ಬೆಂಗಳೂರು ನಗರ

ನ್ಯಾಕ್ ಮಾದರಿ ಸ್ಯಾಕ್

Published On :

ಕ.ಪ್ರ. ವಾರ್ತೆ, ಬೆಂಗಳೂರು, ನ. 25-
ನ್ಯಾಕ್ ಮಾದರಿಯಲ್ಲಿಯೇ ರಾಜ್ಯ ಮಟ್ಟದ ಮಾನ್ಯತೆ ಪ್ರಮಾಣೀಕರಿಸುವ ಸಂಸ್ಥೆ ಹುಟ್ಟುಹಾಕಬೇಕು ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಿಗೆ ಮನವಿ ಮಾಡಿದ್ದಾರೆ.
ದೇಶದಲ್ಲಿನ ಸಾವಿರಾರು ಕಾಲೇಜುಗಳಿಗೆ ಮಾನ್ಯತೆ ನೀಡಲು ನ್ಯಾಕ್‌ಗೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ರಾಜ್ಯಮಟ್ಟದ್ಲಲಿಯೂ ನ್ಯಾಕ್ ತರಹದ ಸಂಸ್ಥೆಯ ಅಗತ್ಯವಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಸ್ಯಾಕ್ ಎಂಬ ಸಂಸ್ಥೆ ಪ್ರಾರಂಭಿಸಲು ಸರ್ಕಾರ ತೀರ್ಮಾನಿಸಿದೆ. ಇದಕ್ಕೆ ಅಗತ್ಯ ನೆರವನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಅವರು ನಗರದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದ ಸಮಾವೇಶದಲ್ಲಿ ಹೇಳಿದರು.

ಗಮನಸೆಳೆದ ಉ.ಪ್ರ ಸಚಿವ!: ಉತ್ತರ ಪ್ರದೇಶದ ಸಚಿವರೆಂದ ಕೂಡಲೇ ತಲೆಯಲ್ಲಿ ಬರುವ ಕಲ್ಪನೆಗಳೇ ವಿಚಿತ್ರವಾಗಿರುತ್ತವೆ. ಆದರೆ ಸಮಾವೇಶಕ್ಕೆ ಆಗಮಿಸಿದ್ದ 7 ಸಚಿವರಲ್ಲಿ ಉತ್ತರ ಪ್ರದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಅಭಿಷೇಕ್ ಮಿಶ್ರಾ ಎಲ್ಲರ ಗಮನ ಸೆಳೆದರು, ಸ್ಪಷ್ಟ ಇಂಗ್ಲಿಷ್ ಹಾಗೂ ಶಿಕ್ಷಣ ಕುರಿತಂತೆ ಉತ್ತಮ ಚಿಂತನೆಗಳನ್ನು ಪ್ರಕಟಿಸಿದರು. ಅಂದಹಾಗೆ ಇವರು ವೃತ್ತಿಯಲ್ಲಿ ಐಟಿ ಪ್ರಾಧ್ಯಾಪಕರು.
ಸಮಾವೇಶದಲ್ಲಿ 6 ರಾಜ್ಯಗಳ ಸಚಿವರು, 17 ರಾಜ್ಯಗಳ ಪ್ರಧಾನ ಕಾರ್ಯದರ್ಶಿ ಹಾಗೂ ಉಳಿದ ರಾಜ್ಯಗಳಿಂದ ನಿರ್ದೇಶಕರು ಹಾಜರಿದ್ದರು.
ಸಚಿವರ ಪೈಕಿ ಆಸ್ಸಾಂನಿಂದ ಡಾ.ಹಿಮಾಂತ ಬಿಸ್ವಾ ಶರ್ಮಾ, ಛತ್ತೀಸ್‌ಗಡದಿಂದ ರಾಮ್ ವಿಚಾರ್, ಹರ್ಯಾಣದಿಂದ ಗೀತಾ ಭುಕ್ಕಲ್, ನಾಗಾಲ್ಯಾಂಡ್‌ನಿಂದ ದಿಯೋ ನುಕೂಯ್, ಸಿಕ್ಕಿಂನಿಂದ ಎನ್.ಕೆ.ಪರ್ಧನ್ ಹಾಗೂ ಉತ್ತರ ಪ್ರದೇಶ ಸರ್ಕಾರದ ಪ್ರೊ.ಅಭಿಷೇಕ್ ಮಿಶ್ರಾ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.