ಜಿಲ್ಲಾ ಸುದ್ದಿ

ಬೆಂಗಳೂರು ವಿಮಾನದಲ್ಲಿ ಹುಸಿ ಬಾಂಬ್ ಪತ್ರ!

ಜೈಪುರದಿಂದ ಬೆಂಗಳೂರು ಅಂತಾರಾಷ್ಟ್ರೀಯ ನಿಲ್ದಾಣಕ್ಕೆಬಂದ ಏರ್ ಏಷ್ಯಾ ವಿಿಮಾನದಲ್ಲಿ ಬಾಂಬ್ ಇದಡಲಾಗಿದೆ ಎಂದು ಬರೆದ ಪತ್ರ ದೊರೆತ ಪರಿಣಾಮ...

ಬೆಂಗಳೂರು ವಿಮಾನದಲ್ಲಿ ಹುಸಿ ಬಾಂಬ್ ಪತ್ರ!
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು:  ಜೈಪುರದಿಂದ ಬೆಂಗಳೂರು ಅಂತಾರಾಷ್ಟ್ರೀಯ ನಿಲ್ದಾಣಕ್ಕೆಬಂದ ಏರ್ ಏಷ್ಯಾ ವಿಿಮಾನದಲ್ಲಿ ಬಾಂಬ್ ಇದಡಲಾಗಿದೆ ಎಂದು ಬರೆದ ಪತ್ರ ದೊರೆತ ಪರಿಣಾಮ ವಿಮಾನ ನಿಲ್ದಾಣದಲ್ಲಿ ಕೆಲ ಕಾಲ ಆತಂಕ ನಿರ್ಮಾಣವಾಗಿತ್ತು.

ವಿಷಯ ಅರಿತ  ಸ್ಥಳಕ್ಕಾಗಮಿಸಿದ ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ವಿಮಾನವನ್ನು ಸಂಪೂರ್ಣವಾಗಿ, ತಪಾಸಣೆ ನಡೆಸಿ ಬಾಂಬ್ ಇಲ್ಲದಿರುವುದನ್ನು ಖಚಿತ ಪಡಿಸಿದರು.

ಏರ್ ಏಷ್ಯಾ ವಿಮಾನ ಬುಧವಾರ ಜೈಪುರದಿಂದ 160 ಮಂದಿ ಪ್ರಯಾಣಿಕರನ್ನು ಹೊತ್ತು ಮಧ್ಯಾಹ್ನ 12.05ಕ್ಕ ಬೆಂಗಳೂರಿಗೆ ಬಂದಿದೆ. ಈ ವೇಳೆ ಸಿಬ್ಬಂದಿ ವಿಮಾನದ ಶೌಚಾಲಯ ಕೊಠಡಿ ಸ್ವಚ್ಚಗೊಳಿಸಲು ಮುಂದಾಗಿದ್ದು ಪತ್ರವೊಂದು ಪತ್ತೆಯಾಗಿದೆ.  ತಕ್ಷಣ ಸಿಬ್ಬಂದಿ ಆ ಪತ್ರವನ್ನು ಅಧಿಕಾರಿಗಳಿಗೆ ತಲುಪಿಸಿದರು.  ವಿಮಾನದಲ್ಲಿ ಬಾಂಬ್ ಇಟ್ಟಿದ್ದನ್ನು ಇನ್ನು ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಳ್ಳಲಿದೆ ಎಂದು ಬರೆದಿದ್ದ ಪತ್ರವನ್ನು ಓದಿದ ಅಧಿಕಾರಿಗಳು ಕೆಲ ಕ್ಷಣ ಹೌಹಾರಿದರು.

ತಪಾಸಣೆ ಬಳಿಕ ಇದು ಹುಸಿ ಬಾಂಬ್ ಪತ್ರವೆಂದು ಖಚಿತವಾಯಿತು. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಈಶಾನ್ಯ ವಿಭಾಗದ ಡಿಸಿಪಿ ಹರ್ಷ ಅವರು ವಿಮಾನ ಪರಿಶೀಲನೆ ನಡೆಸಿದರು. ಅಂತೆಯೇ ವಿಮಾನದ 160 ಮಂದಿ ಪ್ರಯಾಣಿಕರನ್ನು ವಿಚಾರಣೆ ನಡೆಸಿ ಬಳಿಕ ಹೊರಕ್ಕೆ ಬಿಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.