ವಧು-ವರರಿಂದ ಅರ್ಜಿ ಆಹ್ವಾನ
ಬೆಂಗಳೂರು: ತ್ರಿಮತಸ್ಥ ಬ್ರಾಹ್ಮಣ ವಧುವರಾನ್ವೇಷಣ ಕೇಂದ್ರ ವಧು-ವರರಿಂದ ಅರ್ಜಿ ಆಹ್ವಾನಿಸಿದೆ. ವಿವಾಹಾಸಕ್ತ ವಿಚ್ಛೇದಿತ, ವಿಧವೆ, ಕಡುಬಡತನಕ್ಕೆ ಸೇರಿದ ಕನ್ಯೆಯರು, ಅನಾಥೆ, ಮಠ ಅಥವಾ ದೇವಸ್ಥಾನಗಳಲ್ಲಿ ಆಶ್ರಯ ಪಡೆದಿರುವ ವಯಸ್ಸಾಗಿದ್ದರೂ ಮದುವೆ ಆಗಿರದ ಕನ್ಯೆಯರ ಪೋಷಕರು ಜಾತಕದ 2 ಪ್ರತಿ, ಇತ್ತೀಚೆಗಿನ 2 ಭಾವಚಿತ್ರಗಳನ್ನು ನೀಡಿ ಹೆಸರು ನೊಂದಾಯಿಸಿಕೊಳ್ಳಬಹುದು. ಮಾಹಿತಿಗೆ- ಬ್ರಾಹ್ಮಣ ವಧುವರರ ವೇದಿಕೆ, ಶ್ರೀನಿಧಿ, 11ನೇ ಮೇನ್, ಪೂರ್ಣಪ್ರಜ್ಞನಗರ, ಉತ್ತರಹಳ್ಳಿ, ಫೋನ್- 9448368257.
31ರಂದು ಉಚಿತ ಕಾರ್ಯಾಗಾರ
ಅನರ್ಘ್ಯ ಐಎಎಸ್ ಅಕಾಡೆಮಿ ವತಿಯಿಂದ ರಾಜ್ಯ ಮತ್ತು ಕೇಂದ್ರ ಲೋಕಸೇವಾ ಆಯೋಗದ ಪೂರ್ವಭಾವಿ ಪರೀಕ್ಷೆಗಳಿಗೆ ಮಾ. 31ರಂದು ಉಚಿತ ಮಾರ್ಗದರ್ಶನ ಹಾಗೂ ಕಾರ್ಯಾಗಾರ ಹಮ್ಮಿಕೊಂಡಿದೆ. ಪೂರ್ವಭಾವಿ ಪರೀಕ್ಷೆಯಲ್ಲಿ ಸಾಮಾನ್ಯ ಅಧ್ಯಯನದ ಬಗ್ಗೆ ್ಣಅಭ್ಯರ್ಥಿಗಳಿಗೆ ಉಚಿತ ಮಾರ್ಗದರ್ಶನ ಹಾಗೂ ಕಾರ್ಯಾಗಾರವನ್ನು ಸಂಸ್ಥೆಯಲ್ಲಿ ಬೆಳಗ್ಗೆ 10ಕ್ಕೆ ಆಯೋಜಿಸಿದೆ. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಮನೋಜ್ ಎಂ.ಕೆ. ಅವರನ್ನು ಮೊಬೈಲ್ 99166 08300 ಮೂಲಕ ಸಂಪರ್ಕಿಸಿ.
ನೆಹರು ತಾರಾಲಯ ಪ್ರದರ್ಶನ ಪುನಾರಂಭ
ಜವಾಹರಲಾಲ್ ನೆಹರು ತಾರಾಲಯವು ಹೆಚ್ಚುವರಿ ಪ್ರದರ್ಶನದೊಂದಿಗೆ ಮಾ. 27ರಿಂದ ಸಾರ್ವಜನಿಕ ಪ್ರದರ್ಶನಗಳನ್ನು ಪುನಾರಂಭಿಸಿದೆ. ಚಂದ್ರ- ಒಂದು ವೈಜ್ಞಾನಿಕ ಚಿತ್ರಣ ಪ್ರದರ್ಶನವನ್ನು ಸಂಜೆ 5.30ಕ್ಕೆ ಹೆಚ್ಚುವರಿಯಾಗಿ ಹಾಗೂ ಬೇಸಿಗೆ ರಜೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ತಾರಾಲಯದ ಎಲ್ಲಾ ಪ್ರದರ್ಶನಗಳಿಗೆ ಟಿಕೆಟುಗಳನ್ನು ಏಳು ದಿನಗಳ ಮುಂಗಡವಾಗಿ ಬೆಳಗ್ಗೆ 11ರಿಂದ ಮಧ್ಯಾಹ್ನ 12.30ರವರೆಗೆ ಖುದ್ದಾಗಿ ಪಡೆಯಬಹುದು. ಸಾರ್ವಜನಿಕರು ಹೆಚ್ಚಿನ ಮಾಹಿತಿಗೆ- 2226 6084 ಅಥವಾ 2237 9725 ಸಂಪರ್ಕಿಸಿ. ಅಥವಾ ವೆಬ್‌ಸೈಟ್ www.taralaya.org ಸಂದರ್ಶಿಸಿ.
ಏ.28ರಿಂದ ಬೃಹತ್ ಜಾಥಾ
ಭ್ರಷ್ಟಾಚಾರ ನಿರ್ಮೂಲನೆಗಾಗಿ ಜನಲೋಕಪಾಲ್ ಮಸೂದೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಭ್ರಷ್ಟಾಚಾರ ವಿರುದ್ಧ ಸಂಘಟನೆಗ ಏಪ್ರಿಲ್ 28ರಿಂದ ಬೆಂಗಳೂರಿನಿಂದ ದೆಹಲಿಯವರೆಗೆ ಬೃಹತ್ ಜಾಥಾ ಹಮ್ಮಿಕೊಂಡಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಕೇಂದ್ರ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಸಂಘಟನೆಗೆ ತಾವು ಬೆಂಬಲ ನೀಡುವುದಾಗಿ ತಿಳಿಸಿದರು. ಚುನಾವಣೆ ನಂತರ ಬೆಳಗಾವಿ, ಮಂಗಳೂರು, ಮೈಸೂರು, ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ ಆರು ಜಿಲ್ಲೆಗಳಲ್ಲಿ ಸಾರ್ವಜನಿಕ ಸಭೆ ನಡೆಸಿ ಜನರನ್ನು ಹೋರಾಟಕ್ಕೆ ಆಹ್ವಾನಿಸುವುದಾಗಿ ಅವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

