ಜಿಲ್ಲಾ ಸುದ್ದಿ

ಕಾವೇರಿದ ಕಸಾಪ ಚುನಾವಣೆ ಕಣ

ಉಪ ಸಮರ, ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಚುನಾವಣೆಗಳ ಮಧ್ಯೆ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಕೂಡಾ ಸದ್ದು ಮಾಡುತ್ತಿದೆ. ಅದರಲ್ಲೂ...

ಕಾವೇರಿದ ಕಸಾಪ ಚುನಾವಣೆ ಕಣ
ಕನ್ನಡ ಸಾಹಿತ್ಯ ಪರಿಷತ್
Published On :
ಬೆಂಗಳೂರು:  ಉಪ ಸಮರ, ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಚುನಾವಣೆಗಳ ಮಧ್ಯೆ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಕೂಡಾ ಸದ್ದು ಮಾಡುತ್ತಿದೆ. ಅದರಲ್ಲೂ ಬೆಂಗಳೂರು  ನಗರ ಜಿಲ್ಲಾ  ಘಟಕದಲ್ಲಿ ಚುನಾವಣೆ ಕಾವು ನಿಧಾನವಾಗಿ ಏರತೊಡಗಿದೆ. ಅಭ್ಯರ್ಥಿಗಳು ಮತದಾರರನ್ನು ಓಲೈಸಿಕೊಳ್ಳುವ ಎಲ್ಲ ರೀತಿಯ ಪ್ರಯತ್ನಗಳನ್ನೂ ನಡೆಸುವ ಮೂಲಕ ಅಭ್ಯರ್ಥಿಗಳು ಪೈಪೋಟಿಗೆ ಇಳಿದಿದ್ದಾರೆ. 
ಕಸಾಪ ಅಧ್ಯಕ್ಷ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಜ. 25 ಕೊನೆಯ ದಿನವಾಗಿದ್ದು, ನಾಮಪತ್ರ ಸಲ್ಲಿಕೆ ಕಾರ್ಯಗಳು ನಡೆಯುತ್ತಲೇ ಇದೆ. ಈಗಾಗಲೇ ರಾಜ್ಯಾಧ್ಯಕ್ಷ ಸ್ಥಾನಗಳಿಗೆ ಐದು ಹಾಗೂ ಬೆಂಗಳೂರು ನಗರ ಮತ್ತು ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ  ನಾಲ್ಕು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.  ಚುನಾವಣೆ ಫೆ. 28 ರಂದು ನಡೆಯುವುದರಿಂದ ಕಣದಲ್ಲಿರುವ ಅಭ್ಯರ್ಥಿಗಳು ಪ್ರಚಾರದಲ್ಲಿ ಮುಳುಗಿದ್ದಾರೆ. ಕೆಲವರು ಮತ ಯಾಚಿಸಲು ಮತಪತ್ರಗಳು, ವಿನೂತನ ರೀತಿಯ ಗುರುತಿನ ಪತ್ರಗಳು, ಕ್ಯಾಲೆಂಡರ್ ಹೀಗೆ ವಿವಿಧ ಪ್ರಚಾರದ ಸಾಮಾಗ್ರಿಗಳನ್ನು ಬಳಸುತ್ತಿದ್ದಾರೆ. ನಗರ ಮತ್ತು ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ  ಈ ಬಾರಿ ಇಬ್ಬರು ಒಕ್ಕಲಿಗ ಹಾಗೂ ಲಿಂಗಾಯತ ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆಯುತ್ತಿದ್ದು,  ತಂತಮ್ಮ ಬಣಗಳ   ನಾಯಕರನ್ನು ಒಗ್ಗೂಡಿಸಲು ಲಾಬಿ ನಡೆಯುತ್ತಿದೆ.
ಈಗಾಗಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಐದು ಹಾಗೂ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ನಾಲ್ಕು ನಾಮಪತ್ರಗಳು ಸಲ್ಲಿಕೆಯಾಗಿದ್ದು, ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಕ್ಕೆ ಸೇರಿದ ತಲಾ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪ್ರಕಾಶ್ ಮೂರ್ತಿ, ಮಾಯಣ್ಣ, ಪಿನಾಕಪಾಣಿ ಮತ್ತು ನೇ. ಭಾ ರಾಮಲಿಂಗಶೆಟ್ಟಿ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ತಮ್ಮ ತಮ್ಮ ಸಮುದಾಯಗಳನ್ನು ಸೆಳೆಯಲು ಕಾರ್ಯತಂತ್ರ ರೂಪಿಸಿಕೊಂಡಿದ್ದಾರೆ.
ಬಿಬಿಎಂಪಿ, ಬೆಂಗಳೂರು ಪೂರ್ಪ ಮತ್ತು ದಕ್ಷಿಣ ಒಳಗೊಂಡಂತೆ ಕಸಾಪ ವ್ಯಾಪ್ತಿಯಲ್ಲಿ ಒಟ್ಟು 25725 ಮತದಾರರಿದ್ದಾರೆ. ಆನೇಕಲ್ ತಾಲಾಕು ಅತೀ ಹೆಚ್ಚು (987) ಮತಗಳನ್ನು ಹೊಂದಿದೆ. ಬೆಂಗಳೂರು ನಗರ ಮತ್ತು ಜಿಲ್ಲಾ ಮಟ್ಟದಲ್ಲಿ  ಒಟ್ಟು  26714 ಮತದಾರರಿದ್ದಾರೆ. ಬೆಂಗಳೂರು ನಗರದಲ್ಲೇ 21 ಮತಗಟ್ಟೆಗಳಿವೆ. ಆನೇಕಲ್‌ನಲ್ಲಿ ತಹಸೀಲ್ದಾರ್ ಕಚೇರಿ ಹಾಗೂ ಬಸವನಗುಡಿ ನ್ಯಾಷನಲ್ ಹೈಸ್ಕೂಲ್‌ನಲ್ಲಿ ಬೆಂಗಳೂರು ನಗರ ಮತಗಟ್ಟೆ ವ್ಯವಸ್ಥೆ ಮಾಡಲಾಗಿದೆ.
ಈ ಬಾರಿ ಜಿಲ್ಲಾಮಟ್ಟದ ಅಧ್ಯಕ್ಷ ಸ್ಥಾನಕ್ಕೆ ಗುಲಾಬಿ ಬಣ್ಣ, ತಾಲೂಕು ಅಧ್ಯಕ್ಷ ಸ್ಥಾನಗಳಿಗೆ ಬಿಳಿ ಬಣ್ಣದ ಮತದಾನ ಪತ್ರಗಳನ್ನು ನೀಡಲಾಗುವುದು. ಚಿಹ್ನೆ ರಹಿತ, ಪಕ್ಷಾತೀತ, ವಿಷಯಾಧಾರಿತ ಚುನಾವಣೆಗೆ ಯೋಜನೆ ರೂಪಿಸಲಾಗಿದೆ. ಹೊರ ದೇಶದ ಕಸಾಪ ಸದಸ್ಯರಿಗೆ ಬಿಳಿಪತ್ರಗಳು, ಗಡಿ ಮತದಾರರಿಗೆ ಗುಲಾಬಿ (ಪಿಂಕ್ ) ಬಣ್ಣದ ಪತ್ರಗಳನ್ನು ಕಳಿಸಲಾಗುತ್ತದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.