ಕೆಜೆಪಿ ಬಲಿಷ್ಠವಾಗಿ ಕಟ್ಟಲು ಕಂಕಣಬದ್ಧರಾಗಿ
ಕ.ಪ್ರ.ವಾರ್ತೆ, ಮಾಗಡಿ. ಮಾ.30
ಕೆಜೆಪಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲು ನಾವೆಲ್ಲರೂ ಕಂಕಣಬದ್ಧರಾಗಬೇಕಿದೆ ಎಂದು ಕೆಜೆಪಿ ಮುಖಂಡ ರುದ್ರೇಶ್ ನುಡಿದರು.
ಅವರು ಮಾಗಡಿ ಪಟ್ಟಣದ ಹೊಸೂರು ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮತನಾಡಿ, ಕೆಜೆಪಿ ಸಂಸ್ಥಾಪಕ ಯಡಿಯೂರಪ್ಪ ಅವರ ಕೈ ಬಲ ಪಡಿಸಲು ಕಾರ್ಯಕರ್ತರು ರೂಪುರೇಷೆಗಳನ್ನು ರೂಪಿಸಬೇಕು. ಮಾಗಡಿ ವಿಧಾನ ಸಭಾ ಕ್ಷೇತ್ರಕ್ಕೆ ಪ್ರಬಲ ಅಭ್ಯರ್ಥಿಯನ್ನು ಗುರುತಿಸಲಾಗಿದ್ದು ಗೆದ್ದೆ ಗೆಲ್ಲುತ್ತಾರೆ ಎಂಬ ವಿಶ್ವಾಸವನ್ನು ಹೊಂದಿದ್ದೇವೆ. ನೀವು ಅವರ ಗೆಲವಿಗೆ ತಮ್ಮದೇ ಆದ ರೀತಿಯಲ್ಲಿ ಬೂತ್‌ಮಟ್ಟದಲ್ಲಿ ಸಂಘಟಿತರಾಗಬೇಕು. ತಾಲೂಕಿನಲ್ಲಿ ಕ್ರಿಯಾಶೀಲ ವ್ಯಕ್ತಿಯನ್ನು ಕೆಜೆಪಿ ಪಕ್ಷದ ಅಧ್ಯಕ್ಷರ ಸ್ಥಾನಕ್ಕೆ ಅಯ್ಕೆ ಮಾಡಲು ಎಲ್ಲರ ಸಹಕಾರ ಕೋರಲಾಗಿದೆ. ನಿಮ್ಮಲ್ಲರ ಸಹಕಾರದಿಂದ ಅಧ್ಯಕ್ಷರ ಆಯ್ಕೆಯನ್ನು ಸಧ್ಯದಲ್ಲೇ ಘೋಷಣೆ ಮಾಡಲಾಗುವುದು ಎಂದರು.
ಕೆಜೆಪಿ ಜಿಲ್ಲಾಧ್ಯಕ್ಷ ಎಸ್.ಆರ್. ನಾಗರಾಜು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯವನ್ನು ಸುವರ್ಣ ರಾಜ್ಯವನ್ನಾಗಿ ಸ್ಥಾಪಿಸಲು ಸಂಕಲ್ಪ ಮಾಡಿದ್ದರು. ಆದರೆ ಅವರಿಗೆ ಮೂರು ವರ್ಷಗಳ ಕಾಲ ಆಡಳಿತ ಸಿಕ್ಕಿದ್ದರಿಂದ ಕನಸು ನನಸು ಮಾಡಲಿಕ್ಕಾಗಲಿಲ್ಲ, ಆದರೂ ರೈತರಿಗೆ ಸುವರ್ಣಭೂಮಿ ಯೋಜನೆ, ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮೀ ಯೋಜನೆಗಳನ್ನು ನೀಡುವ ಮೂಲಕ ಪ್ರತಿ ಮನೆ, ಮನೆಗೂ ಸರ್ಕಾರದ ಯೋಜನೆಗಳನ್ನು ತಲುಪಿಸಿದ ಕೀರ್ತಿ ಬಿಎಸ್‌ವೈ ಅವರಿಗೆ ಸಲ್ಲಬೇಕು. ಆದರೆ ಹಿತಶತ್ರುಗಳೆ ಅವರ ಕಾಲೆಳದರು.
ಬಿಜೆಪಿಯಿಂದ ಹೊರ ಬಂದ ಅವರು ಕೆಜಿಪಿ ಕಟ್ಟಿದ್ದಾರೆ. ಉದಯವಾಗಿ ಮೂರು ತಿಂಗಳಷ್ಟೆ ಕಳೆದಿದೆ. ಆದರೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸುಮಾರು 275 ಸ್ಥಾನವನ್ನು ತನ್ನದಾಗಿಸಿಕೊಂಡು ಇತಿಹಾಸ ಸೃಷ್ಟಿಸಿದ್ದಾರೆ.
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಇನ್ನು ಅಭ್ಯರ್ಥಿಗಳ ಪಟ್ಟಿ ಆಖೈರು ಮಾಡಿಲ್ಲ, ಆದರೆ ಕೆಜೆಪಿ ಈಗಾಗಲೇ ವಿಧಾನ ಸಭೆ ಚುನಾವಣೆಗೆ 69 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಉಳಿದಂತೆ ಇನ್ನು ಮೂರು ದಿನಗಳಲ್ಲಿ ಪೂರ್ಣಗೊಳಿಸಲಿದ್ದಾರೆ ಎಂದರು.
ಕೆಜೆಪಿ ಸಂಸ್ಥಾಪಕ ಬಿ.ಎಸ್. ಯಡಿಯೂರಪ್ಪ ಅವರ ಆಡಳಿತ ಸಾಧನೆಯನ್ನು ಮತದಾರರ ಗಮನ ಸೆಳೆಯಬೇಕು. ಅವರ ಕೈ ಬಲಪಡಿಸಲು ನಾವೆಲ್ಲರೂ ಸಂಘಟಿತರಾಗಿ ಅಭ್ಯರ್ಥಿ ಗೆಲವಿಗೆ ಶ್ರಮಿಸೋಣ ಎಂದು ತಾಲೂಕು ಕೆಜಿಪಿ ಪ್ರಧಾನ ಕಾರ್ಯದರ್ಶಿ ಬಿ.ಎಚ್. ಮಹೇಶಯ್ಯ ತಿಳಿಸಿದರು.
ಕೆಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್, ಎಸ್ಸಿ, ಎಸ್ಟಿ ವಿಭಾಗದ ಅಧ್ಯಕ್ಷ ರಾಜು ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

