ಸಾವಿಗೆ ಕೇಂದ್ರವೇ ಹೊಣೆ
ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ಸಾವಿಗೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಎಐಡಿಎಸ್‍ಒ ರಾಜ್ಯಾಧ್ಯಕ್ಷ ಎನ್. ರಾಜಶೇಖರ್ ಆರೋಪಿಸಿದರು...

ಬೆಂಗಳೂರು: ಹೈದರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ಸಾವಿಗೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಎಐಡಿಎಸ್‍ಒ ರಾಜ್ಯಾಧ್ಯಕ್ಷ ಎನ್. ರಾಜಶೇಖರ್ ಆರೋಪಿಸಿದರು.
ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಎಐಡಿಎಸ್‍ಒ ಹಾಗೂ ಎಐಡಿವೈಒ ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ಪ್ರತಿಭಟನೆ ವೇಳೆ ಮಾತನಾಡಿ, ರೋಹಿತ್ ಸಾವು ಆಶ್ಚರ್ಯಕರ ಮತ್ತು ಅಷ್ಟೇ ಘೋರ. ಕೇಂದ್ರ ಸರ್ಕಾರವು ದೇಶಾದ್ಯಂತ ಆರ್‍ಎಸ್‍ಎಸ್, ಸಂಘ ಪರಿವಾರದ ಅಮಾನುಷ ಕ್ರಿಯೆಗಳನ್ನು ಪೊ್ರೀತ್ಸಾಹಿಸುತಿರುವುದಕ್ಕೆ ಇದು ನಿದರ್ಶನವಾಗಿದೆ. ಈ ಸಾವಿಗೆ ಬಿಜೆಪಿ ಆರ್‍ಎಸ್‍ಎಸ್ ಸಂಘ ಪರಿವಾರದವರೇ ನೇರ ಹೊಣೆ. ಇದು ಪ್ರಜಾತಂತ್ರದ ಕೊಲೆಯಾಗಿದೆ ಎಂದು ಹೇಳಿದರು.
ಯಾವುದೇ ವ್ಯಕ್ತಿಯುಕೋಮುವಾದಿ ರಾಜಕೀಯದ ವಿರುದ್ಧ ದಿಟ್ಟತನದಿಂದ ಧ್ವನಿ ಎತ್ತಿದರೆ, ಆತನಿಗೆ ದೇಶದ್ರೋಹಿ, ಭಯೋತ್ಪಾದಕ ಎಂಬ ಹಣೆಪಟ್ಟಿ ಹಚ್ಚಿ, ಕಿರುಕುಳ
ನೀಡಲಾಗುತ್ತಿದೆ. ರೋಹಿತ್ ಆತ್ಮಕ್ಕೆ ಶಾಂತಿ ಸಿಗಲೆಂದು ಸಂತಾಪ ಸೂಚಿಸುವ ಜತೆಗೆ ಇಡೀ ದೇಶ ಬಿಜೆಪಿ-ಆರ್‍ಎಸ್ ಎಸ್‍ನ ಕ್ರೂರ ಕೋಮುವಾದಿ ಫ್ಯಾಸಿಸ್ಟ್ ಅಟ್ಟಹಾಸವನ್ನು
ಹಿಮ್ಮೆಟ್ಟಿಸುವುದಕ್ಕೆ ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೋಹಿತ್ ವೆಮುಲಾನ ಸಾವಿಗೆ ಕಾರಣರಾದ ಹೈದರಾಬಾದ್ ವಿಶ್ವದ್ಯಾಲಯದ ಕುಲಪತಿ, ಕೇಂದ್ರಸಚಿವರು ಈ ಕೂಡಲೇ ರಾಜಿನಾಮೆ ನೀಡಬೇಕು. ವಿದ್ಯಾರ್ಥಿಯ ಮನೆಯವರಿಗೆ ಪರಿಹಾರ ಹಾಗೂ ಆತನಿಗೆ ಸಂದಬೇಕಾಗಿರುವ ವಿದ್ಯಾರ್ಥಿ ವೇತನವನ್ನು ವಿತರಿಸಬೇಕು ಎಂದು ಆಗ್ರಹಿಸಿದರು.
ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಜಯಣ್ಣ ಮಾತನಾಡಿ, ಈ ಘಟನೆಯಲ್ಲಿ ಸರ್ಕಾರ ಹಾಗೂ ವಿಶ್ವವಿದ್ಯಾಲಯ ಹೊಂದಿರುವ ಪ್ರತೀಕಾರದ ಮನೋಭಾವ ಸ್ಪಷ್ಟವಾಗಿ ಕಾಣುತ್ತಿದೆ. ಇದರಿಂದ
ವಿಶ್ವವಿದ್ಯಾಲಯದ ಸ್ವಾಯತ್ತತೆಗೆ ಧಕ್ಕೆ ಬರಲಿದೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಎಐಡಿಎಸ್‍ಒ ಜಿಲ್ಲಾ ಉಪಾಧ್ಯಕ್ಷ ಅಜಯ್ ಕಾಮತ್ ಮತ್ತು ಹಲವಾರು ಕಾರ್ಯಕರ್ತರು
ಪಾಲ್ಗೊಂಡಿದ್ದರು.
ಬಂಧನಕ್ಕೆ ಆಗ್ರಹ: ವಿದ್ಯಾರ್ಥಿ ರೋಹಿತ್ ಆತ್ಮಹತ್ಯೆಗೆ ಕಾರಣರಾದ ಹೈದರಾಬಾದ್ ವಿವಿ ಕುಲಪತಿಯನ್ನು ಕೂಡಲೇ ಬಂಧಿಸಬೇಕು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಎಂ. ವೆಂಕಟಸ್ವಾಮಿ ಆಗ್ರಹಿಸಿದ್ದಾರೆ.
ಹೋರಾಟ ನಿರತ ವಿದ್ಯಾರ್ಥಿ ವೇಮುಲ ರೋಹಿತ್ ಅವರನ್ನು ಎಬಿವಿಪಿ ಒತ್ತಡಕ್ಕೆ ಮಣಿದು ಕುಲಪತಿಯವರು ಹಾಸ್ಟೆಲ್‍ನಿಂದ ಹೊರಹಾಕಿ ದ್ದರಿಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಕುಲಪತಿಯವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


