ಫ್ಲೆಕ್ಸ್ಗಳ ತಾಣವಾದ ಪೊಲೀಸ್ ಚೌಕಿ
ದೊಡ್ಡಬಳ್ಳಾಪುರ: ನಗರದ ರಾಷ್ಟ್ರೀಯ ಹೆದ್ದಾರಿ 207ರ ಪ್ರಮುಖ ವೃತ್ತವಾಗಿರುವ ಡಿಕ್ರಾಸ್ ವೃತ್ತ(ಡಾ.ರಾಜ್ಕುಮಾರ್ ವೃತ್ತ)ದಲ್ಲಿ ಟ್ರಾಫಿಕ್ ಸಮಸ್ಯೆ ನಿಯಂತ್ರಣಕ್ಕಾಗಿ ನೂತನವಾಗಿ ಸ್ಥಾಪಿಸಿರುವ ಪೊಲೀಸ್ ಚೌಕಿ ಬ್ಯಾನರ್ ಮತ್ತು ಫ್ಲೆಕ್ಸ್ಗಳನ್ನು ಕಟ್ಟುವ ತಾಣವಾಗಿರುವುದು ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಸಾರ್ವಜನಿಕ ಉದ್ದೇಶದಿಂದ ನಿರ್ಮಾಣವಾಗಿರುವ ಪೊಲೀಸ್ ಚೌಕಿ ಜನರ ಉಪಯೋಗಕ್ಕೆ ಮುಕ್ತವಾಗುವ ಮುನ್ನವೇ ರಾಜಕಾರಣಿಗಳ, ಸಂಘ-ಸಂಸ್ಥೆಗಳ ಪ್ರಚಾರದ ದೊಡ್ಡ ದೊಡ್ಡ ಫ್ಲೆಕ್ಸ್ಗಳನ್ನು ಹೊತ್ತು ನಿಂತಿದೆ. ಈ ರೀತಿಯಾಗಿ ಪ್ರಚಾರದ ಸೋಗಿಗೆ ಬಿದ್ದಿರುವ ಜನ ಯಾವ ಸ್ಥಳದಲ್ಲಿ ಬ್ಯಾನರ್ ಹಾಕಬೇಕು ಎಲ್ಲಿ ಹಾಕಬಾರದು ಎಂಬ ಕನಿಷ್ಠ ಪ್ರಜ್ಞೆಯೂ ಇಲ್ಲದಂತೆ ವರ್ತಿಸುವುದಂತೂ ಖಂಡನೀಯ. ಮಿತಿ ಮೀರಿ ಬೆಳೆಯುತ್ತಿರುವ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ಒಂದೆಡೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಮತ್ತೊಂದೆಡೆ ಟ್ರಾಫಿಕ್ನಿಂದ ಸಾರ್ವಜನಿಕರ ಸ್ಥಿತಿ ನರಕಸದೃಶವಾಗಿದೆ. ಇದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಅಪರೂಪಕ್ಕೆ ವ್ಯವಸ್ಥೆ ಎಚ್ಚೆತ್ತು ಕೆಲ ಕ್ರಮಗಳನ್ನು ಕೈಗೊಳ್ಳುತ್ತದೆ. ಆದರೆ ಅದೂ ಈ ರೀತಿಯಾಗಿ ದುರುಪಯೋಗವಾಗುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು. ಬ್ಯಾನರ್ ಮತ್ತು ಫ್ಲೆಕ್ಸ್ ಕಟ್ಟಲು ನಗರಸಭೆ ಮತ್ತು ಸಂಬಂಧಪಟ್ಟ ಇಲಾಖೆಗಳು ನಿರ್ದಿಷ್ಟ ಶುಲ್ಕ ವಿಧಿಸಿ, ನಿಯಮಾವಳಿ ಜಾರಿಗೊಳಿಸಬೇಕು ಎಂಬುದು ನಾಗರಿಕರ ಒತ್ತಾಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

