ಬೆಂಗಳೂರು ನಗರ

ಸುರೇಂದ್ರಬಾಬುಗೆ ಜಾಮೀನು ನಕಾರ

ಕಿರುತೆರೆ ನಟಿ ಹೇಮಶ್ರೀ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸುರೇಂದ್ರಬಾಬುಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.

Published On :

ಕ.ಪ್ರ.ವಾರ್ತೆ  ಬೆಂಗಳೂರು  ಮಾ.19-
ಕಿರುತೆರೆ ನಟಿ ಹೇಮಶ್ರೀ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸುರೇಂದ್ರಬಾಬುಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
ಹೇಮಶ್ರೀ ಮೇಲೆ ಕ್ಲೋರೋಫಾರಂ ಪ್ರಯೋಗಿಸಿದ್ದು ಹತ್ಯೆ ಮಾಡುವ ಉದ್ದೇಶದಿಂದಲ್ಲ, ಆಕೆಯೊಂದಿಗೆ ದೈಹಿಕ ಸಂಪರ್ಕ ಹೊಂದುವ ಸಲುವಾಗಿ. ಕೊಲೆ ಮಾಡುವ ಯಾವುದೇ ಉದ್ದೇಶವಿರಲಿಲ್ಲ. ಇದೊಂದು ಅಚಾತುರ್ಯವಷ್ಟೇ ಎಂದು ಸುರೇಂದ್ರಬಾಬು ಪರ ವಕೀಲರು ವಾದಿಸಿದರು.
ಇದನ್ನು ಅಂಗೀಕರಿಸದ ನ್ಯಾ.ಶ್ರೀಧರ್‌ರಾವ್ ಅವರಿದ್ದ ಏಕಸದಸ್ಯ ಪೀಠ, ಕೊಲೆ ಮಾಡುವ ಉದ್ದೇಶವಿರದಿದ್ದರೂ ಘಟನೆ ನಡೆದಿರುವುದು ಸತ್ಯ. ಸಣ್ಣ ಪ್ರಮಾಣದ್ದಾಗಲಿ, ದೊಡ್ಡದಾಗಲಿ, ಅಪರಾಧ ಅಪರಾಧವೇ ಎಂದು ಅಭಿಪ್ರಾಯಪಟ್ಟು, ಜಾಮೀನನ್ನು ನಿರಾಕರಿಸಿದೆ.
ಸುರೇಂದ್ರಬಾಬು ಹಾಗೂ ಹೇಮಾಶ್ರೀ ಇಬ್ಬರು ಪೋಷಕರ ಸಮ್ಮುಖದಲ್ಲೇ ವಿವಾಹವಾಗಿದ್ದರು. ಆದರೆ, ಇಬ್ಬರಲ್ಲೂ ಸಾಕಷ್ಟು ವಯಸ್ಸಿನ ಅಂತರವಿದ್ದ ಹಿನ್ನೆಲೆಯಲ್ಲಿ, ಹೇಮಾಶ್ರೀ ದೈಹಿಕ ಸಂಬಂಧಕ್ಕೆ ಸಹಕರಿಸಿರಲಿಲ್ಲ. ಆದ್ದರಿಂದ ಆಕೆಗೆ ಕ್ಲೋರೋಫಾರಂ ನೀಡಿ ಪ್ರಜ್ಞೆ ತಪ್ಪಿಸಿ ದೈಹಿಕ ಸಂಪರ್ಕ ಹೊಂದಲು ಸುರೇಂದ್ರಬಾಬು ಪ್ರಯತ್ನ ನಡೆಸಿರಬಹುದು ಎಂದು ವಕೀಲರು ಸಮರ್ಥಿಸಿಕೊಂಡರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರ, ಸುರೇಂದ್ರಬಾಬು ರಾಜಕೀಯ ಹಿನ್ನೆಲೆಯುಳ್ಳ ವ್ಯಕ್ತಿಯಾಗಿದ್ದು, ಜಾಮೀನಿನ ಮೇಲೆ ಹೊರಬಂದಲ್ಲಿ ಸಾಕ್ಷಿ ನಾಶಗೊಳಿಸುವ ಸಾಧ್ಯತೆಗಳಿವೆ. ಹೇಮಶ್ರೀಗೆ ಕ್ಲೋರೋಫಾರಂ ನೀಡಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಅಲ್ಲದೆ, 8 ಜನರು ನೀಡಿರುವ ಹೇಳಿಕೆಗಳು ಕೂಡ ಸುರೇಂದ್ರಬಾಬುಗೆ ವಿರುದ್ಧವಾಗಿದೆ. ಆದ್ದರಿಂದ ಅವರಿಗೆ ಜಾಮೀನು ನೀಡಬಾರದು ಎಂದು ಮನವಿ ಮಾಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.