ನಂದಗುಡಿ ಅರಣ್ಯಕ್ಕೆ ಬೆಂಕಿ: ಅಪಾರ ಪ್ರಮಾಣದ ಮರ, ಗಿಡ ನಾಶ
ಕ.ಪ್ರ.ವಾರ್ತೆಸೂಲಿಬೆಲೆ,ಮಾ.30
ಇಲ್ಲಿಗೆ ಸಮೀಪದ ನಂದಗುಡಿ ಬಳಿಯಿರುವ ವಲಯ ಅರಣ್ಯಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಬೆಂಕಿಯ ಕೆನ್ನಾಲಿಗೆ ಅಪಾರ ಪ್ರಮಾಣದ ಮರ, ಗಿಡಗಳನ್ನು ಬಲಿ ತೆರೆದುಕೊಂಡಿದೆ. ಸುಮಾರು 4 ಎಕರೆ ಅರಣ್ಯದ ಸಸ್ಯ ಸಂಪತ್ತು ಬೆಂಕಿಗೆ ಅಹುತಿಯಾಗಿದೆ.
ಹೊಸಕೋಟೆ ವಲಯ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ನಂದಗುಡಿ ಅರಣ್ಯ ಸುಮಾರ 1 ಸಾವಿರಕ್ಕೂ ಹೆಚ್ಚು ಎಕರೆ ವಿಸ್ತಾರಣವನ್ನು ಹೊಂದಿದೆ.ಇಲ್ಲಿ ನವಿಲು,ಕವಡೆಗಳು, ಜಿಂಕೆಗಳು, ಕಾಡು ಹಂದಿಯಂಥ ಪ್ರಾಣಿಗಳಿದ್ದು, ಬೆಂಕಿಯಿಂದ ಪ್ರಾಣಿಗಳು ಭಯಭೀತಗೊಂಡಿವೆ. ಅರಣ್ಯದಿಂದ ನಾನಾ ಕಡೆ ಸಂಪರ್ಕಿಸುವ ಕಾಲು ದಾರಿಗಳಿದ್ದು, ಈ ಮಾರ್ಗವನ್ನು ಬಾಲೇನಹಳ್ಳಿ, ಬಾವಪುರ, ಅಗ್ರಹಾರ, ಸೂಲಿಬೆಲೆ ಇತ್ಯಾದಿ ಕಡೆಯಲ್ಲಿರುವ ಹಳ್ಳಿಗಳಿಗೆ ಹೋಗಲು ಜನರು ಬಳಿಸುತ್ತಾರೆ. ದ್ವಿಚಕ್ರವಾಹನಗಳ ಸಂಚಾರಿಸುವ ಈ ಅರಣ್ಯಕ್ಕೆ ಬೆರಳಣಿಕೆಯಷ್ಟು ಸಿಬ್ಬಂದಿಯಿದ್ದು, ಶುಕ್ರವಾರ ಮ.3 ಗಂಟೆ ವೇಳೆಗೆ ಅರಣ್ಯದ ಒಂದು ಭಾಗಕ್ಕೆ ಬೆಂಕಿ ಬಿದ್ದಿದೆ. ವಿಷಯ ತಿಳಿದ ರೇಂಜರ್ ನಾರಾಯಣಸ್ವಾಮಿ ತಮ್ಮ ಸಿಬ್ಬಂದಿಯೊಂದಿಗೆ ತೆರಳಿ ಬೆಂಕಿಯನ್ನು ನಂದಿಸಿದ್ದಾರೆ.ಹತ್ತಾರು ಸಿಬ್ಬಂದಿ ಬೆಂಕಿ ನಂದಿಸಿದ ಕಾರಣ ಸಂಭವಿಸಬಹುದಾದ ಇನ್ನಷ್ಟು ಅನಾಹುತ ತಪ್ಪಿದೆ. ಬೆಂಕಿಯ ಕೃತ್ಯದಿಂದ ಚಿಕ್ಕ ಚಿಕ್ಕ ಮರಗಳು ಅಲ್ಲದೇ ದೊಡ್ಡ ಮರಗಳು ಸುಟ್ಟು ಕರಕಲಾಗಿವೆ. ಇಂಥ ಕೃತ್ಯಗಳ ಪದೇ ಪದೇ ನಡೆಯುತ್ತಿದ್ದು, ಅರಣ್ಯಕ್ಕೆ ರಕ್ಷಣಿ ಇಲ್ಲದಂತಾಗಿದೆ. ಸಾಕಷ್ಟು ಸಂಖ್ಯೆಯಲ್ಲಿರುವ ಸಣ್ಣಪುಟ್ಟ ಪ್ರಾಣಿಗಳು ಬೆಂಕಿಯ ಅವಘಡದಿಂದ ಭೀತಿಗೊಂಡು ಅರಣ್ಯದ ಸುತ್ತ ಇರುವ ಹಳ್ಳಿಗಳು ಮತ್ತು ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

