ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆ: ಅನಿತಾ ಕುಮಾರಸ್ವಾಮಿ
ಚನ್ನಪಟ್ಟಣ: ತಾಲೂಕಿಗೆ ಈ ಹಿಂದೆ ಎಚ್.ಡಿ. ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಅಭಿವೃದ್ಧಿ ಕೆಲಸ ಹಾಗೂ ಮುಂದೆ ತಾಲೂಕಿಗೆ ಆಗಬೇಕಾದ ಅಭಿವೃದ್ಧಿ ಕೆಲಸಗಳೇ ತಮ್ಮ ಗೆಲವಿಗೆ ಮಾನದಂಡವಾಗಲಿವೆ ಎಂದು ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ತಾಲೂಕಿನ ಮೋಳೆದೊಡ್ಡಿ, ತಗಚಗೆರೆ ತಿಮ್ಮಸಂದ್ರ, ಕೋಡಿಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಪ್ರಚಾರ ಕೈಗೊಂಡ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಗೆದ್ದವರು ತಮ್ಮ ಬೇಳೆ ಮಾತ್ರ ಬೇಯಿಸಿಕೊಳ್ಳುತ್ತಿದ್ದು, ತಾಲೂಕಿನ ಅಭಿವೃದ್ಧಿ ಕಡೆ ಗಮನ ಹರಿಸದೆ ಇರುವುದರಿಂದ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಇವೆಲ್ಲವನ್ನು ಮತದಾರರ ಮುಂದಿಟ್ಟು ಇವುಗಳ ಸಮಗ್ರ ನಿವಾರಣೆಗಾಗಿ ನನಗೆ ಮತಹೋಲಿಕೆ ಬೇಡ: ತಾಲೂಕಿನ ಜನತೆಯನ್ನು ಗಿಮಿಕ್ ರಾಜಕಾರಣಿ ಸಿ.ಪಿ.ವೈ. ಹಿಡಿತದಿಂದ ಬಿಡಿಸಬೇಕೆಂಬ ಕಾರಣದಿಂದಲೇ ಜೆಡಿಎಸ್
ನನಗೆ ಇಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ. ನನಗೂ ಅವರಿಗೂ ಹೋಲಿಕೆ ಮಾಡುವುದು ಬೇಡ ನನ್ನದೇನಿದ್ದರೂ ತತ್ವ ಸಿದ್ಧಾಂತಕ್ಕೆ ಬದ್ದ ವ್ಯಕ್ತಿತ್ವವಾಗಿದ್ದು, ಅವರದು ಕೇವಲ ಬಣ್ಣದ ಮಾತು ಹಾಗೂ ಅಧಿಕಾರಕ್ಕಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಜಿಗಿಯುವ ಜಾಯಮಾನ ಎಂದು ಟೀಕಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ, ಉದ್ಯಮಿ ನಿಜಲಿಂಗೇಗೌಡ, ತಾ.ಪಂ.ಸದಸ್ಯರಾದ ಭಾನುಪ್ರಸಾದ್, ಗುರುಕುಮಾರ್, ತಗಚಗೆರೆ ಪವನ್, ಮಹಾಲಿಂಗು, ಕೆಂಚೇಗೌಡ, ಜಿ.ಪಂ.ಸದಸ್ಯ ರಮೇಶ್,ಕುಕ್ಕೂರು ದೊಡ್ಡಿ ಜಯರಾಮು,ಮಾಸ್ತಿಗೌಡ ಸೇರಿದಂತೆ ಹಲವಾರು ಮಂದಿ ಹಾಜರಿದ್ದರು.
ಜಿಲ್ಲಾ ಮಟ್ಟದ ಬಾಲ್‌ಬ್ಯಾಡ್ಮಿಂಟನ್ ಸ್ಪರ್ಧೆ ನಾಳೆ
ಕನಕಪುರ: ಪಟ್ಟಣದ ಸೌಜನ್ಯ ಬಾಲ್‌ಬ್ಯಾಡ್ಮಂಟನ್ ಕ್ಲಬ್ ವತಿಯಿಂದ ರಾಮನಗರ ಜಿಲ್ಲಾ ಮಟ್ಟದ ಬಾಲ್‌ಬ್ಯಾಡ್ಮಿಂಟನ್ ಸ್ಪರ್ಧೆ ಮಾ.31 ರಂದು ನಡೆಯಲಿದೆ. ಆಸಕ್ತ ತಂಡಗಳು ಹೆಸರು ನೋಂದಾಯಿಸಿಕೊಳ್ಳಲು ವ್ಯವಸ್ಥಾಪಕ ಎಸ್.ರಾಮಲಿಂಗಯ್ಯ ಕೋರಿದ್ದಾರೆ. ಮಾಹಿತಿಗೆ ಮೊ. 98452 -35648, 98806 -67749 ಇಲ್ಲಿಗೆ ಸಂಪರ್ಕಿಸಲು ಕೋರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

