ಬೆಂಗಳೂರು ನಗರ

ವಿಕ್ಟರಿ ನಿರ್ಮಾಪಕ, ನಿರ್ದೇಶಕಗೆ ನೋಟಿಸ್

Published On :

ಬೆಂಗಳೂರು: ಸಾಹಿತ್ಯ ರಚನೆಕಾರರ ಅನುಮತಿ ಪಡೆಯದೆ ಹಾಡಿನ ಸಾಲೊಂದನ್ನು ಬಳಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ವಿಕ್ಟರಿ ಚಿತ್ರದ ನಿರ್ದೇಶಕ ನಂದಕಿಶೋರ್, ನಿರ್ಮಾಪಕರು ಹಾಗೂ ಕರ್ನಾಟಕ ವಾಣಿಜ್ಯ ಮಂಡಳಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. 'ಅಕ್ಕನ ಮಗಳು' ಆಲ್ಬಂನ ಸಂಗೀತ ರಚನೆಕಾರ ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಚ್.ನ್ಯಾ.ಎಚ್. ಬಿಳ್ಳಪ್ಪ ಅವರಿದ್ದ ಏಕಸದಸ್ಯ ಪೀಠ, ವಿಚಾರಣೆಯನ್ನು ಮುಂದೂಡಿದೆ. ತಮ್ಮ ಗೀತೆಯ ಹಕ್ಕುಸ್ವಾಮ್ಯ ಖರೀದಿಸದೆ ಆಲ್ಬಂನ 'ಯಕ್ಕ ನಿನ್ ಮಗಳು ನಂಗ್ ಚಿಕ್ಕವಳಾಗಲ್ವಾ?' ಹಾಡಿನ ಸಾಲುಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಪೊಲೀಸರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

ಕಡ್ಡಾಯ ಶಿಕ್ಷಣ ಕುರಿತು ಅಹವಾಲು
ಬೆಂಗಳೂರು:
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸೆ.6ರಂದು ಶಿಕ್ಷಕರ ಸದನದಲ್ಲಿ 'ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2009 ಮತ್ತು ಶಿಕ್ಷಣ ಹಕ್ಕು ನಿಯಮಗಳು ಕರ್ನಾಟಕ 2012' ಗಳ ಬಗ್ಗೆ ಸಾರ್ವಜನಿಕ ಅಹವಾಲು ನಡೆಸಲಿದೆ. ಈ ಅಹವಾಲನ್ನು ಪ್ರಾಥಮಿಕ ಮತ್ತು ಪ್ರೌಢಶಾಲಾ ಸಚಿವ ರತ್ನಾಕರ್ ಕಿಮ್ಮನೆ ಅವರು ಉದ್ಘಾಟಿಸಲಿದ್ದಾರೆ. ನ್ಯಾ.ಎ.ಜೆ.ಸದಾಶಿವ ಮತ್ತು ಚಂದ್ರಶೇಖರಯ್ಯ, ಡಾ.ನಿರಂಜನಾರಾಧ್ಯ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.