ಬೆಂಗಳೂರು ನಗರ

'ಪುತಿನಗೆ ಜ್ಞಾನಪೀಠ ದೊರೆಯಬೇಕಿತ್ತು'

Published On :

ಬೆಂಗಳೂರು: ಪು.ತಿ.ನ ಅವರಂತಹ ಸಮರ್ಥ ಕವಿಗೆ ನ್ಯಾಯವಾಗಿ ಜ್ಞಾನಪೀಠ ಪ್ರಶಸ್ತಿ ದೊರೆಯಬೇಕಿತ್ತು ಎಂದು ನಾಡೋಜ ಪ್ರೊ.ಜಿ. ವೆಂಕಟಸುಬ್ಬಯ್ಯ ಅಭಿಪ್ರಾಯಪಟ್ಟರು.
ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ 'ಚತುರ್ಮುಖ'ದಿಂದ ಹಮ್ಮಿಕೊಳ್ಳಲಾಗಿದ್ದ ಜಿ. ವೆಂಕಟಸುಬ್ಬಯ್ಯ 101ರ ಸಂಭ್ರಮ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಾಹಿತಿಗಳು ಹೊರಗಣ್ಣಿನಲ್ಲಿ ಒಳನೋಟ ಹೊಂದಿರುತ್ತಾರೆ. ಅಂತರಂಗದಲ್ಲಿ ಯೋಚನೆ ಮಾಡಿ ಸಾಹಿತ್ಯ ರಚನೆ ಮಾಡುತ್ತಾರೆ. ಇತರರ ಅಂತರಂಗವನ್ನು ಅರಿತಾಗ ಅವರ ಯೋಚನೆಗಳು ನಮಗೆ ಕಾಣಿಸುತ್ತದೆ ಎಂದು ಹೇಳಿದರು. ನನ್ನ ಹೊರಗಣ್ಣು ಒಳಗೆ ಹೋಗುತ್ತಿರುವಾಗ ಡಾ. ಕಮಲಾ ಹೆಮ್ಮಿಗೆ ಅವರ 'ಒಳಗಣ್ಣಿನ ಹೊರನೋಟ' ಎಂಬ ಪುಸ್ತಕ ಬಿಡುಗಡೆ ಮಾಡಿದ್ದೇನೆ. 100 ವರ್ಷ ದಾಟಿದ ಮೇಲೆ ಇಂತಹ ಪುಸ್ತಕ ಬಿಡುಗಡೆ ಮಾಡಲು ಸಾಮರ್ಥ್ಯವಿರಬೇಕು ಎಂದರು.
ಗೌರಿ ಸುಂದರ್ ಸಂಪಾದಿಸಿದ ಜಿ.ವಿ. ಶಬ್ದ ಭಂಡಾರಿ, ಎನ್. ಆನಂದರಾಮರಾವ್ ಅವರ ನಿವೃತ್ತಿ ನೆಮ್ಮದಿ, ಎಚ್.ಆರ್. ಪದ್ಮಿನಿ ಅವರ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಪದ್ಮಭೂಷಣ ಆರ್.ಕೆ. ಶ್ರೀಕಂಠನ್, ಡಾ. ಭುಜಂಗಶೆಟ್ಟಿ, ಡಾ.ಸಿ.ಎಸ್. ಊರ್ಮಿಳಾ, ಡಾ. ಕಮಲಾ ಹೆಮ್ಮಿಗೆ, ಡಾ. ಗೀತಾ ರಾಮಾನುಜಂ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.