ಪಿಎಚ್‌ಡಿ ಗಾಗಿ 10 ಸಾವಿರ ವಿದ್ಯಾರ್ಥಿಗಳನ್ನು ಅಮೆರಿಕಾಗೆ ಕಳುಹಿಸಿ: ನಾರಾಯಣ ಮೂರ್ತಿ
ಅಮೆರಿಕಾದಲ್ಲಿ ಪಿಎಚ್ ಡಿ ಅಧ್ಯಯನ ಮಾಡಲು ಪ್ರತಿವರ್ಷ ಭಾರತದಿಂದ 10 ಸಾವಿರ ವಿದ್ಯಾರ್ಥಿಗಳನ್ನು ಕಳುಹಿಸಿ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ...

ಬೆಂಗಳೂರು: ಅಮೆರಿಕಾದಲ್ಲಿ ಪಿಎಚ್ ಡಿ ಅಧ್ಯಯನ ಮಾಡಲು ಪ್ರತಿವರ್ಷ ಭಾರತದಿಂದ 10 ಸಾವಿರ ವಿದ್ಯಾರ್ಥಿಗಳನ್ನು ಕಳುಹಿಸಿ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಇಂಡೋ ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ ಕಾನ್‌ಕ್ಲೇವ್ 2020 ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಸ್‌ಟಿಇಎಮ್(ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ಶಿಕ್ಷಣಕ್ಕೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಪಿಎಚ್‌ಡಿ ಮಾಡಲು ನೆರವಾಗುವಂಥ ಒಪ್ಪಂದವನ್ನು ಭಾರತ ಮತ್ತು ಅಮೆರಿಕ ಮಾಡಬೇಕು. ಅದಕ್ಕೆ ಸಂಬಂದಿಸಿದಂತೆ ಪ್ರತಿ ವರ್ಷ 10 ಸಾವಿರದಂತೆ ಮುಂದಿನ 50 ವರ್ಷ ಈ ಕೆಲಸ ಮುಂದುವರಿಯಬೇಕು ಎಂದು ಮೂರ್ತಿ ಸಲಹೆ ನೀಡಿದ್ದಾರೆ.
ಪ್ರತಿ ವರ್ಷ 10 ಸಾವಿರ ವಿದ್ಯಾರ್ಥಿಗಳನ್ನು ಅಮೆರಿಕಾಗೆ ಕಳುಹಿಸುವುದರಿಂದ ಭಾರತದ ಸರಕಾರಕ್ಕೆ ವರ್ಷಕ್ಕೆ 500 ಕೋಟಿ ರೂ .ಖರ್ಚು ಬರಬಹುದು. ಆದರೆ ಭಾರತದ ನಾನಾ ಕ್ಷೇತ್ರಗಳಲ್ಲಿ ಇದರಿಂದ ದೊರೆಯುವ ಲಾಭವನ್ನು ಪರಿಗಣಿಸಿದರೆ ಅದೊಂದು ದೊಡ್ಡ ಮೊತ್ತವಾಗುವುದಿಲ್ಲ. ದೇಶದ ಹಲವು ದೊಡ್ಡ ಸಮಸ್ಯೆಗಳಿಗೆ ಹೊಸ ಪರಿಹಾರಗಳನ್ನು ಕಂಡುಕೊಳ್ಳಲು ಇದು ಸಹಾಯವಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಸ್ವದೇಶಕ್ಕೆ ಮರಳಿ ಇಲ್ಲೇ ಸೇವೆ ಸಲ್ಲಿಸುವಂತೆ ಪಿಎಚ್‌ಡಿ ಮಾಡಲು ಅಮೆರಿಕಕ್ಕೆ ತೆರಳುವ ವಿದ್ಯಾರ್ಥಿಗಳ ಜತೆ ಹಾಗೂ ಅಮೆರಿಕದ ಜತೆ ರ್ಕಾರ ಮೊದಲೇ ಒಪ್ಪಂದ ಮಾಡಿಕೊಳ್ಳಬೇಕು. ಹಾಗೂ ಕನಿಷ್ಠ 10 ವರ್ಷ ವಿದ್ಯಾರ್ಥಿಗಳು ಕೆಲಸ ಮಾಡಲೇ ಬೇಕೆಂದು ಒಪ್ಪಂದ ಮಾಡಿಕೊಳ್ಳುವುದು ಸೂಕ್ತ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


