ಬೆಂಗಳೂರು ಗ್ರಾಮಾಂತರ

ಅಪ್ಪಂದಿರ ದಿನಾಚರಣೆ

Published On :

ಕನಕಪುರ: ಕನಕಪುರದ ಮದರ್ ಥೆರೇಸಾ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ ಅಪ್ಪಂದಿರ ದಿನಾಚರಣೆ ಕಾರ್ಯಕ್ರಮ ನಡೆಯಿತು. ಬೆಂಗಳೂರಿನ ಬಟರ್ ಪ್ಲೈ ಮಾಂಟೊಸ್ಸರಿ ಸ್ಥಾಪಕಿ ಸ್ವಪ್ನಾ ಉದ್ಘಾಟನೆಯನ್ನು ನೆರವೇರಿಸಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ವಿ. ಲಕ್ಷ್ಮೀಶ್ ಅಧ್ಯಕ್ಷತೆ ವಹಿಸಿದ್ದರು. ಕುಟುಂಬದ ಆಧಾರಸ್ಥಂಬವಾದ ಅಪ್ಪನ ಸ್ಥಾನ ಸಾಮಾಜಿಕ ವ್ಯವಸ್ಥೆಯಲ್ಲಿ ಮಹತ್ತರವಾದದ್ದು, ಮಕ್ಕಳನ್ನು ತಿದ್ದಿ ತೀಡಿ ಉತ್ತಮ ಭವಿಷ್ಯವನ್ನು ರೂಪಿಸುವ ತಂದೆಯನ್ನು ಗೌರವಿಸುವುದು ಪ್ರತಿಯೊಂದು ಮಕ್ಕಳ ಕರ್ತವ್ಯ. ತಂದೆಯನ್ನು ಗೌರವಿಸುವ ಮನೋಭಾವವನ್ನು ಮಕ್ಕಳು ಬಾಲ್ಯದಿಂದಲೇ ಕಲಿತುಕೊಳ್ಳಬೇಕು ಎಂದು ಲಕ್ಷ್ಮೀಶ್ ಕರೆ ನೀಡಿದರು. ಕಾರ್ಯಕ್ರಮದ ಅಂಗವಾಗಿ ಶಾಲೆಯ ಮಕ್ಕಳ ತಂದೆಯರಿಗೆ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿ ಆಕರ್ಷಕ ಬಹುಮಾನಗಳನ್ನು ವಿತರಿಸಲಾಯಿತು. ಶಾಲೆಯ ಪ್ರಾಂಶುಪಾಲ ಮೋಹನಕುಮಾರ್, ಉಪಪ್ರಾಂಶುಪಾಲ ಸೀತಾರಾಂ ಪಾಲ್ಗೊಂಡಿದ್ದರು.    


ಕಾಡಾನೆ ದಾಳಿ: ರೈತರ ಪ್ರತಿಭಟನೆ


ಕನಕಪುರ: ಕಾಡಾನೆಗಳ ದಾಳಿಯಿಂದ ಕಂಗೆಟ್ಟ ಗ್ರಾಮಗಳ ರೈತರಿಗೆ ರಕ್ಷಣೆ ಕೊಡಲು ವಿಫಲರಾದ ಅರಣ್ಯಾಧಿಕಾರಿಗಳ ವಿರುದ್ಧ ಸಾತನೂರು ಹೋಬಳಿಯ 20 ಕ್ಕೂ ಹೆಚ್ಚು ಗ್ರಾಮಗಳ ರೈತರು ಅರಣ್ಯ ಇಲಾಖೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ನೂರಾರು ರೈತರು ಅರಣ್ಯ ಇಲಾಖೆ ಕ್ರಮಕೈಗೊಳ್ಳಲು ಆಗ್ರಹಿಸಿದರು. ರಸ್ತೆ ಮಧ್ಯೆ ಬೆಂಕಿ ಹಚ್ಚಿ ರಸ್ತೆತಡೆ ಪ್ರತಿಭಟಿಸಿದರು. ಸಾತನೂರು ವಲಯದಲ್ಲಿ ಆನೆಗಳ ಹಾವಳಿ ವಿಪರೀತವಾಗಿದ್ದು ಜಮೀನುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹತ್ತಾರು ರೈತರು ಕಾಡಾನೆಗಳಿಗೆ ಬಲಿಯಾಗಿದ್ದಾರೆ. ನೂರಾರು ಎಕರೆ ಬೆಳೆದುನಿಂತ ಲಕ್ಷಾಂತರ ಬೆಲೆಯ ಫಸಲು ನಾಶವಾಗಿ ರೈತರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಸಾತನೂರು ಹೊಬಳಿಯ ಕಬ್ಬಾಳು, ಗುರುವಿನಪುರ, ಅಚ್ಚಲು, ಕಂಚನಹಳ್ಳಿ,ಅರೆಕಟ್ಟೆದೊಡ್ಡಿ, ದಾಳಿಂಬ, ಕುರುಬಳ್ಳಿದೊಡ್ಡಿ ಮೊದಲಾದ ಗ್ರಾಮಗಳು ಹೆಚ್ಚಿನ ಹಾನಿಗೊಳಗಾಗಿವೆ. ಇದುವರೆಗೂ ಯಾವುದೇ ಪರಿಹಾರ ವಿತರಣೆಯಾಗಿಲ್ಲ. ರೈತರು ಬೆಳೆಯುವ ರಾಗಿ, ತೊಗರಿ, ಜೋಳ,ತೆಂಗು, ಟೊಮೋಟೊ, ಬಾಳೆಗಿಡಗಳು ಆನೆಗಳ ದಾಳಿಯಿಂದ ನಾಶವಾಗಿವೆ. ರೈತವಿರೋಧಿ ಧೋರಣೆಯಿಂದ ರೈತರು ಕಂಗೆಟ್ಟಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.