ಬೆಂಗಳೂರು ನಗರ

ಲಂಕೇಶ್ 80 ರಂಗ ಪಯಣ ಆ.9ರಿಂದ

Published On :

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ 'ಸಂಗಾತಿ ರಂಗಭೂಮಿ' ಲಂಕೇಶ್-80 ರಂಗ  ಪಯಣವನ್ನು ಆ.9 ರಿಂದ ಆರಂಭಿಸಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನ ಸಂಚಾಲಕ ರಮೇಶ್ ಅಂಕೋಲಾ, ರಂಗ ಪಯಣ ಮಾ.9 ರವರೆಗೆ ನಡೆಯಲಿದೆ ಎಂದರು. ಅಂಕೋಲೆಯ ಸ್ವಾತಂತ್ರ್ಯ ಸಂಗ್ರಾಮದ ಸಭಾಭವನದಲ್ಲಿ ಉದ್ಘಾಟನೆ ನಡೆಯಲಿದ್ದು, 'ಕ್ರಾಂತಿ ಬಂತು ಕ್ರಾಂತಿ' ನಾಟಕ ಪ್ರದರ್ಶನದಿಂದ ಚಾಲನೆಗೊಳ್ಳಲಿದೆ. ರಾಜ್ಯಾದ್ಯಂತ 80 ಪ್ರದರ್ಶನಗಳನ್ನು ನೀಡುವ ಉದ್ದೇಶವಿದೆ ಎಂದರು.  ಲಂಕೇಶರ ಅಭಿಮಾನಿಗಳು ರಾಜ್ಯದ ಯಾವುದೇ ಭಾಗಕ್ಕೆ ಆಹ್ವಾನಿಸಿದರೂ ತಂಡ ಹೋಗಿ ನಾಟಕ ಪ್ರದರ್ಶಿಸುವುದಾಗಿ, ಇದಕ್ಕೆ 5000 ನಿಗದಿ ಮಾಡಿರುವುದಾಗಿ ಹೇಳಿದರು. ನಮ್ಮ ತಂದೆಯ ನೆನಪಿನಲ್ಲಿ ಇಂಥ ರಂಗ ಪಯಣ ಮಾಡಲು ಉದ್ದೇಶಿಸಿರುವ ಸಂಗಾತಿ ರಂಗಭೂಮಿಗೆ ಯಶಸ್ಸು ಸಿಗಲಿ ಎಂದು ಪತ್ರಕರ್ತೆ ಗೌರಿ ಲಂಕೇಶ್ ಆಶಿಸಿದರು. ಸಂಗಾತಿಯ ಗೌರವಾಧ್ಯಕ್ಷೆ ಸುಜಾತ ಟಿ. ಗಾಂವಕರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.