ಅನ್ನದಲ್ಲಿ ವಿಷ ಹಾಕಿ ಬೀದಿನಾಯಿಗಳ ಹತ್ಯೆ
ಚನ್ನಪಟ್ಟಣ: ಬೀದಿನಾಯಿಗಳು ಹೆಚ್ಚಾಗಿವೆ ಎಂಬ ಕಾರಣಕ್ಕೆ ಕಿಡಿಗೇಡಿಗಳು ತಿನ್ನುವ ಅನ್ನದಲ್ಲಿ ವಿಷ ಮಿಶ್ರಣಮಾಡಿ 15ಕ್ಕೂ ಹೆಚ್ಚು ಬೀದಿನಾಯಿಗಳನ್ನು ಕೊಂದಿರುವ ಅಮಾನವೀಯ ಘಟನೆ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಮಂಗಳವಾರ ನಡೆದಿದೆ. ಸೋಮವಾರ ರಾತ್ರಿ ಬೀದಿ ತುಂಬ ತಿರುಗಾಡಿ ಕೊಂಡಿದ್ದ ನಾಯಿಗಳು ಬೆಳಗಿನ ಜಾವ ಸತ್ತುಬಿದ್ದಿದ್ದ್ದು, ಈ ಬೀದಿನಾಯಿಗಳಿಂದ ಸಾರ್ವಜನಿಕರಿಗೆ ಇದುವರೆಗೆ ಯಾವುದೇ ತೊಂದರೆಯಾಗುತ್ತಿರಲಿಲ್ಲವಾದರೂ ಕೆಲ ಕಿಡಿಗೇಡಿಗಳು ವಿನಾಕಾರಣ ಅನ್ನದಲ್ಲಿ ವಿಷಬೆರೆಸಿ ನಾಯಿಗಳ ಸಾವಿಗೆ ಕಾರಣವಾಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ನಮ್ಮ ಬೀದಿಯಲ್ಲಿ ತಿರುಗಾಡಿಕೊಂಡಿದ್ದ ನಾಯಿಗಳು ಇದುವರೆಗೆ ಯಾರಿಗೂ ತೊಂದರೆ ನೀಡಿರಲಿಲ್ಲ, ಬೀದಿನಾಯಿಗಳಿಂದಾಗಿ ನಮ್ಮ ಬೀದಿಗೆ ಕಳ್ಳಕಾಕರಿಂದ ರಕ್ಷಣೆ ಸಿಗುತ್ತಿತ್ತು. ಮುಗ್ಧ ಶ್ವಾನಗಳನ್ನು ಯಾವ ಉದ್ದೇಶದಿಂದ ಕೊಂದಿದ್ದಾರೋ ಗೊತ್ತಿಲ್ಲ. ಅವರಿಗೆ ಸೂಕ್ತ ಶಿಕ್ಷೆಯಾಗಬೇಕೆಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ. ರಾತ್ರಿವೇಳೆ ಅಪರಿಚಿತರು ಮತ್ತು ಕಳ್ಳಕಾಕರಿಗೆ ಈ ನಾಯಿಗಳು ಅಡ್ಡಿಯಾಗಿದ್ದು ದುಷ್ಕರ್ಮಿಗಳು ತಮ್ಮ ಕೆಲಸಗಳಿಗೆ ಅನುಕೂಲವಾಗಲೆಂದು ಈ ಕೃತ್ಯ ಎಸಗಿರಬಹುದೆಂದು ಸ್ಥಳೀಯರು ಸಂದೇಹ ವ್ಯಕ್ತಪಡಿಸಿದ್ದು ಘಟನೆಗೆ ಸಂಬಂಧಿಸಿದಂತೆ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸರ್ಕಾರವೇ ಬೀದಿನಾಯಿಗಳ ರಕ್ಷಣೆಗೆ ಕಾನೂನು ಹೊರಡಿಸಿದೆ. ಆದರೆ ಅನ್ನದಲ್ಲಿ ವಿಷ ಬೆರೆಸಿ 15ಕ್ಕೂ ಹೆಚ್ಚು ನಾಯಿಗಳ ಮಾರಣ ಹೋಮ ನಡೆಸಿರುವುದು ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

