ಖಾಸಗಿಯಲ್ಲೂ ಮೀಸಲು ಅಗತ್ಯ
ಒಬಿಸಿ, ಎಸ್‍ಸಿ ಮತ್ತು ಎಸ್‍ಟಿ ವರ್ಗಗಳಿಗೆ ಖಾಸಗಿ ಕ್ಷೇತ್ರದಲ್ಲೂ ಮೀಸಲು ಸೌಲಭ್ಯ ಒದಗಿಸಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪೊ್ರ.ಬಿ.ತಿಮ್ಮೇಗೌಡ ಹೇಳಿದ್ದಾರೆ...

ಬೆಂಗಳೂರು: ಒಬಿಸಿ, ಎಸ್‍ಸಿ ಮತ್ತು ಎಸ್‍ಟಿ ವರ್ಗಗಳಿಗೆ ಖಾಸಗಿ ಕ್ಷೇತ್ರದಲ್ಲೂ ಮೀಸಲು ಸೌಲಭ್ಯ ಒದಗಿಸಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪೊ್ರ.ಬಿ.ತಿಮ್ಮೇಗೌಡ ಹೇಳಿದ್ದಾರೆ.
ಬಹುಜನ ವಿದ್ಯಾರ್ಥಿ ಸಂಘ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಒಬಿಸಿ, ಎಸ್‍ಸಿ ಮತ್ತು ಎಸ್‍ಟಿ ವರ್ಗಗಳಿಗೆ ಖಾಸಗಿ ವಲಯದಲ್ಲಿ ಮೀಸಲಾತಿ ನೀಡಿದರೆ ನಿರೀಕ್ಷಿತ ಸಮಾನತೆ ಸಿಗುತ್ತದೆ ಎಂದರು.
ಖಾಸಗಿ ವಲಯದಲ್ಲಿ ಮೀಸಲಾತಿ ಬಗ್ಗೆ ಹಲವು ಚರ್ಚೆಗಳಾಗಿವೆ. ಇದರ ಬಗ್ಗೆ ಬದ್ಧತೆ ಮೂಡಿಸುವ ಕೆಲಸ ಆಗಬೇಕು. ಖಾಸಗಿಯಲ್ಲಿ ಮೀಸಲಾತಿ ನೀಡಿದರೆ ನಷ್ಟ ಉಂಟಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಸ್ಪರ್ಧಾತ್ಮಕ ಕೋರ್ಸ್‍ಗಳಿಗೆ ತರಬೇತಿ ಪಡೆಯುವಂತೆ ಖಾಸಗಿ ವಲಯದಲ್ಲಿ ಉದ್ಯೋಗ ಪಡೆಯಲು ಸೂಕ್ತ ತರಬೇತಿ ಪಡೆಯಬೇಕು. ಕೌಶಲ ಅಭಿವೃದ್ಧಿಯಿಂದ ಖಾಸಗಿ ರಂಗದಲ್ಲಿ ಕೆಲಸ ಪಡೆಯಬೇಕು. ಈ ದಿಸೆಯಲ್ಲಿ ಉದ್ಯೋಗಕ್ಕೆ ಪೂರಕವಾದ ಕೋಸ್ರ್ ಗಳನ್ನು ಅಭ್ಯಸಿಸಬೇಕು ಎಂದರು.
