ಬೆಂಗಳೂರು ಗ್ರಾಮಾಂತರ

ದೊಡ್ಡ ಕೊಡುಗೆಯೇ ಸರಿ

Published On :

ಬೆಂಗಳೂರು-ನಾಗಮಂಗಲ ನಡುವೆ ಘೋಷಣೆಯಾಗಿರುವ ಹೊಸ ರೈಲು ಮಾರ್ಗವೂ ರಾಮನಗರ ಜಿಲ್ಲೆಯ ಮಾಗಡಿ ಮೂಲಕ ಹಾದು ಹೋಗಲಿದೆ. ಹೀಗಾಗಿ ಸದರಿ ಯೋಜನೆಯೂ ರಾಮನಗರ ಜಿಲ್ಲೆಗೆ ದೊಡ್ಡ ಕೊಡುಗೆಯೇ ಸರಿ. ರಾಮನಗರ ಜಿಲ್ಲೆಯ 4 ತಾಲೂಕುಗಳ ಪೈಕಿ ರಾಮನಗರ ಮತ್ತು ಚನ್ನಪಟ್ಟಣಕ್ಕೆ ರೈಲು ಮಾರ್ಗದ ಜತೆಗೆ ರಾಷ್ಟ್ರೀಯ ಹೆದ್ದಾರಿ ಭಾಗ್ಯವೂ ಒದಲಿದಿದೆ. ಇನ್ನೇನು ಕನಕಪುರ ಮತ್ತು ಮಾಗಡಿಗೂ ರೈಲು ಸಂಪರ್ಕ ದೊರೆಯುವ ಅವಕಾಶ ಬರಲಿದೆ.

ಬೆಂಗಳೂರಿನಿಂದ ರಾಮನಗರ, ಮಂಡ್ಯಕ್ಕೆ ಪ್ಯಾಸೆಂಜರ್ ರೈಲುಗಾಡಿಗಳ ಸಂಚಾರ ಪ್ರಾರಂಭಿಸುವ ಮೂಲಕ ಬಹು ವರ್ಷಗಳ ಬೇಡಿಕೆಗೆ ಸ್ಪಂದಿಸಿರುವ ಸದಾನಂದಗೌಡ ಅವರಿಗೆ ಈ ಭಾಗದ ಜನರ ಪರವಾಗಿ ಅಭಿನಂದನೆಗಳು.
-ಬಿ.ಶ್ರೀಧರ್ ಹೊಸೂರು, ಹೋರಾಟಗಾರ


ರೈಲು ನಿಲ್ದಾಣಗಳಲ್ಲಿ ಜೈವಿಕ ಶೌಚಾಲಯ, ಇ ಟಿಕೆಟ್ ವ್ಯವಸ್ಥೆ ಸೇರಿದಂತೆ ರೈಲ್ವೆ ಇಲಾಖೆಯಲ್ಲಿ ಪಾರದರ್ಶಕತೆ ಮತ್ತು ಅಮೂಲಾಗ್ರ ಬದಲಾವಣೆಗೆ ಒತ್ತು ನೀಡಿರುವುದು ನಿಜಕ್ಕೂ ಸ್ತುತ್ಯಾರ್ಹ ಸಂಗತಿಯಾಗಿದೆ.
-ಪ್ರಕಾಶ್, ವ್ಯಾಪಾರಿ

ರೈಲುಗಾಡಿಗಳಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ವಿಶೇಷ ಒತ್ತು ನೀಡುವ ನಿರ್ಧಾರ ತೆಗೆದುಕೊಂಡಿರುವುದು ಒಳ್ಳೆಯ ಕೆಲಸವಾಗಿದೆ. ಇದಕ್ಕಾಗಿ ಮಹಿಳೆಯರ ಪರವಾಗಿ ಸದಾನಂದಗೌಡರಿಗೆ ಅಭಿನಂದನೆಗಳು.
-ಶ್ರುತಿ, ವಿದ್ಯಾರ್ಥಿನಿ


ಕನ್ನಡಿಗ ಸದಾನಂದಗೌಡರು ಹೊಸ ಯೋಜನೆಗಳು ಮತ್ತು ರೈಲು ಗಾಡಿಗಳ ಸಂಚಾರದ ವಿಷಯದಲ್ಲಿ ಕರ್ನಾಟಕಕ್ಕೆ ಭರಪೂರ ಕೊಡುಗೆ ನೀಡಿದ್ದಾರೆ. ಬೆಂಗಳೂರು-ರಾಮನಗರ ನಡುವೆ ಘೋಷಿಸಿರುವ ರೈಲು ಗಾಡಿಯನ್ನು ಚನ್ನಪಟ್ಟಣದವರೆಗೆ ವಿಸ್ತರಿಸಲು ಕ್ರಮ ಕೈಗೊಳ್ಳಬೇಕು.
-ರಾಮು, ರೈತ ಮುಖಂಡ
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.