ಜಿಲ್ಲಾ ಸುದ್ದಿ

ಉಗ್ರ ಜಾವೇದ್ ರಫೀಕ್ ಮನೆಯಲ್ಲೇ ತನಿಖೆ ನಡೆಸಿದ ಅಧಿಕಾರಿಗಳು

ಜ.23 ರಂದು ಪರಪ್ಪನ ಅಗ್ರಹಾರದ ವಿನಾಯಕ ನಗರದ ಅಪಾರ್ಟ್ ಮೆಂಟ್ ವೊಂದರಲ್ಲಿ ಬಂಧನಕ್ಕೊಳಗಾದ ಜಾವೇದ್ ರಫೀಕ್ ನನ್ನು ವಿಶೇಷ ಭದ್ರತೆಯಲ್ಲಿ ಕರೆತಂದು...

ಉಗ್ರ ಜಾವೇದ್ ರಫೀಕ್ ಮನೆಯಲ್ಲೇ ತನಿಖೆ ನಡೆಸಿದ ಅಧಿಕಾರಿಗಳು
ಚರ್ಚ್ ಸ್ಟ್ರೀಟ್
Published On :

ಬೆಂಗಳೂರು: ಜ.23 ರಂದು ಪರಪ್ಪನ ಅಗ್ರಹಾರದ ವಿನಾಯಕ ನಗರದ ಅಪಾರ್ಟ್ ಮೆಂಟ್ ವೊಂದರಲ್ಲಿ ಬಂಧನಕ್ಕೊಳಗಾದ ಜಾವೇದ್ ರಫೀಕ್ ನನ್ನು ವಿಶೇಷ ಭದ್ರತೆಯಲ್ಲಿ ಕರೆತಂದು , ಆತನ ಮನೆಯಲ್ಲೇ 45 ನಿಮಿಷಗಳ ಕಾಲ ವಿಚಾರಣೆ ನಡೆಸಿದ್ದಾರೆ. ಮನೆಯಲ್ಲಿದ್ದ ಅನೇಕ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಶನಿವಾರ ಸುಮಾರು 50 ಮಂದಿ ಪೊಲೀಸರ ಬಿಗಿ ಭದ್ರತೆಯಲ್ಲಿ  ಪರಪ್ಪನ ಅಗ್ರಹಾರದಲ್ಲಿನ ವಿನಾಯಕ ನಗರದ ಮನೆಗೆ ಕರೆದುಕೊಂಡು ಹೋದ ಅಧಿಕಾರಿಗಳು ಸುಮಾರು 45 ನಿಮಿಷಗಳ ಕಾಲ ಮನೆಯನ್ನು ತಪಾಸಣೆಗೊಳಪಡಿಸಿದ್ದರು.


ನಂತರ ಮನೆಯಲ್ಲಿದ್ದ ಸಿಡಿ ಸೇರಿದಂತೆ ಪ್ರಮುಖ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕಳೆದ 2014 ರ ಚರ್ಚ್ ಸ್ಟ್ರೀಟ್ ಸ್ಫೋಟ ಪ್ರಕರಣ ಹಾಗೂ ಫ್ರಾನ್ಸ್  ಉಪರಾಯಭಾರ ಕಚೇರಿಗೆ ಬೆದರಿಕೆ ಪತ್ರವನ್ನು ತನ್ನ ಮನೆಯಲ್ಲೇ ತಯಾರು ಮಾಡಿದ್ದ ಎಂದು ತನಿಖಾಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ಶಂಕಿತ ಉಗ್ರ ರಫೀಕ್ ನನ್ನು ಜನವರಿ 23 ರಂದು ತೆಲಂಗಾಣದ ಸಿಐಸಿ ಹಾಗೂ ಎನ್ ಐಎ ಅಧಿಕಾರಿಗಳು ಬಂಧಿಸಿದ್ದರು.  ಆತನನ್ನು ಮಡಿವಾಳದ ವಿಚಾರಣಾ ಕೇಂದ್ರದಲ್ಲಿ ವಿಚಾರಣೆಗೊಳಪಡಿಸಿದ್ದ ಅಧಿಕಾರಿಗಳು ಆತನು ಮಾಡಿರುವ ಒಂದೊಂದೇ ಉಗ್ರ ಚಟುವಟಿಕೆಗಳನ್ನು ಬಯಲಿಗೆಳೆಯುತ್ತಿದ್ದಾರೆ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.