ಕಿಮ್ಸ್ ಆಸ್ಪತ್ರೆಯಲ್ಲಿ ಮಗು ಅಪಹರಿಸಿದ್ದಾಕೆ ಆತ್ಮಹತ್ಯೆಗೆ ಶರಣು..!
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮಗುವನ್ನು ಅಪಹರಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಮಹಿಳೆ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಆತ್ಮಹತ್ಯೆ ಶರಣಾದ ಘಟನೆ ಗುರುವಾರ ನಡೆದಿದೆ...

ಧಾರವಾಡ: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮಗುವನ್ನು ಅಪಹರಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಮಹಿಳೆ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಆತ್ಮಹತ್ಯೆ ಶರಣಾದ ಘಟನೆ ಗುರುವಾರ ನಡೆದಿದೆ.
ಧಾರವಾಡದ ಲಕ್ಷ್ಮೀಸಿಂಗನಕೇರಿ ನಿವಾಸಿ ಸುರೇಖಾ ಕಾಲಾಡಿ (24 ವರ್ಷ) ಮಾನಸಿಕವಾಗಿ ನೊಂದು ಧಾರವಾಡ ಕೇಂದ್ರ ಕಾರಾಗೃಹದ ಶೌಚಾಲಯಲ್ಲಿ ನೇಣಿಗೆ ಶರಣಾಗಿದ್ದಾರೆ. ಎರಡು ಬಾರಿ ಗರ್ಭಪಾತ ಆದ ಮೇಲೆ ಮಗು ಹೆರುವ ಆಸೆ ಕೈಗೂಡದೆ ಬೇಸತ್ತಿದ್ದ ಸುರೇಖಾ ಬೇರೊಬ್ಬರ ಮಗುವನ್ನು ಅಪಹರಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು.
ಹುಬ್ಳಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ನರ್ಸ್ ವೇಷದಲ್ಲಿ ಬಂದು ಅನಿತಾ ಎಂಬುವವರ 10 ದಿನಗಳ ಹೆಣ್ಣುಮಗುವನ್ನು ಅಪಹರಿಸಿದ್ದರು ಎಂದು ಮೊದಲು ವರದಿಯಾಗಿತ್ತು. ಆದರೆ ಈಕೆ ಮಗುವನ್ನು ಕದ್ದಿರಲಿಲ್ಲ. ಬದಲಾಗಿ ಮಗುವಿನ ಅಜ್ಜಿಯೇ ರು.500ಗೆ ಮಾರಾಟ ಮಾಡಿದ್ದರು ಎಂದು ಸುರೇಖಾ ಪತಿ ಆರೋಪ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


