ಜಿಲ್ಲಾ ಸುದ್ದಿ

ಸಹ ಪ್ರಾಧ್ಯಾಪಕಿಗೆ ಕಿರುಕುಳ: ಮೈಸೂರು ವಿವಿ ಕುಲ ಪತಿಗೆ ತರಾಟೆ

ವಿಧಾನ ಸೌಧದಲ್ಲಿ ಸೋಮವಾರ ನಡೆೆದ ವಿಧಾನ ಮಂಡಲದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಮಿತಿ ಸಭೆಯಲ್ಲಿ ರೋಹಿತ್ ವೇಮುಲ ಆತ್ಮಹತ್ಯೆ ...

ಸಹ ಪ್ರಾಧ್ಯಾಪಕಿಗೆ ಕಿರುಕುಳ: ಮೈಸೂರು ವಿವಿ ಕುಲ ಪತಿಗೆ ತರಾಟೆ
ಮೈಸೂರು ವಿವಿ
Published On :

ಬೆಂಗಳೂರು: ವಿಧಾನ ಸೌಧದಲ್ಲಿ ಸೋಮವಾರ ನಡೆೆದ ವಿಧಾನ ಮಂಡಲದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಮಿತಿ ಸಭೆಯಲ್ಲಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರತಿನಿಧಿಸಿತು. ಹಾಗೆಯೇ ಯುವರಾಜ ಕಾಲೇಜಿನ ಸಹ ಪ್ರಾಧ್ಯಾಪಕಿ ಮೇಲಿನ ದೌರ್ಜನ್ಯಕ್ಕೂ ಆಕ್ರೋಶ ವ್ಯಕ್ತ ವಾಯಿತು.

ಇಷ್ಟು ದಿನ ಸಭೆಗೆ ಗೈರು ಹಾಜರಾಗುತ್ತಿದ್ದ ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್ ರಂಗಪ್ಪ, ಕುಲ ಸಚಿವ ಪ್ರೊ. ಸಿ ಬಸವರಾಜು, ಮುಕ್ತ ವಿವಿ ಕುಲಪತಿ, ಎಂಜಿ ಕೃಷ್ಣನ್ ಮತ್ತು ಪಿಎಸ್ ನಾಯಕ್ ಸೋಮವಾರ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಗೆ ಆಗಮಿಸಿದ್ದರು. ಈ ಸಭೆಯಲ್ಲಿ ಯುವರಾಜ ಕಾಲೇಜಿನ ಸಹ ಪ್ರಾಧ್ಯಾಪಕಿಯೊಬ್ಬರ ಮೇಲಿನ ದೌರ್ಜನ್ಯ ಕುರಿತು ಚರ್ಚೆ ನಡೆಯಿತು. ಅಷ್ಟೇ ಅಲ್ಲ ಈ ಬಗ್ಗೆ 3 ವಾರಗಳ ಒಳಗಾಗಿ ಸೂಕ್ತ ಉತ್ತರ ನೀಡುವಂತೆ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಯುವರಾಜ ಕಾಲೇಜಿನ ಸಹ ಪ್ರಾಧ್ಯಾಪಕಿ ಆರ್. ಚಂದಾವರ್  ವಿದ್ಯಾ ಅವರ ಮೇಲೆ ದೌರ್ಜನ್ಯದ  ಪ್ರಕರಣಧ ಬಗ್ಗೆ ಸುದೀರ್ಘ 2 ತಾಸು ಚರ್ಚೆ ನಡೆಸಿದ ಸಮಿತಿ ಸದಸ್ಯರು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಆಮೆಗಳ ಮೇಲೆ ತಾವು ಕೈಗೊಂಡಿರುವ ಎರಡು ಸಂಶೋಧನೆಗಳ ಹಿನ್ನೆಲೆಯಲ್ಲಿ  ಯುವರಾಜ ಕಾಲೇಜು ಪ್ರಾಂಶುಪಾಲ ಪ್ರೊ. ಎಚ್. ನಂಜೇಗೌಡ, ಸಹಾಯಕ ಪ್ರಾಧ್ಯಾಪಕರಾದ ಜಯರಾಮ್ ಮತ್ತು ಪ್ರತಿಭಾ ಕಿರುಕುಳ ನೀಡುತ್ತಿದ್ದಾರೆ ಎಂದು ತಿಳಿದಾಗ ಎಲ್ಲಾ ಸದಸ್ಯರು ಇದಕ್ಕೆಲ್ಲಾ ಹೇಗೆ ಅವಕಾಶ ನೀಡಿದಿರಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು.  ಹಾಗೆಯೇ ಒಂದೊಮ್ಮೆ ಬೇಸತ್ತ ಮಹಿಳೆ ಹೈದರಾಬಾದ್ ನ ರೋಹಿತ್ ಅವರಂತೆ ಸಾವಿಗೆ ಶರಣಾದರೇ ಯಾರು ಹೊಣೆ ಎಂದು ಸಿಟ್ಟಿನಿಂದ ಪ್ರಶ್ನಿಸಿದರು. ಇದರ ಮಧ್ಯೆ ವಿಧಾನ ಮಂಡಲದ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸಮಿತಿ ಮತ್ತು ಅದು ನಡೆಸುವ ವಿಚಾರಣೆ ಕುರಿತು ಲಘುವಾಗಿ ಮಾತನಾಡಿದ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರನ್ನು ತರಾಟೆಗೆ ತೆಗೆದುಕೊಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.