ಬೆಂಗಳೂರು ನಗರ

ಕುರುಬರಹಳ್ಳಿಯಲ್ಲಿ ರಾಜ್ ರಥೋತ್ಸವ

Published On :

ಬೆಂಗಳೂರು: ನಗರದ ಕುರುಬರಹಳ್ಳಿಯಲ್ಲಿ ಶುಕ್ರವಾರ ವರನಟ ಡಾ.ರಾಜ್ ರಥೋತ್ಸವ ಸಂಭ್ರಮ, ಸಡಗರದಿಂದ ಜರುಗಿತು.
ಹಂಪಿಯ ಕಲ್ಲಿನರಥ ಮಾದರಿಯಲ್ಲೇ ನಿರ್ಮಿಸಿರುವ 12 ಅಡಿ ಎತ್ತರದ ಕಲಾತ್ಮಕ ರಥದ ಮೇಲೆ ಇರುವ 10 ಅಡಿ ಎತ್ತರದ ಡಾ.ರಾಜ್ಕುಮಾರ್ ಪ್ರತಿಮೆಯನ್ನು ಭಾರೀ ಸಂಖ್ಯೆ ಅಭಿಮಾನಿಗಳ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಮಯೂರವರ್ಮ ಪಾತ್ರಧಾರಿಯ ಅಣ್ಣಾವ್ರ ಪ್ರತಿಮೆಯನ್ನು 79ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದ ಡಾ.ಕೋ.ಚೆನ್ನಬಸಪ್ಪ ಲೋಕಾರ್ಪಣೆಗೊಳಿಸಿದರು. ಇದೇ ವೇಳೆ ಚಾಲುಕ್ಯ ಡಾ.ರಾಜ್ಕುಮಾರ್ ಪ್ರತಿಮೆ ಪ್ರತಿಷ್ಠಾನ ಟ್ರಸ್ಟ್ ಏರ್ಪಡಿಸಿದ್ದ ರಾಜ್ ರಥೋತ್ಸವಕ್ಕೂ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೋ.ಚೆನ್ನಬಸಪ್ಪ ಅವರು ಸಿನಿಮಾದಲ್ಲಿ ವಿನಯವಂತ ಪಾತ್ರಗಳನ್ನು ಮಾಡುತ್ತಿದ್ದ ಡಾ. ರಾಜ್ಕುಮಾರ್ ನಿಜ ಜೀವನದಲ್ಲೂ ಹಾಗೆಯೇ ಇದ್ದವರು ಎಂದರು.
ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ಡಾ.ರಾಜ್ ಅವರು ಕೋಟ್ಯಂತರ ಅಜ್ಞಾತ ಅಭಿಮಾನಿಗಳ ಶಕ್ತಿ ಎನ್ನುವುದಕ್ಕೆ ಈ ಪ್ರತಿಮೆಯೇ ಸಾಕ್ಷಿ. ಅದರಲ್ಲೂ ಇಂಥ ಪ್ರತಿಮೆ ಸ್ಥಾಪಿಸಿ ಉತ್ಸವ ನಡೆಸುತ್ತಿರುವ ಚಾಲುಕ್ಯ ಡಾ.ರಾಜ್ಕುಮಾರ್ ಪ್ರತಿಮೆ ಪ್ರತಿಷ್ಠಾನ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಸಿನಿಮಾ ಕ್ಷೇತ್ರಕ್ಕಿಂತಲೂ ಮೇಲೆ ಬೆಳೆದಿದ್ದ ಅವರು ಸಾಂಸ್ಕೃತಿಕ ವ್ಯಕ್ತಿಯೂ, ಜಾತ್ಯತೀತ ಶಕ್ತಿಯೂ ಆಗಿದ್ದರು. ಅಷ್ಟೇ ಅಲ್ಲ. ಕುವೆಂಪು ಸಾರಿದಂತೆ ವಿಶ್ವಮಾನವ ಸಂದೇಶವನ್ನು ಪಾಲಿಸಿದವರು ಎಂದು ಬರಗೂರು ನುಡಿದರು.
ದೇಶದ ಮೇರು ನಟರಾದ ಅಮಿತಾಬ್ ಬಚ್ಚನ್, ದಿಲೀಪ್ಕುಮಾರ್, ಶಿವಾಜಿಗಣೇಶನ್, ರಜನೀಕಾಂತ್ ಅವರು ಡಾ.ರಾಜ್ ಬಗ್ಗೆ ಇಟ್ಟಿದ್ದ ವಿಶ್ವಾಸ ಮತ್ತು ಅಭಿಪ್ರಾಯಗಳನ್ನು ಬರಗೂರು ಬಣ್ಣಿಸಿದರು.
ಶಿವರಾಜ್ಕುಮಾರ್ ಮಾತನಾಡಿ, ರಾಜ್ಕುಮಾರ್ ಅವರ ಮಕ್ಕಳಾಗಿ ನಾವು ಹುಟ್ಟಿದ್ದೇ ಪುಣ್ಯ. ಅವರು ಹಾಕಿಕೊಟ್ಟ ಹಾದಿಯಲ್ಲೇ ನಡೆಯುತ್ತೇವೆ. ಅದರಲ್ಲೂ ಕನ್ನಡ ನಾಡು, ನುಡಿಗೆ ಧಕ್ಕೆಯಾದರೆ ನಮ್ಮ ಪ್ರಾಣ ಕೊಡುವುದಕ್ಕೂ ಸಿದ್ಧ ಎಂದೂ ಭಾವುಕವಾಗಿ ನುಡಿದರು.
ಚಾಲುಕ್ಯ ಡಾ.ರಾಜ್ಕುಮಾರ್ ಪ್ರತಿಮೆ ಪ್ರತಿಷ್ಠಾನ ಟ್ರಸ್ಟ್ ಗೌರವ ಅಧ್ಯಕ್ಷ ಎಂ.ನಾಗರಾಜ್, ಸಾಹಿತಿ ಬರಗೂರು ರಾಮಚಂದ್ರಪ್ಪ, ಮೇಯರ್ ವೆಂಕಟೇಶ್ಮೂರ್ತಿ, ಸಂಸದ ಚಲುವರಾಯಸ್ವಾಮಿ, ಶಾಸಕರಾದ ರಾಮಲಿಂಗಾರೆಡ್ಡಿ, ಎಚ್.ಎಂ. ರೇವಣ್ಣ, ಮಾಜಿ ಉಪ ಮೇಯರ್ ಎಸ್.ಹರೀಶ್, ಪತ್ರಕರ್ತ ಟಿ.ವೆಂಕಟೇಶ್ ಪಾಲಿಕೆ ಸದಸ್ಯ ಶಿವರಾಜ್ ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.