ಪುರಸಭಾ ಸದಸ್ಯರಿಗೆ ಸನ್ಮಾನ
ದೇವನಹಳ್ಳಿ: ಇಲ್ಲಿನ ಎಎಸ್‌ವಿ ನಗರ್ತ ಸಂಘ, ಯುವಕ ನಗರ್ತ ಸಂಘ ಹಾಗೂ ನಗರ್ತ ಮಹಿಳಾಸಂಘ ಸಂಯುಕ್ತ ಆಶ್ರಯದಲ್ಲಿ ದೇವನಹಳ್ಳಿ, ವಿಜಯಪುರ ಹಾಗೂ ದೊಡ್ಡಬಳ್ಳಾಪುರ ನಗರ ಸಭೆಗೆ ನೂತನವಾಗಿ ಆಯ್ಕೆಯಾಗಿರುವ ನಗರ್ತ ಜನಾಂಗದ ಸದಸ್ಯರಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಸಾಹಿತಿ ಜರಗನಹಳ್ಳಿ ಶಿವಶಂಕರ್ ಮಾತನಾಡಿ ರಾಜ್ಯದಲ್ಲಿ ವೀರಶೈವ ಸಮಾಜದಲ್ಲಿ ಉಪಜಾತಿಯಾಗಿರುವ ನಗರ್ತ ಜನಾಂಗ ಅತಿ ಕಡಿಮೆ ಜನಸಂಖ್ಯೆ ಇರುವ ಕಾರಣ ರಾಜಕೀಯವಾಗಿ ಬೆಳೆಯಲು ಸಾಧ್ಯವಾಗಿಲ್ಲ. ಆದರೆ ಜನಾಂಗ ದೇವನಹಳ್ಳಿ ವಿಜಯಪುರ, ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ಪಟ್ಟಣಗಳಲ್ಲಿ ಹೆಚ್ಚಾಗಿದ್ದು ಅಲ್ಲದೆ ಬೆಂಗಳೂರಿನ ಎಲ್ಲ ಬಡಾವಣೆಗಳಲ್ಲಿ ಗುರುತಿಸಿಕೊಳ್ಳಲಾರದಷ್ಟು ವಾಸವಿದ್ದಾರೆ. ಆದರೆ ಜನಾಂಗ ಕಡಿಮೆ ಇದ್ದರೂ ಶೈಕ್ಷಣಿಕವಾಗಿ ಸ್ವಲ್ಪ ಮುಂದುವರೆದಿದ್ದರೂ ರಾಜಕೀಯವಾಗಿ ಬೆಳೆಯಲು ಸಾಧ್ಯವಾಗಿಲ್ಲ ಎಂದರಲ್ಲದೆ ಇತ್ತೀಚಿನ ದಿನಗಳ ರಾಜಕೀಯದಲ್ಲಿ ಹಣ ಮತ್ತು ಜಾತಿ ಹೆಚ್ಚು ಪ್ರಭಾವಶಾಲಿಯಾಗಿದೆ ಎಂದರು. ಉದ್ಘಾಟನೆಯನ್ನು ಹಿರಿಯರಾದ ತುಪ್ಪದ ಸಿ.ಆರ್.ವೀರಭದ್ರಯ್ಯ ನೆರವೇರಿಸಿದರು. ಅತಿಥಿಗಳಾಗಿ ಆಗಮಿಸಿದ್ದ ಚಿಕ್ಕವೀರಭದ್ರಪ್ಪ ನೂತನ ಸದಸ್ಯರಿಗೆ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶಾ.ರಮೇಶ್ ವಹಿಸಿದ್ದರು. ದೇವನಹಳ್ಳಿ ಪುರಸಭೆಗೆ ಅವಿರೋಧವಾಗಿ ಆಯ್ಕೆಯಾಗಿರುವ ವೈ.ಸಿ.ಸತೀಶ್‌ಕುಮಾರ್, ವಿಜಯಪುರ ಪುರಸಭೆಗೆ ಅವಿರೋಧವಾಗಿ ಆಯ್ಕೆಯಾಗಿರುವ ಎಂ.ಸತೀಶ್‌ಕುಮಾರ್, ಎಸ್.ಭಾಸ್ಕರ್ ಹಾಗೂ ಆರ್.ಸಿ.ಮಂಜುನಾಥ್ ಹಾಗೂ ದೊಡ್ಡಬಳ್ಳಾಪುರ ನಗರ ಸಭೆಗೆ ಆಯ್ಕೆಯಾಗಿರುವ ಗಾಯಿತ್ರಿ ಪ್ರಕಾಶ್ ಗೆ ಎ.ಸಿ.ಸಂಪನ್ನಪ್ಪ ಶಾಲು ಹೊದಿಸಿ ಸನ್ಮಾನಿಸಿದರು. ಸನ್ಮಾನಿತರ ಪರವಾಗಿ ಎಂ.ಸತೀಶ್‌ಕುಮಾರ್, ಆರ್.ಸಿ.ಮಂಜುನಾಥ್ ಹಾಗೂ ಗಾಯಿತ್ರಿ ಪ್ರಕಾಶ್ ಮಾತನಾಡಿದರು. ದೇವನಹಳ್ಳಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಸಿ.ಅಶ್ವತ್ಥ್ ಕಲಾ ತಂಡದವರಿಂದ ಜಾನಪದ ಗಾಯನ ನಡೆಯಿತು.
ಮಾಗಡಿ ಸುತ್ತಮುತ್ತ ಸಾಧಾರಣ ಮಳೆ
ಮಾಗಡಿ: ಪಟ್ಟಣದ ಸುತ್ತಮುತ್ತ ಸಾಧಾರಣೆ ಮಳೆಯಾಗಿದೆ. ಬಿರುಬಿಸಿಲಿಗೆ ಜನತೆ ಬಸವಳಿದಿದ್ದರು. ಶನಿವಾರ ಸಂಜೆ ಬಿದ್ದ ಸಾಧಾರಣ ಮಳೆಯ ಸಿಂಚನದಿಂದ ಮತ್ತಷ್ಟು ಬಿಸಿಲಿನ ತಾಪಮಾನ ಹೆಚ್ಚಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

