ಬೆಂಗಳೂರು ನಗರ

ಬಿಸ್ಕೆಟ್ ಕೊಳ್ಳುವ ನೆಪದಲ್ಲಿ ಬಂದು ರು. 33 ಸಾವಿರ ದರೋಡೆ

Published On :

ಬೆಂಗಳೂರು: ಬಿಸ್ಕಿಟ್ ಕೊಳ್ಳುವ ನೆಪದಲ್ಲಿ ಅರ್ಧ ಮುಚ್ಚಿದ್ದ ಮಳಿಗೆಯೊಂದಕ್ಕೆ ನುಗ್ಗಿದ ದರೋಡೆಕೋರರು ಮಳಿಗೆ ಮಾಲೀಕ ಹಾಗೂ ಕೆಲಸಗಾರನ ಮೇಲೆ ಹಲ್ಲೆ ನಡೆಸಿ 33 ಸಾವಿರ ನಗದು ದೋಚಿರುವ ಘಟನೆ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ನಡೆದಿದೆ.
ಕೆಬಿಎಸ್ ಫೇರ್ ಪ್ರೈಸ್ ಮಳಿಗೆಯಲ್ಲಿ ಮಾಲೀಕ ಮೋಹನ್ ಕುಮಾರ್ ಎಂಬುವವರು ಬುಧವಾರ ರಾತ್ರಿ 9.50ರ ಸುಮಾರಿಗೆ ಅರ್ಧ ಭಾಗ ಶಟರ್ ಎಳೆದು ಸಣ್ಣ-ಪುಟ್ಟ ಕೆಲಸ ನಡೆಸುತ್ತಿದ್ದರು. ಈ ವೇಳೆ ಬಿಸ್ಕಿಟ್ ಹಾಗೂ ಬೂಸ್ಟ್ ಕೇಳುವ ನೆಪದಲ್ಲಿ ಮೂವರು ದುಷ್ಕರ್ಮಿಗಳು ಆಗಮಿಸಿದ್ದಾರೆ. ಬಿಸ್ಕಿಟ್ ಹಾಗೂ ಬೂಸ್ಟ್ ಪಡೆದ ನಂತರ ಜೆಮಿನಿ ಎಣ್ಣೆಯನ್ನು ಕೇಳಿದ್ದಾರೆ. ಆಗ ಮಳಿಗೆ ಕೆಲಸಗಾರ ಗಂಗರಾಜು ಎಂಬುವವರು ಎಣ್ಣೆ ತರಲು ಒಳಗೆ ಹೋದಾಗ ದುಷ್ಕರ್ಮಿಗಳ ಪೈಕಿ ಒರ್ವ ರಿಂಚ್‌ನಿಂದ ಮೋಹನ್‌ಕುಮಾರ್ ಅವರಿಗೆ ಹಲ್ಲೆ ನಡೆಸಿದ್ದಾನೆ. ಬಳಿಕ ಕೆಲಸಗಾರ ಗಂಗರಾಜು ಎಂಬಾತನಿಗೂ ಹಲ್ಲೆ ನಡೆಸಿದ್ದಾನೆ. ನಂತರ ದುಷ್ಕರ್ಮಿಗಳು ಮೋಹನ್ ಬಳಿ ಇದ್ದ ಕ್ಯಾಷ್ ಕೌಂಟರ್ ಬೀಗ ಪಡೆದು ಅದರಲ್ಲಿಟ್ಟಿದ್ದ ರು. 33 ಸಾವಿರ ನಗದು ಹಾಗೂ ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಕಮರ್ಷೀಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.