ಡಿಜಿಟಲ್ ಜಾರಿ ಅರ್ಜಿ: ಪರಿಶೀಲಿಸಲು ಹೈ ಆದೇಶ
ಬೆಂಗಳೂರು: ಕೇಬಲ್ ಆಪರೇಟರ್‌ಗಳಿಗೆ ಡಿಜಿಟಲ್ ವ್ಯವಸ್ಥೆ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶವನ್ನು ಮೈಸೂರು ನಗರದಲ್ಲಿ ಜಾರಿಗೆ ತರಲು ಆರು ತಿಂಗಳ ಕಾಲಾವಕಾಶ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಪರಿಶೀಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಮೈಸೂರು ಕೇಬಲ್ ಆಪರೇಟರ್‌ಗಳ ಸಂಘ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಕೇಬಲ್ ವ್ಯವಸ್ಥೆಯ ಬದಲಿಗೆ ಡಿಜಿಟಲ್ ವ್ಯವಸ್ಥೆ ಕಡ್ಡಾಯಗೊಳಿಸಿ ಕೇಂದ್ರ 2011ರ ನ.11ರಂದು ಆದೇಶ ಹೊರಡಿಸಿದೆ. ಈ ಯೋಜನೆ 3 ಹಂತಗಳಲ್ಲಿ ಜಾರಿಯಾಗಲಿದೆ. ಮೈಸೂರು ನಗರ ಎರಡನೇ ಹಂತದಲ್ಲಿ ಸೇರ್ಪಡೆಗೊಂಡಿದೆ. ಆದರೆ, ಮೈಸೂರಲ್ಲಿ 1 ದಶಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯಿರುವ ಹಿನ್ನೆಲೆಯಲ್ಲಿ, ಅದು 3ನೇ ಹಂತಕ್ಕೆ ಸೇರ್ಪಡೆಗೊಳ್ಳುತ್ತದೆ. ಅದರ ಪ್ರಕಾರ, ತಮಗೆ ಕೇಬಲ್ ಡಿಜಿಟಲೀಕರಣಕ್ಕೆ 2014ರ ನ.30ರವರೆಗೆ ಅವಕಾಶ ಕಲ್ಪಿಸಬೇಕು ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. ಅಲ್ಲದೆ, ಕೇಂದ್ರದ ಆದೇಶದ ಪ್ರಕಾರ, 2013ರ ಮಾರ್ಚ್ 30ರೊಳಗೆ ಕೇಬಲ್‌ಗಳನ್ನು ಡಿಜಿಟಲೀಕರಣಗೊಳಿಸಬೇಕಿದೆ. ಆದರೆ, ಅದಕ್ಕೆ ಸೂಕ್ತ ವ್ಯವಸ್ಥೆ ಹಾಗೂ ತಯಾರಿ ಪೂರ್ಣಗೊಂಡಿಲ್ಲ. ಆದ್ದರಿಂದ ಆದೇಶ ಪಾಲನೆಗೆ ತಮಗೆ ಆರು ತಿಂಗಳ ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ಸಂಘ ಕೋರಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

