ಬೆಂಗಳೂರು ನಗರ

ತೆರಿಗೆ 'ಮರೆ' ಸಿದ್ದಯ್ಯ ದಾಳಿ

Published On :

ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷ ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತ ಸಿದ್ದಯ್ಯ ತೆರಿಗೆ ಮರೆಮಾಚುವ ಅಪಾರ್ಟ್‌ಮೆಂಟ್‌ಗಳ ಬೆನ್ನುಹತ್ತಿದ್ದಾರೆ. ರಾಜರಾಜೇಶ್ವರಿನಗರ, ಬೊಮ್ಮನಹಳ್ಳಿ ಹಾಗೂ ಯಲಹಂಕ ವಲಯದ ಅನೇಕ ಅಪಾರ್ಟ್‌ಮೆಂಟ್‌ಗಳು ಹಾಗೂ ಬೃಹತ್ ಕಟ್ಟಡಗಳಿಗೆ ಭೇಟಿ ನೀಡಿ ತೆರಿಗೆ ಮರುಮೌಲ್ಯಮಾಪನ ಮಾಡಿದರು. ಯಲಹಂಕದ ಶೋಭಾ ಕ್ರೈಸಂತೆಮಮ್, ಸೆಂಚುರಿ ಮಾರ್ವೆಲ್, ಪೂರ್ವಾಂಕರ ಪ್ರಾಜೆಕ್ಟ್, ನಾಗಾರ್ಜುನ ಆಸ್ಟೆರ್ ಪಾರ್ಕ್ ಹಾಗೂ ಯಲಹಂಕ ನ್ಯೂಟೌನ್‌ನ ಕೆಲವು ಅಪಾರ್ಟ್‌ಮೆಂಟ್‌ಗಳಿಗೆ ಭೇಟಿ ನೀಡಿದರು. ಆ ಅಪಾರ್ಟ್‌ಮೆಂಟ್‌ಗಳು ಘೋಷಿಸಿಕೊಂಡಿದ್ದ ತೆರಿಗೆಯನ್ನು ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಮರುಮೌಲ್ಯ ಮಾಪನ ಮಾಡಿದರು. ನಂತರ 1818 ಫ್ಲ್ಯಾಟ್‌ಗಳಿಗೆ 94 ಲಕ್ಷ ಆಸ್ತಿ ತೆರಿಗೆ ನಿಗದಿ ಮಾಡಿದರು. ಇದೇ ವೇಳೆ ಕಟ್ಟಡ ಮಾಲೀಕರು ಮಾರ್ಚ್ 30ರ ಒಳಗೆ ಪೂರ್ಣ ತೆರಿಗೆ ಪಾವತಿಸುವಂತೆ ಸೂಚಿಸಿದರು. ಎಲ್ಲರಿಗೂ ನೋಟಿಸ್ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸಿದ್ದಯ್ಯ ಆದೇಶಿಸಿದರು.

ಜೆಟ್ಟಿಂಗ್, ಸಕ್ಕಿಂಗ್ ಯಂತ್ರಗಳ ಸೇವೆ
ಬೆಂಗಳೂರು ಜಲಮಂಡಳಿಯ 12 ಜೆಟ್ಟಿಂಗ್ ಹಾಗೂ 2 ಸಕ್ಕಿಂಗ್ ಯಂತ್ರಗಳು ಮಾ. 20ರಂದು ಪೂರ್ವ ವಿಭಾಗದ ಎಚ್.ಆರ್.ಬಿ.ಆರ್, ಒ.ಎಂ.ಬಿ.ಆರ್, ಎಚ್.ಬಿ.ಆರ್(ಕಲ್ಯಾಣ ನಗರ) ಮತ್ತು ಮಾಗಡಿ ರಸ್ತೆ, ಹೊಸಹಳ್ಳಿ ಪಂಪ್‌ಹೌಸ್, ಮೈಸೂರು ರಸ್ತೆ ಹಾಗೂ ಪಶ್ಚಿಮ ಉಪವಿಭಾಗದ ಪ್ರದೇಶಗಳ ಒಳಚರಂಡಿ ಮಾರ್ಗಗಳ ನಿರ್ವಹಣಾ ಕಾರ್ಯಾಚರಣೆ ನಡೆಸಲಿವೆ.  ಅದೇ ದಿನದಂದು 6 ಹೂಳೆತ್ತುವ ವಾಹನಗಳು ಆರ್.ಟಿ.ನಗರ, ಸಂಜಯ ನಗರ, ನ್ಯೂ ಬಿಇಎಲ್ ರಸ್ತೆ, ಆನಂದನಗರ, ಗಂಗಾನಗರ ಪ್ರದೇಶಗಳಲ್ಲಿನ ಮ್ಯಾನ್‌ಹೋಲ್‌ಗಳಲ್ಲಿ ಹೂಳೆತ್ತುವ ಕಾರ್ಯ ನಡೆಸಲಿವೆ. ಆದ್ದರಿಂದ ಮೇಲೆ ತಿಳಿಸಿದ ಪ್ರದೇಶಗಳಲ್ಲಿ ಒಳ ಚರಂಡಿ ವ್ಯವಸ್ಥೆಯಲ್ಲಿ ಅಡಚಣೆಗಳಿದ್ದಲ್ಲಿ ಸಾರ್ವಜನಿಕರು ಮಾ. 20ರಂದು ಜೆಟ್ಟಿಂಗ್ ಹಾಗೂ ಸಕ್ಕಿಂಗ್ ಯಂತ್ರಗಳ ಸೇವೆ ಪಡೆದುಕೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಮಲ್ಲರೆಡ್ಡಿ-9845444150, ಸುರೇಶ್-9845444069, ರಾಜಶೇಖರಪ್ಪ-9845444025 ಅವರನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.