ಜಿಲ್ಲಾ ಸುದ್ದಿ

ಪುತ್ರನ ನೆನೆದು ಭಾವುಕರಾದ ಹುತಾತ್ಮ ಲೆ.ಕ.ನಿರಂಜನ್ ತಂದೆ!

ಕಳೆದ ವರ್ಷ ರಾಜ್ ಪಥ್ ನಲ್ಲಿ ಪುತ್ರ ಗಣತಂತ್ರ ಪರೇಡ್ ನಲ್ಲಿ ಹೆಜ್ಜೆ ಹಾಕಿದ್ದನ್ನು ಕಂಡು ಸಂತಸದಲ್ಲಿ ತೇಲುತ್ತಿದ್ದೇ. ಈ ಬಾರಿ ಅದೇ ಪುತ್ರನ ವೀರಮರಣಕ್ಕೆ ಮಿಡಿದು ಗೌರವ ವಂದನೆ ಸಲ್ಲಿಸಬೇಕಾಗಿ ಬಂದಿದೆ...'...

ಪುತ್ರನ ನೆನೆದು ಭಾವುಕರಾದ ಹುತಾತ್ಮ ಲೆ.ಕ.ನಿರಂಜನ್ ತಂದೆ!
ಪುತ್ರನ ನೆನೆದು ಭಾವುಕರಾದ ಹುತಾತ್ಮ ಲೆ.ಕ.ನಿರಂಜನ್ ತಂದೆ!
Published On :

ಬೆಂಗಳೂರು: ಕಳೆದ ವರ್ಷ ರಾಜ್ ಪಥ್ ನಲ್ಲಿ ಪುತ್ರ ಗಣತಂತ್ರ ಪರೇಡ್ ನಲ್ಲಿ ಹೆಜ್ಜೆ ಹಾಕಿದ್ದನ್ನು ಕಂಡು ಸಂತಸದಲ್ಲಿ ತೇಲುತ್ತಿದ್ದೇ. ಈ ಬಾರಿ ಅದೇ ಪುತ್ರನ ವೀರಮರಣಕ್ಕೆ ಮಿಡಿದು ಗೌರವ ವಂದನೆ ಸಲ್ಲಿಸಬೇಕಾಗಿ ಬಂದಿದೆ...'

ಕಣ್ಣಾಲಿಗಳಲ್ಲಿ ತುಂಬಿದ್ದ ಹನಿಗಳನ್ನು ಹತ್ತಿಕ್ಕುತ್ತ ಭಾವುಕರಾದವರು ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆ ಮೇಲೆ ನುಸುಳುಕೋರ ಭಯೋತ್ಪಾದಕರು ನಡೆಸಿದ ದಾಳಿ ವೇಳೆ ಹತರಾದ ಬೆಂಗಳೂರಿನ ಲೆ.ಕ.ನಿರಂಜನ್ ತಂದೆ ಶಿವರಾಜ್. ನ್ಯೂ ಹಾರಿಜಾನ್ ಕಾಲೇಜಿನ ಸಮಾರಂಭದಲ್ಲಿ ಕಳೆದ ವರ್ಷದ ಗಣರಾಜ್ಯೋತ್ಸವದಲ್ಲಿ ಪುತ್ರ ನಿರಂಜನ್ ಪಥ ಸಂಚಲನ ನಡೆಸಿದ್ದನ್ನು ರಾಜ್ ಪಥ್ ನಲ್ಲಿ ಕಂಡ ನೆನಪು ಮೆಲುಕು ಹಾಕಿದರು.

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಕಳೆದ ಬಾರಿಯ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದರು. ನಿರಂಜನ್ ಸ್ವತಃ ನಮ್ಮನ್ನು ದೆಹಲಿಗೆ ಕರೆಸಿಕೊಂಡು ಗಣತಂತ್ರ ಪರೇಡ್ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದ. ಅವನೇ ನಮ್ಮನ್ನು ಮುಂಜಾವಿನ ಕೊರೆಯುವ ಚಳೆಯಲ್ಲಿ ರಾಜ್ ಪಥ್ ಗೆ ಕರೆದೊಯ್ದಿದ್ದ. ರಾಜ್ ಪಥ್ ನಲ್ಲಿ ಮಗನ ಪಥ ಸಂಚಲನವನ್ನು ನೋಡುವುದು ನಮ್ಮ ಕನಸಾಗಿತ್ತು ಎಂದು ಶಿವರಾಜ್ ಕಣ್ಣೀರಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.