ಬೆಂಗಳೂರು ನಗರ

ಕನ್ನಡಕ್ಕೆ ಮಾನ್ಯತೆ ನೀಡಿ: ಶಂಕರಮೂರ್ತಿ

Published On :

ಕ.ಪ್ರ.ವಾರ್ತೆ ್ಣ ಬೆಂಗಳೂರು ್ಣ ಮಾ.29
ಆಂಗ್ಲ ಭಾಷೆ ಕಲಿತವರೇ ದೊಡ್ಡವರು ಎಂಬ ಅಹಂ ಬಿಟ್ಟು ಬಿಡಿ. ಪ್ರತಿಯೊಂದು ರಾಜ್ಯ ಮತ್ತು ರಾಷ್ಟ್ರದಲ್ಲಿನ ಆಡಳಿತ ಭಾಷೆ ಕಲಿಯುವುದು ಮುಖ್ಯವೇ ಹೊರತು ಆಂಗ್ಲ ಭಾಷೆಯನ್ನಲ್ಲ ಎಂದು ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್. ಶಂಕರ ಮೂರ್ತಿ ಹೇಳಿದರು.
ಕನ್ನಡ ಗಣಕ ಉಚಿತ ತರಬೇತಿ ಕೇಂದ್ರ ಶುಕ್ರವಾರ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ತರಬೇತಿ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ನಮ್ಮ ಕನ್ನಡ ಭಾಷೆ ಆಡಳಿತ ಭಾಷೆಯಾಗಿ ಒಪ್ಪಿಕೊಳ್ಳುವುದಕ್ಕೆ ನಮ್ಮ ಜನರು ಸಿದ್ಧರಿಲ್ಲ. ಬೇರೆ ರಾಜ್ಯ- ರಾಷ್ಟ್ರಗಳಲ್ಲಿ ಆಂಗ್ಲ ಭಾಷೆ ಮುಖ್ಯವಾಗುವುದಿಲ್ಲ. ಬದಲಿಗೆ ಅಲ್ಲಿನ ಆಡಳಿತ ಭಾಷೆ ಪ್ರಮುಖ ಪಾತ್ರವಹಿಸುತ್ತಿದೆ.
ಹೀಗಾಗಿ ನಾವು ಆಂಗ್ಲಭಾಷೆಗೆ ಹೆಚ್ಚಿನ ಬೆಲೆ ನೀಡುವುದು ಬಿಟ್ಟು, ನಮ್ಮ ರಾಜ್ಯದ ಆಡಳಿತ ಭಾಷೆಯಾದ ಕನ್ನಡಕ್ಕೆ ಹೆಚ್ಚಿನ ಬೆಲೆ ನೀಡಬೇಕು ಎಂದರು.
ಆಂಗ್ಲ ಭಾಷೆ ಕಲಿಯುವುದು ದೊಡ್ಡ ವಿಷಯವೇನಲ್ಲ. ಅವಶ್ಯ ಬಿದ್ದಾಗ ನಾವು ಯಾವ ಭಾಷೆ ಬೇಕಾದರೂ ಕಲಿಯಬಹುದು. ನಾನು ಕನ್ನಡದಲ್ಲೇ ಎಸ್‌ಎಸ್‌ಎಲ್‌ಸಿವರೆಗೂ ಓದಿದೆ. ಆದರೆ ಇಂದು ನಾನು ಆಂಗ್ಲ ಭಾಷೆಯಲ್ಲೂ ಮಾತನಾಡುವ ಸಾಮರ್ಥ್ಯ ಹೊಂದಿದ್ದೇನೆ. ಆಂಗ್ಲ ಭಾಷೆ ಕಲಿಯಬೇಕಾದ ಅವಶ್ಯ ಇತ್ತು. ಹೀಗಾಗಿ ಕಷ್ಟಪಟ್ಟು ಆಂಗ್ಲ ಭಾಷೆ ಕಲಿತೆ ಎಂದರು.
ಸಾಹಿತಿ ಕೋ.ಚೆನ್ನಬಸಪ್ಪ ಮಾತನಾಡಿ, ಬೇರೊಂದು ಭಾಷೆಯಿಂದ ಪದಗಳನ್ನು ಕನ್ನಡಕ್ಕೆ ತೆಗೆದುಕೊಳ್ಳುವುದರಿಂದ ಕನ್ನಡ ಭಾಷೆಗೆ ಯಾವುದೇ ತೊಂದರೆ ಇಲ್ಲ. ಇದು ಭಾಷಾ ಅಭಿವೃದ್ಧಿಗೆ ಸಹಾಯ ಮಾಡುತ್ತದೆ.
ನಾವು ಓದುತ್ತಿದ್ದ ಕಾಲದಲ್ಲಿ ಈ ರೀತಿಯ ತಂತ್ರಜ್ಞಾನಗಳು ಇರಲಿಲ್ಲ. ಇಂದು ಸಾಕಷ್ಟು ತಂತ್ರಜ್ಞಾನಗಳಿದ್ದು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪಕಾರ್ಯದರ್ಶಿ ಸುಧಾಕರ ಶೆಟ್ಟಿ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಬಿ.ಅಶೋಕ ಕುಮಾರ್, ಕನ್ನಡ ಅನುಷ್ಠಾನ ಮಂಡಳಿ ಸಂಸ್ಥಾಪಕ ಆರ್.ಎ. ಪ್ರಸಾದ್ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.