ಜಿಲ್ಲಾ ಸುದ್ದಿ

ಕರ್ನಾಟಕ ರಾಜ್ಯವೆಂದರೆ ಒಂದೇ ಬೇರ್ಪಡಿಸಬೇಡಿ ಎಂದ ಕೋರ್ಟ್

ಕರ್ನಾಟಕ ರಾಜ್ಯ ವೆಂದರೆ ಎಲ್ಲವೂ ಒಂದೇ, ಇದನ್ನು ಹೈದ್ರಾಬಾದ್ ಕರ್ನಾಟಕ ಮುಂಬೈ ಕರ್ನಾಟಕ ಎಂದು ಏಕೆ ಬೇರ್ಪಡಿಸುತ್ತೀರಿ? ಎಂದು ಹೈಕೋರ್ಟ್

ಕರ್ನಾಟಕ ರಾಜ್ಯವೆಂದರೆ ಒಂದೇ ಬೇರ್ಪಡಿಸಬೇಡಿ ಎಂದ ಕೋರ್ಟ್
ಕರ್ನಾಟಕ ಹೈ ಕೋರ್ಟ್
Published On :

ಬೆಂಗಳೂರು : ಕರ್ನಾಟಕ ರಾಜ್ಯ ವೆಂದರೆ ಎಲ್ಲವೂ ಒಂದೇ, ಇದನ್ನು ಹೈದ್ರಾಬಾದ್ ಕರ್ನಾಟಕ ಮುಂಬೈ ಕರ್ನಾಟಕ ಎಂದು ಏಕೆ  ಬೇರ್ಪಡಿಸುತ್ತೀರಿ? ಎಂದು ಹೈಕೋರ್ಟ್ ಪ್ರಶ್ನಿಸಿದೆ.

ರಾಯಚೂರಲ್ಲಿ  ಇಂಡಿಯನ್ ಇನ್ಸ್‍ಸ್ಟಿಟೂಟ್ ಆಫ್ ಟೆಕ್ನಾಲಜಿ (ಐಐಟಿ) ಸ್ಥಾಪಿಸಲು ಕೇಂದ್ರ, ರಾಜ್ಯ ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹಂಗಾಮಿ ಮುಖ್ಯ-ನ್ಯಾಯ ಮೂರ್ತಿ ಎಸ್.ಕೆ. ಮುಖ ರ್ಜಿ ಮತ್ತು ನ್ಯಾ.ರವಿ ಮಳೀಮಠ ಅವರಿದ್ದ ಪೀಠ, ಕರ್ನಾಟಕವೆಂದರೇ ಒಂದೇ ಅದನ್ನು ಎರಡು ಹೆಸರುಗಳಲ್ಲಿ ಕರೆಯುವುದು ಬೇಡ ಎಂದು ಹೇಳಿತು. ಅಲ್ಲದೆ, ಧಾರವಾಡದಲ್ಲಿ ಐಐಟಿ ಸ್ಥಾಪನೆಗೆ ಸರ್ಕಾರಗಳು  ನಿರ್ಧರಿಸಿವೆ, ಈ ರೀತಿಯ ನಿರ್ಧಾರಗಳಲ್ಲಿ ಕೋರ್ಟ್ ಮಧ್ಯ ಪ್ರವೇಶ ಮಾಡಲ್ಲ  ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊ ಳಿಸಿದೆ.

ಡಾ.ಡಿ.ಎಂ.ನಂಜುಂಡಪ್ಪ 2000 ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿ ಪ್ರಾದೇಶಿಕ ಅಸಮತೋಲನ ನಿವಾರಿಸಲು ಕಲ್ಬುರ್ಗಿಯ ಕೇಂದ್ರಿಯ ವಿದ್ಯಾಲಯ, ರಾಯಚೂರಿನಲ್ಲಿ ಐಐಟಿ ಮತ್ತು ಧಾರವಾಡದಲ್ಲಿ ಐಐಎಂ ಸ್ಥಾಪಿಸಲು ನಿರ್ಣಯ ಕೈಗೊಂಡಿದ್ದರು. ಜತೆಗೆ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದರು.

ಅದರಂತೆ ಜಗದೀಶ್ ಶೆಟ್ಟರ್  ಸಿಎಂ ಆಗಿದ್ದ ವೇಳೆ ಸಚಿವ ಸಂಪುಟವು ರಾಯಚೂರಿನಲ್ಲಿ ಐಐಟಿ ಸ್ಥಾಪಿಸಲು ನಿರ್ಣಯ  ಕೈಗೊಳ್ಳಲಾಗಿತ್ತು  ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.