ಕೆಲಸವಿಲ್ಲದೆ ಕನ್ನಡ ಹೋರಾಟಕ್ಕಿಳಿದೆ
ಕೆಟ್ಟದ್ದು ಮಾಡದೆ ತುಂಬಾ ಒಳ್ಳೆ ವಿದ್ಯಾರ್ಥಿಯಾಗಿ ಕನಿಷ್ಠ ಅಂಕ ಗಳಿಸಿ ನೆಮ್ಮದಿಯಲ್ಲಿದ್ದೆ...ಪರೀಕ್ಷೆ ಬರೆದು ಮೌಲ್ಯವಿಲ್ಲದೇ ಪಾಸಾದವನು ನಾನೊಬ್ಬನೇ..

Published On :
ಬೆಂಗಳೂರು: ಕೆಟ್ಟದ್ದು ಮಾಡದೆ ತುಂಬಾ ಒಳ್ಳೆ ವಿದ್ಯಾರ್ಥಿಯಾಗಿ ಕನಿಷ್ಠ ಅಂಕ ಗಳಿಸಿ ನೆಮ್ಮದಿಯಲ್ಲಿದ್ದೆ...ಪರೀಕ್ಷೆ ಬರೆದು ಮೌಲ್ಯವಿಲ್ಲದೇ ಪಾಸಾದವನು ನಾನೊಬ್ಬನೇ.. ಕೆಲಸ ಸಿಗದೇ ಇದ್ದಾಗ ಕನ್ನಡಪರ ಹೋರಾಟಕ್ಕೆ ಧುಮುಕಿದೆ. ಇಷ್ಟೆಲ್ಲಾ ಮಾಡಿ ನಾನು ಮುಖ್ಯಮಂತ್ರಿಯಾದೆ. ಬಯಲಂಗಳದಿ ಬದುಕುತ್ತಿರುವವರನ್ನು ಮನೆಯಂಗಳಕ್ಕೆ ಕರೆತಂದು ಮನದಾಳದ ಬಯಲಾಗದ ಮಾತನ್ನು ಹೇಳಲು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ..ಹೀಗೆ ತಮ್ಮ ಅಂತರಂಗದಿ ಬಚ್ಚಿಟ್ಟುಕೊಂಡಿದ್ದ ಕ್ಷಣಗಳನ್ನು ಬಿಚ್ಚಿಟ್ಟು ನೆರೆದಿದ್ದವರನ್ನು ಮನಸಾರೆ ನಗಿಸಿದರು ರಂಗಕರ್ಮಿ ಮುಖ್ಯಮಂತ್ರಿ ಚಂದ್ರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮಾತುಕತೆ 172 ರ ತಿಂಗಳ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು , ತಮ್ಮ ಬಾಳ ಪಯಣದ ರಸಮಯ ಗಳಿಗೆಗಳನ್ನು ಹೇಳುವ ಮೂಲಕ ತುಂಬಿದ ಸಭಾಂಗಣವನ್ನು ಮಂತ್ರ ಮುಗ್ಧರನ್ನಾಗಿ ಸಿದರು. ಹಾಗೇ ಸಂವಾದದಲ್ಲಿ ಮದುರಾದ ಪ್ರಶ್ನೆಗಳಿಗೂ ಹಾಸ್ಯಧಾಟಿಯಲ್ಲಿ ಉತ್ತರಿಸಿದರು.
ತ್ರಿಭಾಷಾ ಸೂತ್ರ: ಐಟಿಬಿಟಿ ಕ್ಷೇತ್ರಗಳಲ್ಲಿ ಕನ್ನಡ ಅನುಷ್ಠಾನವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಯಾವ ಕ್ರಮಕೈಗೊಳ್ಳಬಹುದು ಎಂಬ ಪ್ರಶ್ನೆಗೆ ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕೆಂಬ ಉದ್ದೇಶ ಐಟಿಬಿಟಿ ಬರುವ ಮೊದಲೇ ಉತ್ತು. ಈಗನ ಕಾಲಘಟ್ಟಕ್ಕೆ ವರದಿ ಅನುಷ್ಠಾನ ಅಗತ್ಯವಾಗಿದೆ. ಎಲ್ಲ ರೀತಿಯ ಕೈಗಾರಿಕೆಗಳಲ್ಲೂ ಕನ್ನಡ ಬಳಕೆಯನ್ನು ಹೇಗೆ ಜಾರಿಗೆ ತರಬೇಕೆಂಬ ಬಗ್ಗೆ ಪಟ್ಟಿ ಮಾಡಿದ್ದೇನೆ. ಅದನ್ನು ಮರುಪರಿಶೀಲಿಸಬೇಕಿದೆ. ಕನ್ನಡ ಭಾಷೆ ಜತೆಗೆ ತ್ರಿಭಾಷಾ ಸೂತ್ರ ಅನ್ವಯವಾಗಬೇಕೆಂಬುದೇ ನಮ್ಮ ಬೇಡಿಕೆ ಎಂದರು.
