ಬೆಂಗಳೂರು ಗ್ರಾಮಾಂತರ

ಗಾಳಿಪಟ ಸ್ಪರ್ಧೆ 9 ರಂದು

Published On :

ಚನ್ನಪಟ್ಟಣ: ತಾಲೂಕಿನ ಪ್ರಸಿದ್ಧ ದೇವರಹೊಸಹಳ್ಳಿ ಸಂಜೀವರಾಯಸ್ವಾಮಿ ಜಾತ್ರಾಮಹೋತ್ಸವದ ಅಂಗವಾಗಿ ರಾಂಪುರ ಗ್ರಾಮದ ನೇಗಿಲ ಯೋಗಿ ಸಾಂಸ್ಕೃತಿಕ ಟ್ರಸ್ಟ್ ವಿವಿಧ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಗಾಳಿಪಟಹಾರಿಸುವ ಸ್ಪರ್ಧೆಯನ್ನು ರಾಂಪುರ ಗ್ರಾಮದ ತಾವರೆಕಟ್ಟೆ ಅಂಗಳದಲ್ಲಿ ಹಮ್ಮಿಕೊಂಡಿದೆ. ಜು.9 ರ ಸಂಜೆ 3 ಗಂಟೆಗೆ   ಆರಂಭಗೊಳ್ಳುವ ಗಾಳಿಪಟ ಸ್ಪರ್ಧೆಯನ್ನು 8 ರಿಂದ 16 ವರ್ಷಗಳೊಳಗಿನ ಮಕ್ಕಳಿಗಾಗಿ ಮಾತ್ರ ನಡೆಸುತ್ತಿದ್ದು, ಸ್ಪರ್ಧಿಗಳು ಗಾಳಿಪಟವನ್ನು ಸ್ವತಃ ತಾವೇ ತರಬೇಕಿದೆ. ವಿಜೇತರಿಗೆ 4 ಬಹುಮಾನ ವಿತರಣೆ ಮಾಡುವುದಾಗಿ ಕಾರ್ಯಕ್ರಮದ ಆಯೋಜಕ ವಿಜಯ್ ರಾಂಪುರ ತಿಳಿಸಿದ್ದಾರೆ. ಒಟ್ಟು ನಾಲ್ಕು ಬಹುಮಾನಗಳಿದ್ದು, ವಿಜೇತರಾದವರಿಗೆ  ಗೊತ್ತುಪಡಿಸಿದ ದಿನದಂದು ಫಲಕ, ಪ್ರಶಸ್ತಿ ಪತ್ರ ನೀಡಲಾಗುವುದು. ಸ್ಪರ್ಧಾಳುಗಳಿಗೆ ಯಾವುದೇ ಪ್ರವೇಶ ಧನವಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ವಿಜಯ್ ರಾಂಪುರ ಮೊ. 9986700032,  ಶ್ರೀನಿವಾಸ್ ರಾಂಪುರ ಮೊ. 9972835929, ಸಿದ್ದರಾಜು ರಾಂಪುರ ಮೊ. 9535646010 ಸಂಪರ್ಕಿಸಬಹುದಾಗಿದೆ.
ಮಹಿಳೆ ಮೇಲೆ ಕಾಡು
ಹಂದಿ ದಾಳಿ
ರಾಮನಗರ: ತೋಟದಲ್ಲಿ ಕೃಷಿ ಕೆಲಸದಲ್ಲಿ ನಿರತರಾಗಿದ್ದ ಮಹಿಳೆ ಮೇಲೆ ಕಾಡು ಹಂದಿ ದಾಳಿ ಮಾಡಿರುವ ಘಟನೆ ತಾಲೂಕಿನ ಗದಗಯ್ಯನದೊಡ್ಡಿಯಲ್ಲಿ ನಡೆದಿದೆ.  ಗದಗಯ್ಯನದೊಡ್ಡಿ ಗ್ರಾಮದ ವಾಸಿ ಪುಟ್ಟಲಕ್ಷ್ಮಮ್ಮ ದಾಳಿಗೊಳಗಾದ ಮಹಿಳೆ. ಮಂಗಳವಾರ ಮಧ್ಯಾಹ್ನ 2ರ ಸಮಯದಲ್ಲಿ ತಮ್ಮ ತೋಟದಲ್ಲಿ ಕೃಷಿ ಕೆಲಸದಲ್ಲಿ ನಿರತರಾಗಿದ್ದ ವೇಳೆ ಕಾಡು ಹಂದಿ ಹಠಾತ್ ದಾಳಿ ನಡೆಸಿದ್ದರಿಂದ ಆಕೆಯ ಕೈ ಹಾಗೂ ಬೆನ್ನಿನ ಮೇಲೆ ಗಾಯಗಳಾಗಿವೆ. ಪುಟ್ಟಲಕ್ಷ್ಮಮ್ಮ ಅವರು ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚುನಾವಣೆ: ಮಾಹಿತಿ
