ಏ.1ರಿಂದ ಲಾರಿ ಮುಷ್ಕರ
ಕೇಂದ್ರ ಸರ್ಕಾರ ಥರ್ಡ್ ಪಾರ್ಟಿ ವಿಮಾ ಕಂತಿನ ದರ ಹೆಚ್ಚಿಸಿರುವ ಕ್ರಮಕ್ಕೆ ವಿರೋಧ
ಬೆಂಗಳೂರು: ಕೇಂದ್ರ ಸರ್ಕಾರ ಥರ್ಡ್ ಪಾರ್ಟಿ ವಿಮಾ ಕಂತಿನ ದರ ಹೆಚ್ಚಿಸಿರುವ ಕ್ರಮ ವಿರೋಧಿಸಿ ಕರ್ನಾಟಕ ರಾಜ್ಯ ಲಾರಿ ಮಾಲೀಕರ ಮತ್ತು ಏಜೆಂಟರ ಸಂಘಗಳ ಒಕ್ಕೂಟ ಏ.1ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಒಕ್ಕೂಟದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ, ಈಗಾಗಲೇ ಅಧಿಕ ಟೋಲ್ ಸಂಗ್ರಹ, ಮಿತಿ ಮೀರಿದ ಟೈರ್ ದರ, ಇಂಧನ ದರ ಹಾಗೂ ಬಿಡಿಭಾಗಗಳು ದುಬಾರಿಯಾಗಿದ್ದು, ಲಾರಿ ಮಾಲಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರ ಏಕಾಏಕಿ ಥರ್ಡ್ ಪಾರ್ಟಿ ವಿಮಾ ಕಂತಿನ ಹಣವನ್ನು ಶೇ.107ರಷ್ಟು ಏರಿಸಿದೆ. ಇದನ್ನು ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದರು.
ಸಾಗಣೆ ಉದ್ಯಮಕ್ಕೆ ಕೈಗಾರಿಕಾ ಸ್ಥಾನಮಾನ ನೀಡುವಿಕೆ, ಥರ್ಡ್ ಪಾರ್ಟಿ ವಿಮಾ ಕಂತಿನ ಏರಿಕೆಯ ರದ್ದು, ರಾಷ್ಟ್ರೀಯ ಪರವಾನಗಿ ಪಡೆದಿರುವ ವಾಣಿಜ್ಯ ವಾಹನಗಳಿಗೆ ಟೋಲ್ ಪರ್ಮಿಟ್ ಜಾರಿ, ಸರಕು ಸಾಗಾಣಿಕೆಗೆ ಕನಿಷ್ಟ ಬಾಡಿಗೆ ನಿಗದಿ ಸೇರಿದಂತೆ ಒಟ್ಟು 12 ಬೇಡಿಕೆಗಳನ್ನು ಈಡೇರಿಸುವಂತೆ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಏ.1ರ ಮಧ್ಯರಾತ್ರಿಯಿಂದ ಕರೆದಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರ್ನಾಟಕ ಸರಕು ಸಾಗಾಣಿಕೆದಾರರ ಸಂಘ, ಬೆಂಗಳೂರು ಸಿಟಿ ಲಾರಿ ಟ್ರಾನ್ಸ್ಪೋರ್ಟಿಂಗ್ ಏಜೆಂಟ್ಸ್ ಅಸೋಸಿಯೇಷನ್, ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಓನರ್ ಅಸೋಸಿಯೇಷನ್ ಮತ್ತಿತರರ ಸಾರಿಗೆ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಬೆಂವಿವಿ ಬಜೆಟ್: ಸಿಂಡಿಕೇಟ್ನಲ್ಲಿ ಚರ್ಚೆ
ಬೆಂಗಳೂರು: ಬೆಂಗಳೂರು ವಿವಿಯ 2013-14ನೇ ಸಾಲಿನ ಬಜೆಟ್ನಲ್ಲಿ ಕೆಲವು ಮಾರ್ಪಾಡು ಮಾಡಿದ್ದು, ಮುಂದಿನ ಅಕಾಡೆಮಿಕ್ ಸಭೆಯಲ್ಲಿ ಪ್ರಸ್ತಾಪಿಸಿ ಒಪ್ಪಿಗೆ ತೆಗೆದುಕೊಳ್ಳಲು ಸಿಂಡಿಕೇಟ್ ಸದಸ್ಯರು ಅನುಮತಿ ಸೂಚಿಸಿದರು. ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ಕುಲಪತಿ ಡಾ.ಬಿ.ತಿಮ್ಮೇಗೌಡ ಅವರು ವಾರ್ಷಿಕ 300 ಕೋಟಿ ಬಜೆಟ್ ಸದಸ್ಯರ ಮುಂದಿಟ್ಟರು. ಬಜೆಟ್ನಲ್ಲಿರುವ ಕೆಲವು ಲೋಪ ದೋಷಗಳ ಬಗ್ಗೆ ಸಿಂಡಿಕೇಟ್ ಸದಸ್ಯರು ಗಮನಸೆಳೆದರು. ಲೋಪದೋಷಗಳನ್ನು ಸರಿಪಡಿಸಿ. ಅಕಾಡೆಮಿಕ್ ಸಭೆಯಲ್ಲಿ ಪ್ರಸ್ತಾಪಿಸಿ ಸದಸ್ಯರ ಒಪ್ಪಿಗೆ ಪಡೆದುಕೊಳ್ಳುವಂತೆ ಸಿಂಡಿಕೇಟ್ ಸದಸ್ಯರು ಸೂಚಿಸಿದರು.
ವಿವಿಯ ವಿದ್ಯಾರ್ಥಿಗಳ ಸುರಕ್ಷೆಗಾಗಿ ವಿವಿ ಆವರಣದಲ್ಲಿ ಸಿಸಿಟಿವಿ, ಬೀದಿದೀಪ ಅಳವಡಿಕೆಗೆ ವಿವಿ ಒಪ್ಪಿಗೆ ಸೂಚಿಸಿದೆ. ವಿವಿ ವಿದ್ಯಾರ್ಥಿಗಳ ಸುರಕ್ಷೆ ಬಗ್ಗೆ ಸಿಂಡಿಕೇಟ್ ಸದಸ್ಯ ಪ್ರೊ .ಕೆ.ವಿ.ಆಚಾರ್ಯ ಅವರು ಸಲ್ಲಿಸಿದ ವರದಿ ಆಧಾರದ ಮೇಲೆ ಕೆಲವು ನಿರ್ಣಯ ತೆಗೆದುಕೊಳ್ಳಲಾಗಿದೆ.
ಮುಂಬರುವ ಘಟಿಕೋತ್ಸವಕ್ಕೆ ಅತಿಥಿಯಾಗಿ ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮಾಟೆಂಕ್ಸಿಂಗ್ ಅಹ್ಲುವಾಲಿಯಾ ಅವರನ್ನು ಆಹ್ವಾನಿಸುವ ಮತ್ತು ಗಣಿತಶಾಸ್ತ್ರ, ಭೌತಶಾಸ್ತ್ರ ಸೇರಿದಂತೆ ವಿವಿಯ ಕೆಲವು ವಿಭಾಗಳಿಗೆ ಮುಖ್ಯಸ್ಥರ ನೇಮಕಮಾಡಲು ಸಿಂಡಿಕೇಟ್ ಸದಸ್ಯರು ಒಪ್ಪಿಗೆ ಸೂಚಿಸಿದರು ಎಂದು ಸಿಂಡಿಕೇಟ್ ಸದಸ್ಯ ಕೃಷ್ಣ ಕನ್ನಡಪ್ರಭಕ್ಕೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

