ಬೆಂಗಳೂರು ಗ್ರಾಮಾಂತರ

ಶಕ್ತಿದೇವತೆಯರ ವೈಭವ

Published On :

ದೊಡ್ಡಬಳ್ಳಾಪುರ: ಇಲ್ಲಿನ ಗಾಣಿಗರಪೇಟೆಯ ಶ್ರೀಮುತ್ಯಾಲಮ್ಮ ಸೇವಾ ಸಮಿತಿ ಹಾಗೂ ಗಾಣಿಗರಪೇಟೆ ಗೆಳೆಯರ ಬಳಗ ನೇತೃತ್ವದಲ್ಲಿ ಸಮಿತಿಯ 51ನೇ ವಾರ್ಷಿಕೋತ್ಸವ ಮತ್ತು ಮುತ್ಯಾಲಮ್ಮ ದೇವಿ ಪೂಜಾ ಮಹೋತ್ಸವ ಕಾರ್ಯಕ್ರಮ ಸಂಭ್ರಮದಿಂದ ನಡೆಯುತ್ತಿದೆ.
ಬೆಂಗಳೂರು ನಗರದೇವತೆ ಶ್ರೀಅಣ್ಣಮ್ಮ ದೇವಿ, ದೊಡ್ಡಬಳ್ಳಾಪುರ ನಗರದೇವತೆ ಶ್ರೀಮುತ್ಯಾಲಮ್ಮ ಮತ್ತು ಶ್ರೀಕಾಳಮ್ಮ ದೇವಿಯರನ್ನು ಪೇಟೆಯಲ್ಲಿ ಪ್ರತಿಷ್ಠಾಪಿಸಿದ್ದು, ಭಕ್ತಾದಿಗಳಿಂದ ವಿಶೇಷ ಪೂಜಾ ಕಾರ್ಯಕ್ರಮಗಳು, ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ.
ಜಾನಪದ ಝೇಂಕಾರ: ಉತ್ಸವದ ಅಂಗವಾಗಿ ಕಲಾವಿದ ಕಡಬಗೆರೆ ಮುನಿರಾಜು ಮತ್ತು ತಂಡದಿಂದ ಜಾನಪದ ಝೇಂಕಾರ ಗೀತ ಗಾಯನ ಕಾರ್ಯಕ್ರಮ, ಕೃಷ್ಣ ಬಲಬದ್ರಿ ಮತ್ತು ತಂಡದವರಿಂದ ರಸಮಂಜರಿ ಕಾರ್ಯಕ್ರಮಗಳು ನಡೆದವು. ಇದೇ ಸಂದರ್ಭದಲ್ಲಿ ಜೂನಿಯರ್ ರಾಜ್‌ಕುಮಾರ್ ಅವರಿಂದ ಆಕರ್ಷಕ ನಾಡು-ನುಡಿ ಗೀತಗಾಯನ ನಡೆಯಿತು. ಶನಿವಾರ ಅನ್ನಸಂತರ್ಪಣೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಸಾವಿರಾರು ಜನರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮಗಳಲ್ಲಿ ಶಾಸಕರು, ಮಾಜಿ ಶಾಸಕರು ಸೇರಿದಂತೆ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.
ಆರತಿ ಪೂಜೆ: ಶುಕ್ರವಾರ ಮುತ್ಯಾಲಮ್ಮ ದೇವಿ, ಅಣ್ಣಮ್ಮ ದೇವಿ ಮತ್ತು ಕಾಳಿಕಾಕಮಟೇಶ್ವರಸ್ವಾಮಿಗೆ ಆರತಿ ಪೂಜೆ ನಡೆಯಿತು. ಪೇಟೆಯ ಮತ್ತು ಸುತ್ತಮುತ್ತಲ ಪೇಟೆಗಳ ಭಕ್ತಾದಿಗಳು, ವಿಶೇಷವಾಗಿ ಮಹಿಳೆಯರು, ಅಕ್ಕಿಯಾರತಿ, ತಂಬಿಟ್ಟಿನಾರತಿಗಳನ್ನು ತಂದು ಶ್ರೀಮಾತೆಗೆ ಬೆಳಗಿ ಹರಕೆ ಸಲ್ಲಿಸಿದರು. ನೂರಾರು ಮಹಿಳೆಯರು ಆರತಿಗಳನ್ನು ಹೊತ್ತು ತಂದು ಅರ್ಪಿಸಿದರು.
ಇಂದು ತೆರೆ: 5 ದಿನಗಳ ಉತ್ಸವಕ್ಕೆ ಇಂದು ತೆರೆ ಬೀಳಲಿದೆ. ಭಾನುವಾರ ಮಧ್ಯಾಹ್ನ ಪೂಜಾ ಕಾರ್ಯಕ್ರಮಗಳ ನಂತರ ಪ್ರಮುಖ ಬೀದಿಗಳಲ್ಲಿ ಶ್ರೀಮಾತೆಯರ ಅದ್ಧೂರಿ ಮೆರವಣಿಗೆ ಆಯೋಜಿಸಲಾಗಿದೆ. ನಂತರ ಶ್ರೀಮಾತೆಯರನ್ನು ಸ್ವಸ್ಥಾನಕ್ಕೆ ಬೀಳ್ಕೊಡಲಾಗುವುದು. ಸಮಿತಿಯ ಅಧ್ಯಕ್ಷ ಎಸ್.ಪದ್ಮನಾಭ, ಪ್ರಧಾನಕಾರ್ಯದರ್ಶಿ ಸುರೇಶ್‌ಮಾನೆ, ಕಾರ್ಯಾಧ್ಯಕ್ಷ ಎನ್.ರಾಜಣ್ಣ(ವೈರ್) ಸೇರಿದಂತೆ ಮುತ್ಯಾಲಮ್ಮ ಸೇವಾ ಸಮಿತಿ, ಗಾಣಿಗರಪೇಟೆ ಗೆಳೆಯರ ಬಳಗದ ಪದಾಧಿಕಾರಿಗಳು ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.