ಜಿಲ್ಲಾ ಸುದ್ದಿ

ಕಳಾಹೀನವಾದ ರಾಜಭವನ

ಪ್ರತಿ ವರ್ಷ ಗಣರಾಜ್ಯೋತ್ಸವ ಸಂದರ್ಭದಲ್ಲಿ ಗಣ್ಯರಿಂದ ಗಿಜಿಗುಡುವ ರಾಜಭವನ ಮಂಗಳವಾರ ಕಳಾಹೀನವಾಗಿತ್ತು...

ಕಳಾಹೀನವಾದ ರಾಜಭವನ
(ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ಪ್ರತಿ ವರ್ಷ ಗಣರಾಜ್ಯೋತ್ಸವ ಸಂದರ್ಭದಲ್ಲಿ ಗಣ್ಯರಿಂದ ಗಿಜಿಗುಡುವ ರಾಜಭವನ ಮಂಗಳವಾರ ಕಳಾಹೀನವಾಗಿತ್ತು.

ರಾಜಭವನದಲ್ಲಿ ಏರ್ಪಡಿಸಿದ್ದ 67ನೇ ಗಣರಾಜ್ಯೋತ್ಸವಕ್ಕೆ ಭಾರೀ ಬಿಗಿ ಭದ್ರತೆ ಒದಗಿಸಿದ್ದರಿಂದ ಪೊಲೀಸರೇ ತುಂಬಿದ್ದರು. ಇದರಿಂದಾಗಿ ಕಾರ್ಯಕ್ರಮಕ್ಕೆ ಜನರೇ ಇಲ್ಲದೆ ನೀರಸವಾಗಿತ್ತು. ಖಾಲಿ ಕುರ್ಚಿಗಳದ್ದೇ ಕಾರುಬಾರಾಗಿತ್ತು.

ಈ ಬಾರಿ 67ನೇ ಗಣರಾಜ್ಯೋತ್ಸವದ ಅಂಗವಾಗಿ ಉಪಹಾರ ಕೂಟ ಏರ್ಪಡಿಸಲಾಗಿತ್ತು. ಆದರೆ ಬಂದಿದ್ದವರು ಬೆರಳೆಣಿಕೆಯಷ್ಟು ಸ್ವಾತಂತ್ರ್ಯ ಹೋರಾಟಗಾರರೂ ಅಷ್ಟಾಗಿ ಕಾಣಿಸಲಿಲ್ಲ. ಬದಲಾಗಿ ರಾಜ್ಯಪಾಲ ವಿ.ಆರ್.ವಾಲಾ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರ ಕೇಂದ್ರಿತವಾಗಿದ್ದ ಕಾರ್ಯಕ್ರಮ ಕೇವಲ 15 ನಿಮಿಷದಲ್ಲಿ ಮುಗಿಯಿತು.

ಸಚಿವರಾದ ಕೆ.ಜೆ.ಜಾರ್ಜ್, ಮಾಜಿ ರಾಜ್ಯಸಭಾ ಸದಸ್ಯ ನ್ಯಾ.ರಾಮಾಜೋಯಿಸ್ ಬಿಟ್ಟರೆ ಬೇರೆ ಗಣ್ಯರೂ ಕಾಣಲಿಲ್ಲ. ಪ್ರತಿಪಕ್ಷಗಳ ನಾಯಕರೂ ಸುಳಿಯಲಿಲ್ಲ. ರಾಜ್ಯಪಾಲ ವಿ.ಆರ್.ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಭಾಪತಿ ಡಿ.ಎಚ್.ಶಂಕರಮೂರ್ತಿ ಕಾರ್ಯಕ್ರಮಕ್ಕೆ ಆಗಮಿಸಿಸುತ್ತಿದ್ದಂತೆ ರಾಷ್ಟ್ರಗೀತೆ ಮೊಳಗಿತು. ನಂತರ ವೇದಿಕೆಯಲ್ಲಿದ್ದವರು ಪರಸ್ಪರ ಶುಭಕೋರಿದರು. ಮತ್ತೆ ರಾಷ್ಟ್ರಗೀತೆ ನಂತರ ಕಾರ್ಯಕ್ರಮ ಮುಕ್ತಾಯ.

ರಾಜಭವನದ ಎಲ್ಲೆಡೆ ಬಿಗಿ ಭದ್ರತೆ ಮಾಡಿದ್ದರಿಂದ ಕಾರ್ಯಕ್ರಮಕ್ಕೆ ಬಂದಿದ್ದವರು ಸಭಾಂಗಣಕ್ಕೆ ಬರಲು ಆಗಲಿಲ್ಲ. ಸ್ವಾಂತ್ರ ಹೋರಾಟಗಾರರಿಗೂ ಸಾಧ್ಯವಾಗಲಿಲ್ಲ. ಇನ್ನು ಮಾಧ್ಯಮಗಳಿಗೆ ಪ್ರವೇಶವೇ ಇರಲಿಲ್ಲ. ಹೀಗಾಗಿ ಗಾಜಿನ ಮನೆ ಬಣಗುಡುತ್ತಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.