'ತಿಂಗಳೊಳಗೆ ಆರ್ಥಿಕ ಗಣತಿ ಕಾರ್ಯ'
ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಆರ್ಥಿಕ ಗಣತಿ ಕಾರ್ಯವನ್ನು ನವೆಂಬರ್ 30ರೊಳಗೆ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ 6ನೇ ಆರ್ಥಿಕ ನಗರ ಗಣತಿ ಜಿಲ್ಲಾ ಆಯುಕ್ತ ವಿ. ಶಂಕರ್ ತಿಳಿಸಿದ್ದಾರೆ.
ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳ 6ನೇ ಆರ್ಥಿಕ ಗಣತಿ ಕುರಿತ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿನ ಸಂಘಟಿತ ಹಾಗೂ ಅಸಂಘಟಿತ ವಿಭಾಗಗಳಲ್ಲಿ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಹೊಂದಿರುವ ಉದ್ಯಮಗಳ ಪಟ್ಟಿ ತಯಾರಿಸಲು ರಾಜ್ಯದಲ್ಲಿ 6ನೇ ಆರ್ಥಿಕ ಗಣತಿ ಕಾರ್ಯ ಕೈಗೊಳ್ಳಲಾಗಿದೆ ಎಂದರು.
ಅಧಿಕಾರಿಗಳು ಗಣತಿ ಕಾರ್ಯದಲ್ಲಿ ತೊಡಗುವ ಸಿಬ್ಬಂದಿಯ ಪಟ್ಟಿಯನ್ನು ಅಕ್ಟೋಬರ್ 23ರೊಳಗೆ ಸಲ್ಲಿಸಬೇಕು. ತಾಲೂಕು ಮಟ್ಟದ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ಅಕ್ಟೋಬರ್ 29 ಹಾಗೂ 30ರಂದು ತರಬೇತಿ ನೀಡಲಾಗುವುದು ಎಂದರು.
ದೀಪಾವಳಿ ಪ್ರಯುಕ್ತ ಶ್ರೀ ಸಾಯಿ ಗೋಲ್ಡ್ ರಿಯಾಯಿತಿ
ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಬಸವನಗುಡಿ ಮತ್ತು ಪದ್ಮನಾಭನಗರದಲ್ಲಿರುವ ಶ್ರೀಸಾಯಿ ಗೋಲ್ಡ್ ಪ್ಯಾಲೇಸ್ ಬಂಪರ್ ಆಫರ್‌ಗಳನ್ನು ಬಿಡುಗಡೆ ಮಾಡಿದೆ.
ವಜ್ರ, ಮಾಣಿಕ್ಯ, ಪಚ್ಚೆಯಂತ ಬೆಲೆಬಾಳುವ ಹರಳುಗಳುಳ್ಳ ಆಭರಣಗಳು, ಸಾಂಪ್ರದಾಯಿಕ ಆಭರಣಗಳು, ಪೋಚಂಪಲ್ಲಿ, ಮೊಳಕಾಲ್ಮೂರು, ಪ್ರಿಂಟೆಡ್ ಹ್ಯಾಂಡ್ಲೂಮ್, ವಧುವಿನ ಸೀರೆಗಳು ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಅಭರಣಗಳ ಖರೀದಿಯ ಮೇಲೆ ಶೂನ್ಯ ವೇಸ್ಟೇಜ್ ಮತ್ತು ಅತೀ ಕಡಿಮೆ ಮೇಕಿಂಗ್ ಚಾರ್ಜ್ ಹಾಗೂ ಸೀರೆಗಳ ಮೇಲೆ ಶೇ.20ರವರೆಗೆ ರಿಯಾಯಿತಿ, 3000 ಮೇಲ್ಪಟ್ಟು ಚಿನ್ನಾಭರಣಗಳ ಖರೀದಿಗೆ ಒಂದು ಲಕ್ಕಿ ಕೂಪನ್ ಉಚಿತವಾಗಿ ಪಡೆಯಬಹುದಾಗಿದ್ದು, 8ಲಕ್ಷ ಮೌಲ್ಯದವರೆಗೂ ಬಹುಮಾನ ಗೆಲ್ಲುವ ಸುವರ್ಣ ಅವಕಾಶ ಗ್ರಾಹಕರಿಗೆ ಇದೆ ಎಂದು ಶ್ರೀಸಾಯಿ ಗೋಲ್ಡ್ ಪ್ಯಾಲೇಸ್‌ನ ಮಾಲೀಕರಾದ ಟಿ.ಎ. ಶರವಣ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