ನೀವು ಪ್ರಾದಿಕಾರ ಅಧ್ಯಕ್ಷರಾಗಿದ್ದಾಗ ಪ್ರಸ್ತಾಪವಾಗಿದ್ದ ಬನಾರಸ್‌ನಲ್ಲಿ ಕನ್ನಡ ಪೀಠಿ ಸ್ಥಾಪಿಸುವ ಕಾರ್ಯ ಎಲ್ಲಿಯವರೆಗೆ ಬಂದಿದೆ? ಆ ನಿಟ್ಟಿನಲ್ಲಿ ಏನಾದರೂ ಪ್ರಯತ್ನ ನಡೆಯುತ್ತಿದೆಯೇ? ಎಂದು ಲೇಖಕಿ ಕಮಲಾ ಹಂಪನ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಚಂದ್ರು, ನನ್ನ ಅಧಿಕಾರವಧಿಯಲ್ಲಿ ಸರ್ಕಾರಕ್ಕೆ ಎರಡ್ಮೂರು ಬಾರಿ ಈ ವಿಚಾರವಾಗಿ ಪತ್ರ ಬರೆಯಲಾಗಿತ್ತು. ಬನಾರಸ್ ವಿವಿ ಕೂಡಾ ಇದಕ್ಕೆ ಸ್ಪಂದಿಸಲಿಲ್ಲ. ಹಣದ ಕೊರತೆ, ವಿದ್ಯಾರ್ಥಿಗಳು ಅಧ್ಯಾಪಕರ ಕೊರತೆಯೋ ತಿಳಿದು ಅದನ್ನು ಪೂರೈಸಬೇಕು. ಇದನ್ನು ಗಂಭೀರವಾಗಿ ತೆಗೆದುಕೊಂಡು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.
ಪ್ರಾಥಮಿಕ ಹಂತದಲ್ಲಿ ಕಡ್ಡಾಯ ಶಿಕ್ಷಣ ನಿಯಮವಿದೆ. ಹಳ್ಳಿಗಳಲ್ಲಿ ಆಂಗ್ಲಭಾಷಾ ಶಾಲೆಗಳು ಹೆಚ್ಚುತ್ತಿವೆ. ಇಂಥಾ ಪರಿಸ್ಥಿತಿದೆ ಯಾರು ಕಾರಣ? ಎಂದು ಶ್ರೀನಿವಾಸ ಮೇಸ್ಟ್ರು ಕೇಳಿದಾಗ ಸರ್ಕಾರಿ ಶಾಲೆಗಳು ಸೌಲಭ್ಯಗಳಿಲ್ಲದೇ ಸೊರಗುತ್ತಿವೆ. ಇಂಥ ಸ್ಥಿತಿಯಲ್ಲಿ ಪೋಷಕರ ಸಮಸ್ಯೆಯೂ ಇದೆ. ಖಾಸಗಿಯವರ ದಂಧೆಯೂ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ಮಾತೃಭಾಷೆಗೆ ಸಂಬಂದಿಸಿದಂತೆ ಒತ್ತಡ ಹೇರುವ ಹಕ್ಕು ಸರ್ಕಾರಕ್ಕಿಲ್ಲ. ಅದು ಪೋಷಕರ ವಿವೇಚನೆಗೆ ಬಿಟ್ಟ ವಿಚಾರ ಎಂದು ತೀರ್ಪು ನೀಡಿದೆ. ಗ್ರಾಮೀಣ ಪ್ರದೇಶದ 29 ಸಾವಿರ ಶಾಲೆಗಳಿಗೆ ಏಕಾಏರಿ ಸೌಲಭ್ಯಗಳನ್ನು ನೀಡಲು ತೊಂದರೆಯಾಗುತ್ತಿದೆ. ಸರ್ಕಾರಿ ಖಾಸಗಿ ಶಾಲೆಗಳಲ್ಲಿ ಕನ್ನಡ ಭಾಷಾ ನೀತಿ ಜಾರಿಗೆ ತಂದಾಗ ಏಕ ರೀತಿ ಶಿಕ್ಷಣ ರೂಪುಗೊಳ್ಳುತ್ತದೆ. ಈ ನಿಟ್ಟಿನಲ್ಲಿ ನಿರಂತರ ಹೋರಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ. ಎ. ದಯಾನಂದ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