ಸಲ್ಲಿಸಲು ಸೂಚನೆ
ರಾಮನಗರ: ಕರ್ನಾಟಕ ಸಹಕಾರ ಸಂಘಗಳ ನಿಯಂತ್ರಣ ಕಾಯ್ದೆಯನ್ವಯ ಸಹಕಾರ ಸಂಘಗಳ ಆಡಳಿತ ಮಂಡಳಿ ಚುನಾವಣೆ ನಡೆಸುವ ಸಂಬಂಧ  6 ತಿಂಗಳು ಮುಂಚಿತವಾಗಿ ಪೂರ್ವಸಿದ್ಧತೆ ಮಾಡಿಕೊಳ್ಳಬೇಕಿದ್ದು, ಅಧಿಕಾರಿಗಳು ಸಹಕಾರ ಸಂಘಗಳ ಮುಖ್ಯ ಕಾರ್ಯ ನಿರ್ವಾಹಕರು ಆಡಳಿತ ಮಂಡಳಿ ಅವಧಿ ಮುಗಿಯುವ 120 ದಿವಸಗಳಿಗೆ ಮುಂಚೆ ಚುನಾವಣೆಗೆ ಬಾಕಿ ಇರುವ ಮಾಹಿತಿಯನ್ನು ಆಯಾ ತಾಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿ ಕಚೇರಿಗೆ ಸಲ್ಲಿಸಬೇಕು. ಸಹಕಾರ ಸಂಘಗಳು ಚುನಾವಣೆ ನಡೆಸಲು ಸಹಕಾರ ನೀಡದೇ ಇದ್ದಲ್ಲಿ ಅಥವಾ ದಾಖಲೆಗಳನ್ನು ಒದಗಿಸದೇ ಇದ್ದಲ್ಲಿ ಸದರಿ ಸಂಘದ ಸಹಕಾರ ಮುಖ್ಯ ಕಾರ್ಯ ನಿರ್ವಾಹಕರ ವಿರುದ್ಧ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಹಕಾರ ಸಂಘಗಳ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಸಹಕಾರ ಸಂಘಗಳ ಜಿಲ್ಲಾ ಉಪ ನಿಬಂಧಕರು ತಿಳಿಸಿದ್ದಾರೆ.
ಮೂಲ ಅಂಕಪಟ್ಟಿಗಳ ರವಾನೆ
ರಾಮನಗರ: 2013-14ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಮೂಲ ಅಂಕಪಟ್ಟಿಗಳನ್ನು ಶಿಕ್ಷಣ ಇಲಾಖೆಯು ಸಂಬಂಧಿಸಿದ ಶಾಲೆಗಳಿಗೆ ರವಾನಿಸಿದೆ. ವಿದ್ಯಾರ್ಥಿಗಳು ಆಯಾ ಶಾಲೆಗಳ ಮುಖ್ಯೋಪಾಧ್ಯಾಯರನ್ನು ಜು.2ರ ನಂತರ ಸಂಪರ್ಕಿಸಿ ಅಂಕಪಟ್ಟಿಗಳನ್ನು ಪಡೆದುಕೊಳ್ಳಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪ್ರಹ್ಲಾದಗೌಡ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.