ಸರ್ಕಾರಿ ವಲಯದಲ್ಲಿ ಕೆಲಸ ಕಡಿಮೆಯಿದೆ, ಖಾಸಗಿ ಕ್ಷೇತ್ರದಲ್ಲಿ ಕೆಲಸ ಹೆಚ್ಚಿದೆ. ಹೀಗಾಗಿ ವಿದ್ಯಾರ್ಥಿಗಳು ಒಂದೇ ಕೋರ್ಸ್ ಮಾಡುವುದರಿಂದ ಪ್ರಯೋಜನವಿಲ್ಲ. ಅದಕ್ಕೆ ಪರ್ಯಾಯವಾಗಿ ಮತ್ತೊಂದು ಕೋರ್ಸ್‍ನ ಪದವಿ ಪಡೆದರೆ ಅನುಕೂಲವಾಗುತ್ತದೆ. ಇದರಿಂದ ಕೌಶಲ ಅಭಿವೃದ್ಧಿ ಹೆಚ್ಚಾಗುತ್ತದೆ. ಜೊತೆಗೆ ಖಾಸಗಿ ರಂಗದಲ್ಲಿ ಕೆಲಸ ಸಿಗುತ್ತದೆ ಎಂದ ಅವರು, ಅಭಿವೃದ್ಧಿ ಲಾಭವನ್ನು ಎಲ್ಲರಿಗೂ ಸಮನಾಗಿ ಹಂಚಬೇಕು. ಎಸ್‍ಸಿ, ಎಸ್‍ಟಿ ಮತ್ತು ಒಬಿಸಿ ಸಮುದಾಯದವರು ಇತರೆ ವರ್ಗಗಳಿಗಿಂದ ಶ್ರೇಷ್ಠವಾಗಿ ಬೆಳೆಯಬೇಕು. ಇದಕ್ಕೆ ತಕ್ಕಂತೆ ಕೌಶಲ ಅಭಿವೃದ್ಧಿ ಹೆಚ್ಚಿಸಿಕೊಳ್ಳಿ ಎಂದು ಸಲಹೆ ನೀಡಿದರು. ರಾಜ್ಯಗಳಿಗೆ ಹೂಡಿಕೆದಾರರು ಬರುವಂತೆ ಮಾಡಬೇಕು. ಜೊತೆಗೆ ತಮ್ಮಲ್ಲಿರುವ ಪ್ರತಿಭೆಗಳಿಗೆ ಅವಕಾಶ ಕೊಡಿ ಎಂದು ಸರ್ಕಾರದ ಮಟ್ಟದಲ್ಲಿ ಬೇಡಿಕೆ ಇಡಬೇಕು. ಆಗ ಮಾತ್ರ ಸಮಾನ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪತ್ರಕರ್ತ ಪಾರ್ವತೀಶ್ ಮಾತನಾಡಿ, ಪ್ರಸ್ತುತ ಅಂಬೇಡ್ಕರ್ ಉದ್ದೇಶ ಬುಡಮೇಲು ಆಗುತ್ತಿದೆ. ಮೀಸಲು ಇನ್ನೂ ಸಮರ್ಪಕವಾಗಿಲ್ಲ. ಅಂದರ ಅಂಕಿ ಅಂಶಗಳ ಬಗ್ಗೆ ಮಾಹಿತಿ ಪಡೆದು, ಮೀಸಲು ಬಗ್ಗೆ ಪತ್ತೆ ಹಚ್ಚುವಂತ ಕೆಲಸ ಆಗಬೇಕು. ಮೀಸಲಾತಿ ಪತ್ತೆ ಹಚ್ಚಲು ಯೋಜನೆಯೊಂದನ್ನು ರೂಪಿಸಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಕು.ವಿನುತಾ ಖಾಸಗಿ ವಲಯದಲ್ಲಿನ ಮೀಸಲಾತಿ ಬಗ್ಗೆ ಪ್ರಬಂಧ ಮಂಡಿಸಿದರು. ಕಾರ್ಯಕ್ರಮದಲ್ಲಿ ಬಹುಜನ ವಿದ್ಯಾರ್ಥಿ ಸಂಘದ ಸಂಯೋಜಕ ಪ್ರೊ.ಎ.ಹರಿದಾಸ್, ವಕೀಲ ಶ್ರೀಧರ್ ಪ್ರಭು, ಪತ್ರಕರ್ತ ಶಿವಸುಂದರ್, ವಿಜಯï ಕುಮಾರ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


