ಅತ್ಯಾಚಾರಿ ಮನೆಯಲ್ಲಿ ಬಾಲಕಿ
ಚನ್ನಪಟ್ಟಣ: ಅತ್ಯಾಚಾರದಿಂದ ಹೆಣ್ಣು ಮಗುವಿಗೆ ಜನ್ಮನೀಡಿ, ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದ್ದ ಗೊಲ್ಲರ ದೊಡ್ಡಿಯ ಬಾಲಕಿಗೆ ಅತ್ಯಾಚಾರಿಯ ಮನೆಯಲ್ಲಿ ಅವಕಾಶ ಕಲ್ಪಿಸಿ ಕೊಡುವ ಮೂಲಕ ಜಿಲ್ಲಾಡಳಿತ ಪ್ರಕರಣವನ್ನು ಸುಖಾಂತ್ಯಗೊಳಿಸಿದೆ.
ಮಂಗಳವಾರ ತಾಲೂಕಿನ ಗೊಲ್ಲರ ದೊಡ್ಡಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಜಮಾದಾರ್ ನೇತೃತ್ವದಲ್ಲಿ ಚಿಂತನಾ ಸಭೆ ನಡೆಸಿದ ಜಿಲ್ಲಾ ಮಟ್ಟದ ಅಧಿಕಾರಿಗಳು ಗ್ರಾಮದ ಗೊಲ್ಲ ಸಮುದಾಯ ಹಿಂದಿನಿಂದ ಅಳವಡಿಸಿ ಕೊಂಡು ಬಂದಿರುವ ಗೊಡ್ಡು ಸಂಪ್ರದಾಯ ಕಾನೂನು ಬಾಹಿರ ಎಂಬ ಸಂಗತಿಯನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು.
ಸಭೆಯ ಬಳಿಕ ಬಾಲಕಿಯ ಮೇಲೆ ಅತ್ಯಾಚಾರ ವೆಸಗಿದ್ದ ಆರೋಪಿಯ ತಂದೆಯ ಜತೆ ಮಾತನಾಡಿದ ಜಿಲ್ಲಾಮಟ್ಟದ ಅಧಿಕಾರಿಗಳ ತಂಡ ಬಾಲಕಿಯನ್ನು ಗ್ರಾಮದಿಮದ ಹೊರಗೆ ಇರಿಸುವುದು ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದ್ದು ಕಾನೂನಿನ ಹೊರಗೆ ಸಮಸ್ಯೆಯನ್ನು ಬಗೆಹರಿಸಿ ಕೊಳ್ಳುವ ಮೂಲಕ ಪ್ರಕರಣವನ್ನು ಸುಖಾಂತ್ಯ ಗೊಳಿಸಲು ಸಲಹೆ ನೀಡಿದರು.
ಅತ್ಯಾಚಾರಕ್ಕೆ ಒಳಗಾಗಿರುವ ಬಾಲಕಿ ಮತ್ತು ಆಕೆಯ ಮಗುವಿಗೆ ನ್ಯಾಯ ದೊರಕಿಸಿ ಕೊಡಲು ಸಮ್ಮತಿಸಿದ ಗ್ರಾಮದ ಮುಖಂಡರು. ಆರೋಪಿಯ ತಂದೆಯನ್ನು ಸ್ಥಳಕ್ಕೆ ಕರೆಸಿ ಬಾಲಕಿಯ ವಾಸ್ತವ್ಯಕ್ಕೆ ಅನುವು ಮಾಡಿಕೊಡುವಂತೆ ತಾಕೀತು ಮಾಡಿದರು.
