುವ ಹಳೇ ಟೈರ್ಗಳ ಶೆಡ್ನಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿ ಖಾಸಗಿ ಟ್ರಾವೆಲ್ಸ್ಗೆ ಸೇರಿದ ನಾಲ್ಕು ಬಸ್ಗಳು ಸುಟ್ಟು ಕರಕಲಾಗಿವೆ.
ನೂರಾರು ಹಳೇ ಟೈರ್ಗಳಿಗೆ ಏಕಕಾಲದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ ಬಾಂಬ್ ಸ್ಫೋಟಿಸಿದಾಗ ಕಂಡುಬರುವಂಥ ತೀವ್ರ ಪ್ರಮಾಣದ ಬೆಂಕಿ ಜ್ವಾಲೆ ಕಂಡುಬಂದಿತ್ತು. ದಟ್ಟ ಹೊಗೆ ಟಿ.ಆರ್.ಮಿಲ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆವರಿಸಿ ಆತಂಕದ ವಾತಾವರಣ ನಿರ್ಮಿಸಿತ್ತು. ಆದರೆ, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಟೈರ್ ಶೆಡ್ನಲ್ಲಿ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಸಾರ್ವಜನಿಕರು 4.40ರ ಸುಮಾರಿಗೆ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ. ಮೊದಲು ಮೂರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ.
ಬೆಂಕಿ ಪ್ರಮಾಣ ತೀವ್ರವಾಗಿದ್ದ ಕಾರಣ ಮತ್ತಷ್ಟು ವಾಹನಗಳನ್ನು ಕರೆಸಿಕೊಳ್ಳಲಾಯಿತು. ಒಟ್ಟು 16 ವಾಹನಗಳು ಹಾಗೂ 50ಕ್ಕೂ ಅಧಿಕ ಸಿಬ್ಬಂದಿ ರಾತ್ರಿ 8 ಗಂಟೆವರೆಗೂ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಕ್ಷಣಾರ್ಧದಲ್ಲಿ ಸಾವಿರಾರು ಟೈರ್ಗಳಿಗೆ ಬೆಂಕಿ ವ್ಯಾಪಿಸಿದೆ. ಹೀಗಾಗಿ ಸಿಬ್ಬಂದಿ ಎಷ್ಟೇ ನೀರು ಹರಿಸಿದರೂ ಬೆಂಕಿ ನಿಯಂತ್ರಣಕ್ಕೆ ಬರುತ್ತಿರಲಿಲ್ಲ. ಹೀಗಾಗಿ ಫೈರ್ ಫೈಟಿಂಗ್ ಫೋಮ್ ಸಿಂಪಡಿಸಿ ಬೆಂಕಿ ನಿಯಂತ್ರಣಕ್ಕೆ ತರಲಾಯಿತು ಎಂದು ಅಗ್ನಿಶಾಮಕ ನಿಯಂತ್ರಣ ಕೊಠಡಿ ಸಿಬ್ಬಂದಿ ಮಾಹಿತಿ ನೀಡಿದರು.ಬೆಂಕಿ ಹೊತ್ತಿಕೊಂಡಾಗ ಹತ್ತಿರದಲ್ಲೇ ನಿಲ್ಲಿಸಲಾಗಿದ್ದ ಹಲವು ಬಸ್ಗಳನ್ನು ಚಾಲಕರು ಸುರಕ್ಷಿತ ಜಾಗಗಳಿಗೆ ಸಾಗಿಸಿದರು.
ಸಾವಿರಾರು ಟೈರ್ ಸಂಗ್ರಹ
ಟಿ.ಆರ್.ಮಿಲ್ ಆವರಣದಲ್ಲಿ ಸಾಕಷ್ಟು ಖಾಲಿ ಜಾಗವಿರುವ ಕಾರಣ ಅಲ್ಲಿ ಖಾಸಗಿ ಟ್ರಾವೆಲ್ಸ್ ಬಸ್ಗಳು ದಿನಕ್ಕೆ 100 ನೀಡಿ ಪಾರ್ಕಿಂಗ್ ಮಾಡುತ್ತವೆ. ಇನ್ನು ಸಣ್ಣ ಪುಟ್ಟ ರಿಪೇರಿ, ಸರ್ವೀಸಿಂಗ್ ಮಾಡಲಾಗುತ್ತದೆ. ಸಾವಿರಾರು ಹಳೇ ಟೈರ್ಗಳನ್ನು ಅಲ್ಲಿ ಸಂಗ್ರಹಿಸಿಡಲಾಗಿತ್ತು.
ಆವರಣದಲ್ಲಿ ಮೇಲ್ವಿಚಾರಣೆಯನ್ನು ಪುರುಷೋತ್ತಮ ಎಂಬುವರು ನೋಡಿಕೊಳ್ಳುತ್ತಿದ್ದರು. ಬಸ್ ಮಾಲೀಕರು ದೂರು ನೀಡಿದ ಬಳಿಕ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಕೆ.ಜಿ.ನಗರ ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