ಸಭೆಯಲ್ಲಿ ಮಾತನಾಡಿದ ತೇಜಸ್ವಿನಿ ಎಂಬ ಪ್ರಥಮ ಪಿಯುಸಿ ವಿದ್ಯಾರ್ಥಿನಿ ನನಗೆ ಇಂತಹ ಪದ್ಧತಿಯಿಂದ ಮುಜುಗರ ಉಂಟಾಗುತ್ತದೆ. ನಾವು ಋತುಮತಿಯಾದ ಸಮಯದಲ್ಲಿ ಮನೆಯಲ್ಲೇ ಇರಲು ಬಯಸುತ್ತೇವೆ. ಯಾದರೂ ಕಟ್ಟುಪಾಡುಗಳು ನಮಗೆ ಇರಲು ಬಿಡುತ್ತಿಲ್ಲ. ನಮಗೆ ಮನೆಯಲ್ಲೇ ಇರಲು ಅವಕಾಶ ಕಲ್ಪಸಿ ಕೊಡಿ ಎಂದು ಮನವಿ ಮಾಡುವ ಮೂಲಕ ತಮ್ಮ ಸಮುದಾಯದ ಕಂದಾಚಾರದ ವಿರುದ್ಧ ದನಿ ಎತ್ತಿದಳು. ಸಭೆಯಲ್ಲಿ ಮಾತನಾಡಿದ ಸಮುದಾಯದ ಕೆಲ ಮುಖಂಡರು ನಮ್ಮ ಮನೆಯಲ್ಲಿ ಇಂತಹ ಪದ್ದತಿಗಳು ಇಲ್ಲ ಎಂದು ಸ್ಪಷ್ಟಪಡಿಸಿದರು.
ಮುನ್ನುಡಿ ಬರೆಯಿರಿ: ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಜಮಾದಾರ್, ಇಂತಹ ಒಂದು ಸಂಪ್ರದಾಯ ನಿಜಕ್ಕೂ ಅಮಾನವೀಯವಾದುದು. ಹೆಣ್ಣಾಗಲಿ ಗಂಡಾಗಲಿ ಎಲ್ಲರಿಗೂ ಕಾನೂನಿನಡಿ ಸಮಾನವಾದ ಹಕ್ಕಿದ್ದು ಇದನ್ನು ಅರಿತು ಇಂತಹ ಪದ್ದತಿಗಳನ್ನು ಬದಲಾಯಿಸಿ ಅಲ್ಲಿ ಇಲ್ಲಿ ಎಂದು ಕಾಯದೆ ಬದಲಾವಣೆ ನಿಮ್ಮ ಗ್ರಾಮದಿಂದಲೇ ಆರಂಭಗೊಳ್ಳಲಿ ಎಂದು ಮನವಿ ಮಾಡಿದರು.
ಚಿಂತನಾ ಸಭೆಯಲ್ಲಿ ಜಿ.ಪಂ ಸಿಇಒ ಡಾ.ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್, ಮಕ್ಕಳ ಹಕ್ಕುಗಳ ರಕ್ಷಣಾ ಅಧಿಕಾರಿ ರಾಧಾ, ಎಎಸ್ಪಿ ಕುಲದೀಪ್ ಸಿಂಗ್ ಜೈನ್, ತಹಸೀಲ್ದಾರ್ ಅರುಣಪ್ರಭ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಯರಂಗ, ಸಿಡಿಪಿಒ ಪುಟ್ಟಸ್ವಾಮಿ ಇನ್ನೂ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.
ಅನಿಷ್ಟ ಪದ್ಧತಿ ವಿರುದ್ಧ ದನಿ ಎತ್ತಿದ ಬಾಲಕಿ
ಸಭೆಯಲ್ಲಿ ಕೆಲ ಮಹಿಳೆಯರು ನಾವು ಯಾರ ಒತ್ತಡಕ್ಕೂ ಮಣಿಯದೆ ಸ್ವಯಂ ಪ್ರೇರಣೆಯಿಂದ ಆಚರಣೆ ಮಾಡಿಕೊಂಡು ಬಂದಿದ್ದೀವಿ. ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ. ರಾಜ್ಯದೆಲ್ಲೆಡೆ ಬದಲಾಯಿಸಿ ನಾವು ನಿಲ್ಲಿಸುತ್ತೇವೆ ಎಂದು ಜಿಲ್ಲಾಡಳಿತಕ್ಕೆ ಪ್ರತಿಕ್ರಿಯಿಸಿದರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

